Thursday, 20th September 2018  

Vijayavani

Breaking News

ಕಾಂಗ್ರೆಸ್ ಸರ್ಕಾರದ ರೈತರ ಸಾಲ ಮನ್ನಾ ಬಾಕಿ ಚುಕ್ತಾ

Saturday, 15.09.2018, 2:03 AM       No Comments

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಕೊನೆಯ ದಿನಗಳಲ್ಲಿ ಸಿದ್ದರಾಮಯ್ಯ ಘೋಷಿಸಿದ್ದ ರೈತರ ಸಾಲಮನ್ನಾದ ಬಾಕಿ ಈಗ ಚುಕ್ತಾ ಆಗಿದೆ. ಇನ್ನೇನಿದ್ದರೂ ಮೈತ್ರಿ ಸರ್ಕಾರ ಮಾಡಿದ ಸಾಲ ಮನ್ನಾದ ಬಗ್ಗೆ ಚಿತ್ತ ಹರಿಸಬೇಕಿದೆ. ಸಿದ್ದರಾಮಯ್ಯ ಸರ್ಕಾರ 23 ಲಕ್ಷ ರೈತರ 50 ಸಾವಿರ ರೂ.ವರೆಗಿನ 8,160 ಕೋಟಿ ರೂ. ಸಾಲ ಮನ್ನಾ ಮಾಡಿ, 4 ಸಾವಿರ ಕೋಟಿ ರೂ. ಬಿಡುಗಡೆ ಮಾಡಿತ್ತು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೆ ಈ ಸಾಲದ ಬಾಕಿ ಸರಿದೂಗಿಸಲು ಜು.17ರಂದು 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಿತ್ತು. ಈಗ 2ನೇ ಕಂತಿನಲ್ಲಿ 1,495.66 ಕೋಟಿ ರೂ. ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಉಳಿದ ಬಾಕಿ ಅಪೆಕ್ಸ್ ಬ್ಯಾಂಕ್​ನಲ್ಲಿ ಹೊಂದಾಣಿಕೆ ಮಾಡಲು ಉದ್ದೇಶಿಸಿದ್ದು, ಹಿಂದಿನ ಸರ್ಕಾರದ ರೈತರ ಸಾಲ ಮನ್ನಾ ಬಾಕಿ ಎಲ್ಲ ತೀರುವಳಿಯಾದಂತಾಗಿದೆ.

Leave a Reply

Your email address will not be published. Required fields are marked *

Back To Top