Saturday, 18th August 2018  

Vijayavani

ಭಾರೀ ಮಳೆಗೆ ತತ್ತರಿಸಿದ ಕೇರಳದಲ್ಲಿ ಮೋದಿ ವೈಮಾನಿಕ ಸಮೀಕ್ಷೆ: ಐನೂರು ಕೋಟಿ ನೆರವು ಘೋಷಣೆ        ಕೊಡಗಿಗೆ ಮಳೆ ಸಂಕಷ್ಟ: ಹಾನಿ ಬಗ್ಗೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿಗೆ ಮುಖ್ಯಕಾರ್ಯದರ್ಶಿ ವರದಿ        ಕೊಡಗಿನ ಗೋಣಿಕೊಪ್ಪದಲ್ಲಿ ಮಳೆಯ ಅಬ್ಬರಕ್ಕೆ ಕುಸಿದ ಮನೆ: ನಾಲ್ಕು ಮಂದಿ ದುರ್ಮರಣ        ಚಾರ್ಮಾಡಿ ಘಾಟ್​​ನ ತಿರುವಿನಲ್ಲಿ ಕೆಟ್ಟು ನಿಂತ ವಾಹನ: ಧರ್ಮಸ್ಥಳ ಮಾರ್ಗದಲ್ಲಿ ವಿಪರೀತ ಟ್ರಾಫಿಕ್​ ಜಾಮ್        ಅರಕಲಗೂಡನಲ್ಲಿ 200 ಮನೆಗಳು ಜಲಾವೃತ: ದ್ವೀಪದಂತಾದ ರಾಮನಾಥಪುರ, ಮುಳುಗಿದ ನಿಮಿಷಾಂಭ ದೇಗುಲ       
Breaking News

40 ಸರಕು, ಸೇವೆ ತೆರಿಗೆ ನಾಳೆ ಅಗ್ಗ?

Friday, 20.07.2018, 3:04 AM       No Comments

ನವದೆಹಲಿ: ನ್ಯಾಪ್ಕಿನ್, ಕೈಮಗ್ಗ, ಕರಕುಶಲ ಉತ್ಪನ್ನ ಸೇರಿದಂತೆ 40ಕ್ಕೂ ಅಧಿಕ ಸರಕು, ಸೇವೆಗಳ ತೆರಿಗೆ ಭಾರ ಕೊಂಚ ಸಡಿಲವಾಗುವ ಸುಳಿವು ಸಿಕ್ಕಿದೆ. ಶನಿವಾರ ದೆಹಲಿಯಲ್ಲಿ ನಡೆಯಲಿರುವ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಈ ಕುರಿತು ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

ಜಿಎಸ್​ಟಿ ಜಾರಿಯಾದ ಒಂದು ವರ್ಷದಲ್ಲಿ ಈಗಾಗಲೇ ಕೇಂದ್ರ ಸರ್ಕಾರ 328 ಸರಕು, ಸೇವೆಗಳ ತೆರಿಗೆ ಇಳಿಸಿದೆ. ಇದೀಗ ಜಿಎಸ್​ಟಿಯ ವಿವಿಧ ಸ್ತರದಲ್ಲಿರುವ, ಜನಸಾಮಾನ್ಯರ ಅಧಿಕ ಬಳಕೆಯ 40ಕ್ಕೂ ಅಧಿಕ ಉತ್ಪನ್ನಗಳ ತೆರಿಗೆ ಪ್ರಮಾಣ ಕಡಿಮೆ ಮಾಡುವ ಪ್ರಸ್ತಾವನೆ ಮಂಡಳಿ ಮುಂದಿದೆ ಎಂಬುದಾಗಿ ತಿಳಿದು ಬಂದಿದೆ.

40 ಉತ್ಪನ್ನಗಳ ತೆರಿಗೆ ಇಳಿಕೆಯಿಂದ ರಾಜ್ಯಗಳ ತೆರಿಗೆ ಸಂಗ್ರಹದ ಮೇಲೆ ಯಾವುದೇ ದೊಡ್ಡ ಪರಿಣಾಮ ಉಂಟಾಗದೆಂಬುದು ಕೇಂದ್ರ ಸರ್ಕಾರದ ವಾದ. ಆದರೆ ಶೇ.28ರ ತೆರಿಗೆ ಸ್ತರದಲ್ಲಿನ ಉತ್ಪನ್ನಗಳ ಮೇಲಿನ ತೆರಿಗೆ ಸದ್ಯಕ್ಕೆ ಇಳಿಕೆಯಾಗುವ ಸಾಧ್ಯತೆಯಿಲ್ಲ. ರಾಜ್ಯ ಸರ್ಕಾರಗಳೊಂದಿಗೆ ಪ್ರತ್ಯೇಕ ಚರ್ಚೆ ನಡೆಸಿ ಈ ಬಗ್ಗೆ ನಿರ್ಧಾರವಾಗಲಿದೆ. ಚಿನ್ನ , ವಜ್ರದ ಮೇಲಿನ ಶೇ.3ರ ತೆರಿಗೆ ಹೊರತುಪಡಿಸಿ ದೇಶದಲ್ಲಿ ಸದ್ಯಕ್ಕೆ ಶೇ.5, 12, 18 ಹಾಗೂ 28ರ ತೆರಿಗೆ ಸ್ತರವಿದೆ. ಶೇ.28ರ ಪಟ್ಟಿಯಲ್ಲಿ 49 ಉತ್ಪನ್ನ ಹಾಗೂ ಸೇವೆಗಳಿವೆ.

ಕೃಷಿ ಸೆಸ್?

ಕೃಷಿ ಬಜೆಟ್ ಪ್ರಮಾಣ ಏರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಶೇ.1 ಕೃಷಿ ಸೆಸ್ ಹಾಕುವ ಬಗ್ಗೆ ಚಿಂತನೆ ಮಾಡಿದೆ. ಇದರ ಜತೆಗೆ ಬಹು ನಿರೀಕ್ಷಿತ ಡಿಜಿಟಲ್ ವ್ಯವಹಾರಗಳಿಗೆ ಉತ್ತೇಜನ ನೀಡುವ ಅಂಶದ ಪ್ರಸ್ತಾವನೆ ಕೂಡ ಮಂಡಳಿ ಮುಂದಿದೆ.

ತೈಲ ಉತ್ಪನ್ನ ಸೇರಲ್ಲ?

ತೈಲ ಉತ್ಪನ್ನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತರುವ ಬಗ್ಗೆ ಈ ಸಭೆಯಲ್ಲೂ ಚರ್ಚೆಯಾಗುವ ಸಾಧ್ಯತೆ ಇಲ್ಲ. ರಾಜ್ಯ ಸರ್ಕಾರ ಗಳೊಂದಿಗೆ ಪೂರಕ ಚರ್ಚೆ ನಡೆದ ಬಳಿಕವಷ್ಟೇ ಈ ವಿಚಾರ ಚರ್ಚೆಗೆ ಬರಲಿದೆ.

Leave a Reply

Your email address will not be published. Required fields are marked *

Back To Top