Thursday, 21st June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ಸೆ. 27ರಿಂದ ಕುಮಾರಸ್ವಾಮಿಗಳ 151ನೇ ಜನ್ಮದಿನೋತ್ಸವ

Monday, 11.06.2018, 9:53 PM       No Comments

ಶಿಕಾರಿಪುರ: ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳ 151ನೇ ಜನ್ಮ ದಿನೋತ್ಸವ ಕಾರ್ಯಕ್ರಮಗಳು ಈ ವರ್ಷದ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 7ರವರೆಗೆ ಶಿಕಾರಿಪುರದಲ್ಲಿ ನಡೆಯಲಿದೆ.

ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳ 151ನೇ ಜನ್ಮ ದಿನಾಚರಣೆ ಸಂಬಂಧ ತಾಲೂಕು ವೀರಶೈವ ಮಹಾಸಭಾ ಸೋಮವಾರ ಪಟ್ಟಣದ ಮಂಗಲ ಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಶ್ರೀ ಕುಮಾರಸ್ವಾಮಿಗಳ 151ನೇ ಜನ್ಮ ದಿನ ಕಾರ್ಯಕ್ರಮ ಆಚರಿಸುವ ಸುಯೋಗ ನಮಗೆ ಒದಗಿ ಬಂದಿರುವುದು ನಮ್ಮ ಸೌಭಾಗ್ಯ. ನಿರಂತರವಾಗಿ ಕಾರ್ಯಕ್ರಮ ನಡೆಯಲಿದ್ದು, ನಾಡಿನ 300ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸುತ್ತಾರೆ. ಪ್ರತಿದಿನ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಶ್ರೀಗಳು ಪ್ರತಿದಿನ ಹಳ್ಳಿಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಿ ದುಶ್ಚಟ, ಕಂದಾಚಾರ, ಮೌಢ್ಯ, ಮೂಢನಂಬಿಕೆಗಳನ್ನು ಜೋಳಿಗೆಗೆ ಹಾಕಿಸಿಕೊಳ್ಳಲಿದ್ದು, ಪ್ರತಿ ದಿನ ಸಂಜೆ ಶಿವಾನುಭವ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಸಂಸದ ಬಿ.ವೈ.ರಾಘವೇಂದ್ರ ಸಭೆಯಲ್ಲಿ ಪ್ರಕಟಿಸಿದರು.

ಪುಣ್ಯ ಕಾರ್ಯ: ಆನಂದಪುರ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಮಾತನಾಡಿ, ಸಮಾಜ ಸುಧಾರಕರಾಗಿದ್ದ ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ವೀರಶೈವ ಸಮಾಜದ ಅಖಂಡತೆ ಉಳಿಸಲು 1904ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಮಾಡಿದರು. ಅಂತಹ ಯುಗಪುರುಷರ 151ನೇ ಜಯಂತಿ ಆಚರಣೆ ಶಿಕಾರಿಪುರದಲ್ಲಿ ನಡೆಸಬೇಕೆಂಬುದು ಎಲ್ಲ ಭಕ್ತರ ಅಪೇಕ್ಷೆಯಾಗಿದೆ. ಈ ಪುಣ್ಯ ಕಾರ್ಯದಲ್ಲಿ ನಾವೆಲ್ಲ ಭಾಗಿಯಾಗೋಣ ಎಂದು ಹೇಳಿದರು.

ಪೀಠಾಧಿಕಾರಿಗಳಾಗುವವರು ಆಚಾರ, ವಿಚಾರ ಗಳನ್ನು ಮೈಗೂಡಿಸಿಕೊಳ್ಳುವ ಸಲುವಾಗಿ, ಶಿವಯೋಗ ಮಂದಿರದಲ್ಲಿ ವಟುಗಳಿಗೆ ಸಂಸ್ಕಾರ ನೀಡುವ ಕಾಯಕಕ್ಕೆ ಚಾಲನೆ ನೀಡಿದರು. ಇಂದು ಮಲೆನಾಡಿನಲ್ಲಿರುವ ಬಹುತೇಕ ಮಠಾಧೀಶರು ಶಿವಯೋಗದಿಂದ ಬಂದವರು ಎಂದರು.

ಹಾನಗಲ್ಲ ವಿರಕ್ತ ಪೀಠದಿಂದ ಸಮಾಜ ಮುಖಿಯಾಗಿ ಹೊರಟ ಶ್ರೀಗಳು 1909ರಲ್ಲಿ ಶಿವಯೋಗ ಮಂದಿರ ಸ್ಥಾಪಿಸಿ 20ನೇ ಶತಮಾನದಲ್ಲಿ ಕ್ರಾಂತಿಯ ಹೊಸ ಸಂಚಲನ ಉಂಟು ಮಾಡಿದರು ಎಂದು ಹೇಳಿದರು. ಧಮೋತ್ಥಾನ, ಸಮಾಜೋತ್ಥಾನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಕಂದಾಚಾರ, ಮೌಢ್ಯ, ದುಷ್ಟ್ಟ ಚಟಗಳ ವಿರುದ್ಧ ನಿರಂತರ ಹೊರಾಟ ನಡೆಸಿದರು. ಅವರು ಅಪ್ಪಟ ಜಾತ್ಯತೀತ ನಿಲುವಿನವರಾಗಿದ್ದರು ಎಂದರು.

ಶಿವಯೋಗ ಮಂದಿರಕ್ಕೆ ಮೊದಲ ಬಾರಿಗೆ ಅನುದಾನ ನೀಡಿದವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಅವರು ಮುಖ್ಯಮಂತ್ರಿಯಾಗಿದ್ದ ಕಾಲಕ್ಕೆ ನಾಡಿನ ಹಲವು ಮಠಗಳಿಗೆ ಅನುದಾನ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾಳೇನಹಳ್ಳಿ, ತೊಗರ್ಸಿ, ಸಾಲೂರು, ಕವಲೇದುರ್ಗ, ಜಡೆ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಮುಂಡರಗಿ, ಘಟಪ್ರಭಾ, ಹಾರನಹಳ್ಳಿ ಸೇರಿದಂತೆ 36 ಮಠಾಧಿಶರು ಸೇರಿದಂತೆ ವೀರಶೈವ ಸಮಾಜದ ಹಲವು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Back To Top