Thursday, 18th January 2018  

Vijayavani

ಸೈಟ್‌ಗಾಗಿ ಸಾಹಿತ್ಯ ಬರೀತಾರೆ - ತಲೆಬುಡ ಇಲ್ಲದ ಸಂದೇಶಗಳನ್ನ ಕೊಡ್ತಾರೆ - ಬುದ್ಧಿಜೀವಿಗಳ ಮೇಲೆ ಮುಗಿಬಿದ್ದ ಕಾಂಟ್ರವರ್ಸಿ ಸಚಿವ        ಪೂಜೆ ಮಾಡಲು ಬಂದವನು ಮಗಳನ್ನೇ ಕೇಳ್ದ - ಜನರ ಕೈಗೆ ಸಿಕ್ಕಿ ಹಣ್ಣುಗಾಯಾದ ಪಿಳ್ಳಂಗೋವಿ ಬಾಬಾ - ಚಿತ್ರದುರ್ಗದ ಕಂಚಿಪುರ ಗ್ರಾಮದಲ್ಲಿ ಡೋಂಗಿಗೆ ಥಳಿತ        14 ತಿಂಗಳಿಂದ ಸಂಬಳ ನೀಡದ ಸಕ್ಕರೆ ಕಾರ್ಖಾನೆ - ಚಿಕಿತ್ಸೆಗೆ ಹಣವಿಲ್ಲದೇ ಮಗು ಕಳೆದುಕೊಂಡ ಕಾರ್ಮಿಕ - ರಾಜಕಾರಣಿಗಳ ಕಿತ್ತಾಟಕ್ಕೆ ಹಸುಗೂಸು ಬಲಿ        ಐಪಿಎಸ್‌ ಅಧಿಕಾರಿಗಳಿಗೆ ಸಿಎಂ, ಗೃಹ ಸಚಿವರ ತರಾಟೆ - ಮತೀಯವಾದಿಗಳ ಮೇಲೆ ಕ್ರಮಕ್ಕೆ ಸೂಚನೆ - ವಾರ್ಷಿಕ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕ್ಲಾಸ್        ಗುಜರಾತ್​​​​​ನಲ್ಲಿ ಇಸ್ರೇಲ್​ ಪ್ರಧಾನಿ - ಮೋದಿ ಜತೆಗೆ ಕಾರ್‌ನಲ್ಲಿ ಜಂಟಿ ರೋಡ್‌ ಶೋ - ಸಾಬರಮತಿ ಆಶ್ರಮದಲ್ಲಿ ಚರಕ ಸುತ್ತಿದ ನೆತನ್ಯಾಹು       
Breaking News :

ನಂದು ಸ್ವಾತಿ ನಕ್ಷತ್ರ, ನಂಗೆ ಮಾಟ ಮಂತ್ರ ಮಾಡ್ಸಿದ್ರೂ ಏನಾಗಲ್ಲ: ಎಚ್​ ಡಿ ರೇವಣ್ಣ

Monday, 09.10.2017, 5:41 PM       No Comments

ಹಾಸನ: ಸಾಬ್ರು ವಿಷಯ ಮಾತಾಡಿದ್ರೆ ಏನೊ ಮಾಡ್ತಾರೆ ಅಂದ್ರೆ ಮಾಡ್ಲಿ ಮತ್ತೆ ನಾನು ನೋಡ್ತಿನಿ ನನಗೇನು ಆಗಲ್ಲ. ಯಾವುದೇ ಮಾಟ ಮಂತ್ರ ಮಾಡಿದ್ರೂ ಏನಾಗಲ್ಲ ಯಾಕೆಂದರೆ ನನ್ನದು ಸ್ವಾತಿ ನಕ್ಷತ್ರ ಹೀಗಂದಿದ್ದು ಯಾರಪ್ಪ ಎಂದು ಯೋಚಿಸುತ್ತಿದ್ದರ ಅವರೇ ಎಚ್​ ಡಿ ರೇವಣ್ಣ ಅವರು.

ಹಾಸನದಲ್ಲಿ ಇಂದು ಮಾತನಾಡಿದ ಅವರು ನನಗೆ ಮಾಟಮಂತ್ರ ಮಾಡಿದ್ರೆ ಅವರಿಗೆ ರಿವರ್ಸ್​ ಹೊಡೆಯುತ್ತೆ. ಜೆಡಿಎಸ್​ ಕೆರೆ ಅಂತ ಸಮುದ್ರದಲ್ಲಿ ಈಜಲು ಹೋಗಿದ್ದಾರೆ. ನಮ್ಮ ಪಕ್ಷ ಕೆರೆ, ಕೆರೆಯಲ್ಲಿ ಕೊರವ ಗಿರ್ವ ಇರುತ್ತೆ, ಅವರು ಸಮುದ್ರಕ್ಕೆ ಈಜಲು ಹೋಗಿದ್ದಾರೆ. ಅಲ್ಲಿ ಸೀಗ್ಡಿಯಂತ ಕಾಸ್ಟ್ಲಿ ಮೀನು ಸಿಗುತ್ತೆ ಅಂತ ಹೋಗಿದ್ದಾರೆ. ಇದನ್ನೆಲ್ಲಾ ರಾಹುಲ್, ಸೋನಿಯಾ ಕೋಲಿಂಗ್ ಗ್ಲಾಸ್ ಹಾಕಾಂಡು ನೋಡಲಿ ಎಂದು ವ್ಯಂಗ್ಯವಾಡಿದ್ದಾರೆ.

ಜಮೀರ್​​ಗೆ ನೈತಿಕತೆ ಇದ್ದರೆ JDSಗೆ ರಾಜಿನಾಮೆ ನೀಡಲಿ. ಆಮೇಲೆ ನಮ್ಮ ಮೇಲೆ ಬಾಣಬಿರುಸು ಬಿಡಲಿ. ಜಮೀರ್​ ಜೆಡಿಎಸ್​ ಅನ್ನವನ್ನ ತಿನ್ನುತ್ತಿದ್ದಾರೆ. JDS ವಿರುದ್ಧ ವೋಟು ಹಾಕಿದಾಗಲೆ ರಾಜಿನಾಮೆ ನೀಡ್ಬೇಕಿತ್ತು. ನನ್ನ ವಿರುದ್ಧ ಮೀಟ್ರು ತೋರಿಸೋದು ಬೇಡ. ಕಾಂಗ್ರೆಸ್​ಗೆ ಮೀಟ್ರು ಕಮ್ಮಿಯಾಗಿದೆ ಅಲ್ಲಿ ತೋರಿಸಲಿ ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿಗೆ ಟೋಪಿ ಹಾಕಿದವರು ಅವರು, ಜಮೀರ್ ಹುಟ್ಟೂರು ಕುಣಿಗಲ್​​ನಲ್ಲಿ ಬಂದು ಸ್ಪರ್ಧಿಸಲಿ. ನಾನು ನನ್ನ ಹುಟ್ಟೂರಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಮಂತ್ರಿ ಮಾಡಿದ ಕುಮಾರಸ್ವಾಮಿಗೆ ಮೋಸ ಮಾಡಿದ್ರು. ಇಂಥವ್ರನ್ನ ಸೇರಿಸಿಕೊಳ್ಳೋ ಮೊದ್ಲು ಪರಮೇಶ್ವರ್ ಯೋಚಿಸಬೇಕಿತ್ತು ಎಂದು ಹರಿಹಾಯ್ದಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top