Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಗುಜರಾತ್‌ ಚುನಾವಣೆ: ಹಾರ್ದಿಕ್​​ ಪಟೇಲ್​​, ಜಿಗ್ನೇಶ್​​ ಮೆವಾನಿ, ಅಲ್ಫೇಶ್​​ ಠಾಕೂರ್‌ ಎಫೆಕ್ಟ್ ಏನು?

Thursday, 14.12.2017, 7:52 AM       No Comments

<< ಇಂದು ಅಂತಿಮ ಹಂತದ ಚುನಾವಣೆ, ಎಲ್ಲರ ಚಿತ್ತ ಡಿಸೆಂಬರ್‌ 18ರ ಫಲಿತಾಂಶದತ್ತ >>

ಅಹಮದಾಬಾದ್: ಗುಜರಾತ್ ಚುನಾವಣೆಯ 2ನೇ ಹಾಗೂ ಅಂತಿಮ ಹಂತದ ಚುನಾವಣೆ ಮತದಾನ ಇಂದು ನಡೆಯಲಿದೆ.

ಇದುವರೆಗೂ ರಾಷ್ಟ್ರೀಯ ಪಕ್ಷಗಳ ಘಟಾನುಘಟಿ ನಾಯಕರು ಗದ್ದುಗೆ ಹಿಡಿಯಲೇಬೇಕೆಂಬ ಹಠ ತೊಟ್ಟಂತೆ ಎರಡು ತಿಂಗಳಿಂದಲೂ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಇಂದಿಗೆ ಮುಕ್ತಾಯವಾಗಲಿರುವ ಮತದಾನ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಮುಂದಿನ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಹಲವು ವಿಚಾರಗಳಿಗಾಗಿ ಗಮನ ಸೆಳೆದಿರುವ ಗುಜರಾತ್‌ ಚುನಾವಣೆಯಲ್ಲಿ ಈ ಭಾರಿ ಲೆಕ್ಕಾಚಾರ ಬೇರೆಯದ್ದೇ ಆಗಿದ್ದು, ಫೈರ್‌ ಬ್ರಾಂಡ್‌ ಆಗಿ ಗುರುತಿಸಿಕೊಂಡಿರುವ ಹಾರ್ದಿಕ್​​ ಪಟೇಲ್​​, ಜಿಗ್ನೇಶ್​​ ಮೆವಾನಿ, ಅಲ್ಫೇಶ್​​ ಠಾಕೂರು ಬಿಜೆಪಿಗೆ ಮುಳುವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಬೆಂಕಿ ಉಂಡೆಯಂತಿರುವ ಈ ಮೂವರಲ್ಲಿ ಇಬ್ಬರು ಯುವಕರು ಪರೋಕ್ಷವಾಗಿ ಕಾಂಗ್ರೆಸ್​​​ಗೆ ಬೆಂಬಲ ನೀಡಿದ್ದಾರೆ. ಅಲ್ಲದೆ, ಬಿಜೆಪಿಯನ್ನ ರಾಜ್ಯದಿಂದ ಕಿತ್ತು ಹಾಕುವುದೇ ತಮ್ಮ ಗುರಿ ಎಂದಿದ್ದಾರೆ.

ಪಾಟೀದಾರ್​​​​ ಮೀಸಲಾತಿ ಚಳವಳಿಯಿಂದ ಹಾರ್ದಿಕ್​​​​​ ಪಟೇಲ್​​​ ಹೊರ ಹೊಮ್ಮಿದ್ದರೆ, ಊನಾ ಪ್ರಕರಣದ ನಂತರ ದಲಿತ ಯುವ ನಾಯಕನಾಗಿ ಜಿಗ್ನೇಶ್​​​ ಮೇವಾನಿ ಮುನ್ನೆಲೆಗೆ ಬಂದರು. ಇವರೊಂದಿಗೆ ಹಿಂದುಳಿದ ವರ್ಗಗಳಿಗಾಗಿ ನಡೆದ ಹೋರಾಟದ ಮೂಲಕ ಗುರುತಿಸಿಕೊಂಡಿದ್ದ ಅಲ್ಫೇಶ್​​​ ಠಾಕೂರ್​​​​​​​ ಇದೀಗ ಕಾಂಗ್ರೆಸ್​​ಗೆ ಸೇರ್ಪಡೆಯಾಗಿದ್ದು, ಡಿಸೆಂಬರ್‌ 18ರ ಪಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. (ಏಜೆನ್ಸೀಸ್‌)

Leave a Reply

Your email address will not be published. Required fields are marked *

Back To Top