Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ಹೌಸ್​ಫುಲ್ ಬಳಗದಿಂದ ಸಂಜಯ್ ದತ್ ಔಟ್!

Thursday, 12.07.2018, 3:03 AM       No Comments

ಲಂಡನ್​ನಲ್ಲಿ ‘ಹೌಸ್​ಫುಲ್ 4’ ಚಿತ್ರದ ಶೂಟಿಂಗ್ ಆರಂಭಗೊಂಡಿದೆ. ಚಿತ್ರದಲ್ಲಿ ಸಂಜಯ್ ದತ್ ಕೂಡ ಬಣ್ಣ ಹಚ್ಚಲಿದ್ದಾರೆ ಎಂಬ ಮಾತುಗಳು ಈ ಮೊದಲು ಕೇಳಿ ಬಂದಿದ್ದವು. ಆದರೆ ಕೊನೇ ಕ್ಷಣದಲ್ಲಿ ಸಂಜಯ್ ಅವರನ್ನು ಕೈ ಬಿಡಲಾಗಿದ್ದು, ಅವರ ಸ್ಥಾನಕ್ಕೆ ನಾನಾ ಪಾಟೇಕರ್ ಚಿತ್ರತಂಡ ಸೇರಿಕೊಂಡಿದ್ದಾರೆ.

ಸಾಜಿದ್ ನಾಡಿಯಾಡ್​ವಾಲಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂಜಯ್ ಹಾಗೂ ಸಾಜಿದ್ ಮೊದಲಿನಿಂದಲೂ ಉತ್ತಮ ಗೆಳೆಯರು. ಹಾಗಿದ್ದರೂ ಸಂಜಯ್ ದತ್ ಚಿತ್ರದಿಂದ ಹಿಂದೆ ಸರಿದಿದ್ದೇಕೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ. ಸಂಜಯ್ ‘ಹೌಸ್​ಫುಲ್ 4’ನಿಂದ ಹೊರಗುಳಿಯಲು ರಾಜ್​ಕುಮಾರ್ ಹಿರಾನಿ ನಿರ್ದೇಶನದ ‘ಸಂಜು’ ಚಿತ್ರ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ. ‘ಸಂಜು’ ಹಿಟ್ ಆದ ನಂತರದಲ್ಲಿ ಸಂಜಯ್ ಖ್ಯಾತಿ ದುಪ್ಪಟ್ಟಾಗಿದೆ. ಜತೆಗೆ ಅವರು ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ. ಹೀಗಾಗಿ ಈ ಚಿತ್ರಕ್ಕಾಗಿ ದತ್ ಹೆಚ್ಚು ಹಣ ಕೇಳಿದ್ದಾರಂತೆ. ಈ ಕಾರಣಕ್ಕೆ ನಾನಾ ಪಾಟೇಕರ್​ಗೆ ಮಣೆ ಹಾಕಿದ್ದಾರೆ ಸಾಜಿದ್. ಆದರೆ, ಈ ನಿರ್ಧಾರದ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಹರಿಬಿಟ್ಟಿಲ್ಲ. ಸಾಜಿದ್ ಖಾನ್ ನಿರ್ದೇಶನ ಮಾಡುತ್ತಿರುವ ‘ಹೌಸ್​ಫುಲ್ 4’ನಲ್ಲಿ ಅಕ್ಷಯ್ ಕುಮಾರ್, ರಿತೇಶ್ ದೇಶ್​ವುುಖ್, ಪೂಜಾ ಹೆಗ್ಡೆ ಮೊದಲಾದವರು ನಟಿಸುತ್ತಿದ್ದಾರೆ.

ಬರಲಿದೆ ಸಂಜಯ್ ಆತ್ಮಕಥೆ: ಸಂಜಯ್ ದತ್ ಆತ್ಮಕಥೆ ಪ್ರಕಟಿಸುವುದಾಗಿ ಹಾರ್ಪರ್ ಕಾಲಿನ್ಸ್ ಸಂಸ್ಥೆ ಬುಧವಾರ ಘೋಷಣೆ ಮಾಡಿದೆ. ದತ್ ಮುಂದಿನ ಜುಲೈ 29ರಂದು 60ನೇ ವರ್ಷಕ್ಕೆ ಕಾಲಿಡುತ್ತಾರೆ. ಈ ವೇಳೆ ಅದನ್ನು ಬಿಡುಗಡೆ ಮಾಡಲಾಗುತ್ತದೆಯಂತೆ. ಜೈಲಿನಲ್ಲಿ ಕಳೆದ ಯಾತನೆ ಸೇರಿ ಈ ಮೊದಲು ಬಹಿರಂಗಗೊಳ್ಳದ ವಿಚಾರಗಳು ಈ ಆಟೋಬಯೋಗ್ರಫಿಯಲ್ಲಿ ಇರಲಿದೆಯಂತೆ. –ಏಜೆನ್ಸೀಸ್

Leave a Reply

Your email address will not be published. Required fields are marked *

Back To Top