Thursday, 20th September 2018  

Vijayavani

Breaking News

ಗಂಡನ ಮಾಜಿ ಪ್ರೇಯಸಿಯ ಪ್ರೇತಾತ್ಮವೇ ನಮ್ಮ ಸಾವಿಗೆ ಕಾರಣ: ಪತ್ನಿಯಿಂದ ಡೆತ್​ನೋಟ್​

Friday, 14.09.2018, 8:28 AM       No Comments

ಅಹಮದಾಬಾದ್: ಕಳೆದ ಬುಧವಾರ ಅಹಮದಾಬಾದ್​ನ ಅವನಿ ಸ್ಕೈ ಅಪಾರ್ಟ್​ಮೆಂಟ್​ನಲ್ಲಿ ಶವವಾಗಿ ಪತ್ತೆಯಾಗಿದ್ದ ಗುಜರಾತ್​ ಉದ್ಯಮಿ, ಪತ್ನಿ ಹಾಗೂ ಮಗಳ ಸಾವಿನ ಪ್ರಕರಣ ಕುರಿತು ನಡೆದ ತನಿಖೆ ವೇಳೆ ಭಯಾನಕ ಸತ್ಯವೊಂದು ಹೊರಬಿದ್ದಿದೆ.

ಬುಧವಾರ ಪತ್ತೆಯಾದ ಮೊದಲ ಡೆತ್​ನೋಟ್​ನಲ್ಲಿ ಅಮಾನುಷ ಶಕ್ತಿಯೇ ಈ ದುರಂತಕ್ಕೆ ಕಾರಣ ಎಂದು ತಿಳಿದುಬಂದಿತ್ತು. ಮತ್ತೊಂದು ಡೆತ್​ನೋಟ್​ ಪತ್ತೆಯಾಗಿದ್ದು, ಪತಿಯ ಮಾಜಿ ಪ್ರೇಯಸಿಯ ಪ್ರೇತಾತ್ಮವೇ ಸಾವಿಗೆ ಕಾರಣ ಎಂದು ಪತ್ನಿ ಬರೆದ ಡೆತ್​ನೋಟ್​ನಲ್ಲಿ ಉಲ್ಲೇಖವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಉದ್ಯಮಿ ಕುನಾಲ್​ ತ್ರಿವೇದಿ(45) ವಾಸವಿದ್ದ ಫ್ಲ್ಯಾಟ್​ನ ಬೆಡ್​ ರೂಮಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದರು. ಅದೇ ವೇಳೆ ಪತ್ನಿ ಕವಿತಾ(45) ಮತ್ತು ಮಗಳಾದ ಶ್ರೀನ್​​(16) ಅವರು ಕೆಳಗಡೆ ಬಿದ್ದಿದ್ದರು.

ಮೃತರ ಸಂಬಂಧಿಗಳು ಪದೇ ಪದೆ ಕರೆ ಮಾಡಿದಾಗ ಯಾವುದೇ ಉತ್ತರ ಬಾರದಿದ್ದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಪೊಲೀಸರು ಬಾಗಿಲು ಮುರಿದಾಗ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಮೃತ ತ್ರಿವೇದಿ ಅವರ ತಾಯಿ ಜಯಶ್ರೀಬೆನ್​(75) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತ್ರಿವೇದಿ ತನ್ನ ಪತ್ನಿ ಹಾಗೂ ಮಗಳನ್ನು ಕೊಲೆ ಮಾಡಿ ನಂತರ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಈ ಮೊದಲು ತಿಳಿಯಲಾಗಿತ್ತು. ಆದರೆ, ಪತ್ನಿ ಬರೆದ ಎರಡನೇ ಡೆತ್​ನೋಟ್​​ ಪತ್ತೆಯಾದಾಗ ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ತನ್ನ ಗಂಡನ ಮಾಜಿ ಪ್ರೇಯಸಿಯ ಆತ್ಮದ ಕಾಟದಿಂದ ಆತ್ಮಹತ್ಯೆಗೆ ಶರಣಾಗಿರುವುದಾಗಿ ಬರೆದುಕೊಂಡಿದ್ದಾಳೆ.

ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಿದ್ದು, ಫೋರೆನ್ಸಿಕ್ ವಿಜ್ಞಾನ ಪ್ರಯೋಗಾಲಯ ವರದಿಗಾಗಿ ಕಾಯುತ್ತಿದ್ದೇವೆ. ಅಲ್ಲಿಯವರೆಗೂ ಯಾವುದೇ ನಿರ್ಧಾರಕ್ಕೆ ಬರಲಾಗುವುದಿಲ್ಲ ಎಂದು ನರೋಡ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​​ ಎಚ್​.ಬಿ. ವಾಘೇಲ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top