Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಸಹಕಾರಿ ಬ್ಯಾಂಕ್​ಗಳಲ್ಲಿನ 1 ಲಕ್ಷ ರೂ. ವರೆಗಿನ ಚಾಲ್ತಿ ಸಾಲವೂ ಮನ್ನಾ

Thursday, 12.07.2018, 6:45 PM       No Comments

ಬೆಂಗಳೂರು: ರಾಜ್ಯದ ರೈತರ 2 ಲಕ್ಷ ರೂಪಾಯಿಗಳ ವರೆಗಿನ ಸುಸ್ತಿ ಸಾಲ ಮನ್ನಾ ಮಾಡಿ 34 ಸಾವಿರ ಕೋಟಿ ರೂಪಾಯಿಗಳನ್ನು ಬಜೆಟ್​ನಲ್ಲಿ ಮೀಸಲಿಟ್ಟಿದ್ದ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಇಂದು ಸಹಕಾರಿ ಬ್ಯಾಂಕ್​ಗಳಲ್ಲಿನ 1 ಲಕ್ಷ ರೂಪಾಯಿಗಳ ವರೆಗಿನ ಬೆಳೆ ಸಾಲವನ್ನು ಮಾಡಿರುವುದಾಗಿ ಘೋಷಣೆ ಮಾಡಿದ್ದಾರೆ.

ಬಜೆಟ್​ ಮೇಲಿನ ಚರ್ಚೆಯಲ್ಲಿ ಇಂದು ಭಾಷಣ ಮಾಡಿದ ಎಚ್​.ಡಿ.ಕುಮಾರಸ್ವಾಮಿ ಅವರು ಸಹಕಾರಿ ಬ್ಯಾಂಕ್​ಗಳಲ್ಲಿನ ರೈತರ 1 ಲಕ್ಷ ರೂಪಾಯಿಗಳ ವರೆಗಿನ ಚಾಲ್ತಿ ಸಾಲವನ್ನೂ ಮನ್ನಾ ಮಾಡುವ ನಿರ್ಧಾರ ಪ್ರಕಟಿಸಿದರು.

ವಿದ್ಯಾರ್ಥಿ ಪಾಸ್​: ಹಿಂದಿನಂತೆ ಶೇ. 50 ರಿಯಾಯಿತಿ

ಇನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರತ್ಯೇಕವಾಗಿ 2,500 ಕೋಟಿ ರೂ.ಗಳನ್ನು ನೀಡುತ್ತಿರುವುದಾಗಿಯೂ ಸಿಎಂ ಘೋಷಿಸಿದರು. ಜತೆಗೆ ವಿದ್ಯಾರ್ಥಿಗಳಿಗೆ ಈ ಹಿಂದಿನಂತೆ 50% ರಿಯಾಯಿತಿ ನೀಡುವುದಾಗಿಯೂ ಪ್ರಕಟಿಸಿದರು.

ಚಾಲ್ತಿ ಸಾಲಮನ್ನಾ, ಪೆಟ್ರೋಲ್​, ಡೀಸೆಲ್​ ಮೇಲಿನ ತೆರಿಗೆ ರದ್ದು ಮಾಡಬೇಕೆಂಬ ಹೋರಾಟದ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಬಜೆಟ್​ ಮೇಲಿನ ಭಾಷಣದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಸಾಲಮನ್ನಾ ಮಾಡಲು ತಾವು ಅನುಸರಿಸಿದ ಮಾನದಂಡ, ಯಾವ ಪ್ರಾಂತ್ಯಕ್ಕೆ ಎಷ್ಟು ಹಣ ನಿಗದಿಯಾಗಿದೆ ಎಂಬ ವಿವರವನ್ನು ಸದನದ ಮುಂದಿಟ್ಟರು.

ಜಾತಿ ವಿಶ್ಲೇಷಣೆಗೆ ಬೇಸರ 
ಅಲ್ಲದೆ, ಸಾಲಮನ್ನಾ ಕಾರ್ಯಕ್ರಮವನ್ನು ಜಾತಿಯ ಕೋನದಲ್ಲಿ ವಿಶ್ಲೇಷಿಸಿದ್ದನ್ನು ಖಂಡಿಸಿದರು. ಈಗ ವಿಶ್ಲೇಷಣೆ ಮಾಡುತ್ತಿರುವಂತೆ ಒಕ್ಕಲಿಗರಿಗೆ ಮಾತ್ರವೇ ಈ ಯೋಜನೆಯಿಂದ ಹೆಚ್ಚು ಲಾಭವಾಗಿಲ್ಲ. ಬದಲಾಗಿ ರಾಜ್ಯದ ಎಲ್ಲ ರೈತ ವರ್ಗಕ್ಕೂ ಕಾರ್ಯಕ್ರಮ ಜಾರಿಯಾಗಿದೆ ಎಂದು ತಿಳಿಸಿದರು. ಬೆಳಗಾವಿ ವಿಭಾಗಕ್ಕೆ 9,501 ಕೋಟಿ, ಕಲಬುರಗಿ ವಿಭಾಗಕ್ಕೆ 5,635 ಕೋಟಿ, ಬೆಂಗಳೂರು ವಿಭಾಗಕ್ಕೆ 7,455 ಕೋಟಿ, ಹಳೇ ಮೈಸೂರು ವಿಭಾಗಕ್ಕೆ 6,760 ಕೋಟಿ ರೂಪಾಯಿಗಳು ಸಾಲಮನ್ನಾ ಕಾರ್ಯಕ್ರಮದಲ್ಲಿದೆ ಎಂದು ಸದನಕ್ಕೆ ವಿವರಿಸಿದರು.
ರಾಜ್ಯದ ಎಲ್ಲ ರಾಷ್ಟ್ರೀಯ ಮತ್ತು ಸಹಕಾರ ಸಂಘಗಳಲ್ಲಿನ ರೈತರ ಎಲ್ಲ ಬಗೆಯ ಬೆಳೆ ಸಾಲದ ಪ್ರಮಾಣ 48,098 ಕೋಟಿ ರೂ.ಗಳಾಗಿದ್ದು ಈಗಾಗಲೇ 34 ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ ಎಂದೂ ತಿಳಿಸಿದರು.

ಬೆಳೆ ಸಾಲ ಮನ್ನಾದಿಂದ ಯಾವ ಭಾಗಕ್ಕೆ ಎಷ್ಟು ಲಾಭ 

  • ಬೆಳಗಾವಿ ವಿಭಾಗ – 9,501 ಕೋಟಿ ರೂ. 
  • ಕಲಬುರಗಿ ವಿಭಾಗ –  5,635 ಕೋಟಿ ರೂ. 
  • ಬೆಂಗಳೂರು ವಿಭಾಗ – 7,455 ಕೋಟಿ ರೂ. 
  • ಮೈಸೂರು ವಿಭಾಗ – 6,760 ಕೋಟಿ ರೂ. 

 

Leave a Reply

Your email address will not be published. Required fields are marked *

Back To Top