Monday, 23rd October 2017  

Vijayavani

1. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಬಿಜೆಪಿ ವಿರುದ್ಧ ಸಿಎಂ ಸಿದ್ರಾಮಯ್ಯ ವೀರಾವೇಶ – ಮೋದಿ, ಷಾ ವಿರುದ್ಧವೂ ಟೀಕಾಸ್ತ್ರ 2. ಟಿಪ್ಪು ಜಯಂತಿ ವಿರುದ್ಧ ಹೋರಾಟ ತೀವ್ರ – ಮಂಡ್ಯದಲ್ಲಿ ಆಚರಣೆ ವಿರೋಧಿಗಳಿಂದ ರಕ್ತದಲ್ಲಿ ಪತ್ರ – ಬೆಂಗಳೂರಲ್ಲಿ ಸಿಎಂಗೆ ಮಾಸ್‌ ಕಿಲ್ಲರ್‌ ಪಟ್ಟ 3. ಸಾಲದ ಬೆಂಕಿಯಲ್ಲಿ ಬೆಂದ ರೈತ ಕುಟುಂಬ – ಡಿಸಿ ಕಚೇರಿ ಎದುರೇ ಐವರು ಅಗ್ನಿಗಾಹುತಿ – ಮೈಸೂರಿನಲ್ಲೂ ಬ್ಯಾಂಕ್‌ ಕಾಟಕ್ಕೆ ರೈತ ಆತ್ಮಹತ್ಯೆ ಯತ್ನ 4. ರಸ್ತೆಯಲ್ಲೇ ಕುಡುಕನ ನೀಚ ಕೃತ್ಯ – ಹಾಡಹಗಲೇ ಬುದ್ಧಿಮಾಂಧ್ಯೆ ಮೇಲೆ ಅತ್ಯಾಚಾರ – ರಸ್ತೆಬದಿ ನೋಡುತ್ತಾ ನಿಂತ ಜನಸಮೂಹ 5. ಗೋದಾಮಿನಲ್ಲಿ ಕೊಳೆಯುತ್ತಿದ್ದ ಗೋಧಿಗೆ ಮುಕ್ತಿ – ದಿಗ್ವಿಜಯ ನ್ಯೂಸ್‌ ವರದಿಗೆ ಎಚ್ಚೆತ್ತ ಅಧಿಕಾರಿಗಳು – ಶಿರಸಿ ಸಹಕಾರ ಗೋಡೌನ್‌ಗೆ ದೌಡು
Breaking News :

ರೇಪ್​ ಬಾಬಾನ ಹನಿಪ್ರೀತ್​ ಹೆಬ್ಬೆರಳು ಎಲ್ಲದಕೂ ಹೆಬ್ಬಾಗಿಲು!

Friday, 13.10.2017, 7:03 PM       No Comments

ಸಿರ್ಸಾ: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಶಿಕ್ಷೆಗೊಳಗಾಗಿ ಜೈಲು ಸೇರಿರುವ ರೇಪಿಸ್ಟ್ ಬಾಬಾ ಗುರ್ಮಿತ್​ ರಾಮ್​ ರಹೀಂ ಸಿಂಗ್​ನ ದತ್ತು ಪುತ್ರಿ ಹನಿಪ್ರೀತ್​ ಇತ್ತೀಚೆಗೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಹನಿಪ್ರೀತ್​ ಬಂಧನವಾಗುತ್ತಿದ್ದಂತೆ ಡೇರಾ ಸಚ್ಛಾ ಸೌದಾದ ಹಲವು ರಹಸ್ಯಗಳು ಹೊರಬೀಳುತ್ತಿವೆ.

ಈಗ ಹೊರಬಿದ್ದಿರುವ ಕುತೂಹಲಕಾರಿ ಅಂಶವೇನೆಂದರೆ, ಬಾಬಾನ ಗುಫಾದೊಳಗೆ ಯಾರು ಹೋಗಬೇಕು ಎಂಬುದನ್ನು ಹನಿಪ್ರೀತ್​ ನಿಯಂತ್ರಿಸುತ್ತಿದ್ದಳು. ಹನಿಪ್ರೀತ್​ ಹೆಬ್ಬೆರಳು ಗುರುತಿನಿಂದ ಮಾತ್ರ ಗುಫಾದ ಬಾಗಿಲುಗಳು ತೆರೆಯುತ್ತಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.

ಡೇರಾ ಸಚ್ಛಾ ಸೌದಾ ಆವರಣದೊಳಗೆ ಬಾಬಾ ತನ್ನ ವಾಸಕ್ಕಾಗಿ ಗುಫಾ ಎಂಬ ಅತ್ಯಾಧುನಿಕ ಸೌಲಭ್ಯಗಳುಳ್ಳ ಕಟ್ಟಡವನ್ನು ನಿರ್ಮಿಸಿಕೊಂಡಿದ್ದ. ಇದರ ಸಕಲ ಉಸ್ತುವಾರಿಯನ್ನು ತನ್ನ ದತ್ತು ಪುತ್ರಿಗೆ ವಹಿಸಿದ್ದ ಎಂಬುದು ತಿಳಿದು ಬಂದಿದೆ.

ಪಂಚಕುಲದಲ್ಲಿ ನಡೆದ ಗಲಭೆಗೆ ಕುಮ್ಮಕ್ಕು ನೀಡಿದ್ದಳೆಂಬ ಆರೋಪದ ಮೇಲೆ ಬಂಧಿತಳಾಗಿರುವ ಹನಿಪ್ರೀತ್​ಳನ್ನು ಕೋರ್ಟ್​ ಶುಕ್ರವಾರ ಅಕ್ಟೋಬರ್​ 23 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top