Thursday, 21st September 2017  

Vijayavani

1. ಆಸೀಸ್‌ ಬಗ್ಗುಬಡಿದ ಟೀಂಇಂಡಿಯಾ- ಈಡನ್‌ ಗಾರ್ಡನ್‌ನಲ್ಲಿ ಭಾರತಕ್ಕೆ ದಿಗ್ವಿಜಯ- ಹ್ಯಾಟ್ರಿಕ್‌ ಸಾಧನೆ ಮಾಡಿ ಕುಲ್ದೀಪ್‌ ಕಿಲಕಿಲ 2. ಶಿವರಾಮ ಕಾರಂತ ಲೇಔಟ್ ಡಿನೋಟಿಫೈ ಪ್ರಕರಣ- ಎಸಿಬಿ ಅಧಿಕಾರಿಗಳ ತುರ್ತು ಸಭೆ- ಮುಂದಿನ ನಡೆ ಬಗ್ಗೆ ಸುದೀರ್ಘ ಚರ್ಚೆ 3. ಬಳ್ಳಾರಿಯ ಮುದೇನೂರು ಕೆರೆ ಬಿರುಕು- ಯಾವುದೇ ಕ್ಷಣದಲ್ಲೂ ಕೆರೆ ಒಡೆಯೋ ಸಾಧ್ಯತೆ- ಆತಂಕದಲ್ಲಿ ಹೂವಿನಹಡಗಲಿ ಜನ 4. ಸಂಜೀವಿನಿ ಪರ್ವತ ಹೊತ್ತು ತಂದ ಹನುಮಂತ- ಕ್ರೇನ್‌ ಕೈಕೊಟ್ಟು ರಪ್‌ ಅಂತ ನೆಲಕ್ಕೆ ಬಿದ್ದ- ಆಸ್ಪತ್ರೆ ಸೇರಿದ ಆಂಜನೇಯ 5. ಅಖಾಡದಲ್ಲಿ ಕುಸ್ತಿ ಮಸ್ತಿಯ ಕಲರವ- ಅರಮನೆ ಆವರಣದಲ್ಲಿ ಕಲಾಶ್ರೀಮಂತಿಕೆಯ ವೈಭವ- ಮೈಸೂರಿನಲ್ಲಿ ಮೇಳೈಸಿದೆ ನಾಡಹಬ್ಬದ ಸಂಭ್ರಮ
Breaking News :

ಆರ್ಥಿಕ ಸುಧಾರಣೆ ಮುಂದುವರಿಕೆಗೆ ಸರ್ಕಾರ ಕಟಿಬದ್ಧ, ಪ್ರಧಾನಿ ಮೋದಿ

Tuesday, 10.01.2017, 7:37 PM       No Comments

ವೈಬ್ರೆಂಟ್ ಗುಜರಾತ್ ಶೃಂಗ ಸಮ್ಮೇಳನದ ಉದ್ಘಾಟನೆ

ಗಾಂಧಿನಗರ (ಗುಜರಾತ್): ನಾವು ಈಗ ವಿಶ್ವದಲ್ಲೇ ಅತ್ಯಂತ ಡಿಜಿಟಲೀಕೃತ ಆರ್ಥಿಕತೆಯ ಅಂಚಿನಲ್ಲಿದ್ದೇವೆ. ಜಾಗತಿಕ ಆರ್ಥಿಕತೆ ಮಂದವಾಗಿದ್ದರೂ ನಾವು ಅದ್ಭುತ ಬೆಳವಣಿಗೆಯನ್ನು ದಾಖಲಿಸಿದ್ದೇವೆ. ವಿಶ್ವ ಆರ್ಥಿಕತೆಯಲ್ಲಿ ಈಗ ಬೆಳ್ಳಿ ಚುಕ್ಕಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಇಲ್ಲಿ ಹೇಳಿದರು.

ಎರಡು ವರ್ಷಗಳಿಗೆ ಒಮ್ಮೆ ನಡೆಯುವ ವೈಬ್ರೆಂಟ್ ಗುಜರಾತ್ ಶೃಂಗ ಸಮ್ಮೇಳನದ 8ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ‘ನನ್ನ ಸರ್ಕಾರ ಭಾರತೀಯ ಆರ್ಥಿಕತೆಯ ಸುಧಾರಣೆ ಮುಂದುವರೆಸಲು ಕಟಿ ಬದ್ಧವಾಗಿದೆ. ವ್ಯವಹಾರವನ್ನು ಸರಳಗೊಳಿಸಲು ಸರ್ಕಾರ ಅತ್ಯಂತ ಹೆಚ್ಚಿನ ಒತ್ತು ನೀಡಿದೆ. ಮೇಕ್ ಇನ್ ಇಂಡಿಯಾವು ಈಗ ಭಾರತದ ಅತಿದೊಡ್ಡ ಬ್ರ್ಯಾಂಡ್ ಆಗಿದೆ. ಭಾರತವು ವಿಶ್ವದಲ್ಲಿ 6ನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ ಎಂದು ವಿವರಿಸಿದರು.

ಪ್ರವಾಸೋದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲು ನಾವು ಅತ್ಯಂತ ಆಸಕ್ತಿ ಹೊಂದಿದ್ದೇವೆ. ಇದಕ್ಕೆ ಪ್ರವಾಸೋದ್ಯಮ ಮೂಲ ಸವಲತ್ತುಗಳ ಅಗತ್ಯವಿದೆ ಎಂದು ಪ್ರಧಾನಿ ನುಡಿದರು.

ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಅವರ ನೆಲವಾಗಿರುವ ಗುಜರಾತ್ ವ್ಯವಹಾರದ ಭೂಮಿ ಕೂಡಾ ಆಗಿದೆ ಎಂದು ಪ್ರಧಾನಿ ಹೇಳಿದರು. ಭಾರತ ಮತ್ತು ಇತರ ರಾಷ್ಟ್ರಗಳ ಉನ್ನತ ಕೈಗಾರಿಕೋದ್ಯಮಿಗಳು, ಜಾಗತಿಕ ನಾಯಕರು, ನೊಬೆಲ್ ಪ್ರಶಸ್ತಿ ವಿಜೇತರು ನಾಲ್ಕು ದಿನಗಳ ವೈಬ್ರೆಂಟ್ ಗುಜರಾತ್ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಗಾಂಧಿನಗರದ ಮಹಾತ್ಮ ಮಂದಿರ ಸಮಾವೇಶ ಸಭಾಂಗಣದಲ್ಲಿ ನಡೆಯುತ್ತಿರುವ ಶೃಂಗ ಸಮ್ಮೇಳನ 2003ರಲ್ಲಿ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಆರಂಭಗೊಂಡಿತ್ತು. 2015ರಲ್ಲಿ 25 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯ ಪ್ರಸ್ತಾಪಗಳು ಬಂದಿದ್ದವು.

-ಏಜೆನ್ಸೀಸ್

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

Back To Top