Thursday, 24th May 2018  

Vijayavani

ಶಕ್ತಿಸೌಧದ ಮುಂದೆ ಎಚ್​ಡಿಕೆ ಪದಗ್ರಹಣ - ದೇವರು ಹಾಗೂ ಕನ್ನಡ ನಾಡಿನ ಹೆಸರಲ್ಲಿ ಪ್ರಮಾಣವಚನ        ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪದಗ್ರಹಣ -ಮೈತ್ರಿ ಸರ್ಕಾರದಲ್ಲಿ ಅಧಿಕಾರದ ಚುಕ್ಕಾಣಿ        ರಾಜ್ಯದಲ್ಲಿ ಕುಮಾರಪರ್ವ ಶುರು - ವಿಧಾನಸೌಧದ ಮುಂದೆ ತೃತೀಯ ರಂಗದ ವೈಭವ        ವೇದಿಕೆಯಲ್ಲಿ ಮಮತಾ ಬ್ಯಾನರ್ಜಿ ಸಿಡಿಮಿಡಿ - ಎಚ್​ಡಿಡಿ ಸಮಾಧಾನಿಸಿದ್ರೂ ಕರಗದ ಮುನಿಸು        ವಿಧಾನಸೌಧದ ಮುಂದೆ ಜನರ ದಂಡು- ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಕೈ-ದಳ ಕಾರ್ಯಕರ್ತರು        ವರುಣನ ಅಬ್ಬರದ ಬಳಿಕ ಪ್ರಮಾಣವಚನದ ಸಂಭ್ರಮ- ಕುಣಿದು ಕುಪ್ಪಳಿಸಿದ ಎಚ್​ಡಿಕೆ ಅಭಿಮಾನಿಗಳು       
Breaking News

ಭಕ್ತರ ಜಾಗರಣೆ ಶಿವನಾಮ ಸ್ಮರಣೆ

Wednesday, 14.02.2018, 3:04 AM       No Comments

ನಾಡಿನಾದ್ಯಂತ ಜನರು ಮಂಗಳವಾರ ಮಹಾಶಿವರಾತ್ರಿಯನ್ನು ಆಚರಿಸಿದರು. ಮುಂಜಾನೆಯಿಂದಲೇ, ದ್ವಾದಶ ಜ್ಯೋರ್ತಿಲಿಂಗಗಳೂ ಸೇರಿ ಎಲ್ಲ ಶಿವ ದೇವಾಲಯಗಳಲ್ಲಿ ಅಭಿಷೇಕ, ರುದ್ರ, ಚಮಕ ಪಠಣ, ಹೋಮ ಹವನಗಳು ನಡೆದವು. ಶಿವರಾತ್ರಿ ಆಚರಣೆ ಎಲ್ಲಿ ಹೇಗಾಯಿತು? – ಸಂಕ್ಷಿಪ್ತ ಸುದ್ದಿ ಚಿತ್ರಣ ಇಲ್ಲಿದೆ.

ಗೋಕರ್ಣದಲ್ಲಿ ಆತ್ಮಲಿಂಗ ಪೂಜೆ

ದಕ್ಷಿಣ ಕಾಶಿ ಗೋಕರ್ಣದಲ್ಲಿ ಮಂಗಳವಾರ ಮಹಾಶಿವರಾತ್ರಿ ಪುಣ್ಯ ಕಾಲದಲ್ಲಿ ದೇಶದ ವಿವಿಧ ಕಡೆಗಳಿಂದ ಬಂದ ಸಾವಿರಾರು ಭಕ್ತರು ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿ ಕೃತಾರ್ಥರಾದರು. ಬೆಳಗಾವಿ ಕೆಎಲ್​ಇ ಸೊಸೈಟಿ ಅಧ್ಯಕ್ಷ ಪ್ರಭಾಕರ ಕೋರೆ, ಖ್ಯಾತ ಗಾಯಕಿ ಅನುರಾಧಾ ಪೊದುವಾಳ್, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆತ್ಮಲಿಂಗಕ್ಕೆ ಅಭಿಷೇಕ ಮಾಡಿದವರಲ್ಲಿ ಪ್ರಮುಖರು.

ಮಹಾಶಿವರಾತ್ರಿ ನಿಮಿತ್ತ ಬೆಳಗಿನ ಜಾವ 1 ಗಂಟೆಗೆ ಮಹಾಬಲೇಶ್ವರ ಮಂದಿರ ಆಡಳಿತ ಮಂಡಳಿ ಪೂಜೆಗೆ ಅವಕಾಶ ಒದಗಿಸಿತ್ತು. 25 ಸಾವಿರ ಭಕ್ತರು ಮಂದಿರಕ್ಕೆ ಭೇಟಿಯಿತ್ತರು.

ವೆಂಕಟ್ರಮಣ, ರಾಮಮಂದಿರ, ಮಾಣೇಶ್ವರ ಮಂದಿರಗಳಲ್ಲಿ ವಿಶೇಷ ವಿದ್ಯುತ್ ದೀಪಗಳಿಂದ ಅಲಂಕಾರ ಕೈಗೊಳ್ಳಲಾಗಿತ್ತು. ಮುಖ್ಯ ತಾಣವಾದ ಕೋಟಿತೀರ್ಥ ಮತ್ತು ಸಮುದ್ರದಲ್ಲಿ ಯಾತ್ರಿಕರು ಪ್ರಾತಃ ಕಾಲದಿಂದಲೇ ಮಾಘಸ್ನಾನಕ್ಕೆ ತೊಡಗಿದ್ದರು. ಗೋವಾ, ಮಹಾರಾಷ್ಟ್ರ, ಆಂಧ್ರ ಮುಂತಾದೆಡೆಗಳಿಂದಲೂ ಭಕ್ತರು ಆಗಮಿಸಿದ್ದರು.

Leave a Reply

Your email address will not be published. Required fields are marked *

Back To Top