Sunday, 23rd September 2018  

Vijayavani

ಯಾರಿಂದಲೂ ದಬ್ಬಿಸಿಕೊಂಡು ಹೋಗಲ್ಲ - ಕೆಲಸ ಮಾಡದಿದ್ರೆ ಗೌರಯುತ ನಿರ್ಗಮನ - ಎಚ್‌ಡಿಕೆಯಿಂದ ರಾಜಕೀಯ ನಿವೃತ್ತಿ ಮಾತು        ಅಕ್ಟೋಬರ್‌ 10 ರೊಳಗೆ ಸಂಪುಟ ವಿಸ್ತರಣೆ - ಅತೃಪ್ತಿ ಶಮನಕ್ಕೆ ಶೀಘ್ರ ಕ್ರಮ - ಬ್ಲ್ಯಾಕ್‌ಮೇಲರ್‌ಗಳಿಗೆ ವೇಣುಗೋಪಾಲ್‌ ವಾರ್ನಿಂಗ್‌        ದುನಿಯಾ ವಿಜಿ ದಾದಾಗಿರಿ - ವಿಕ್ರಂ ಆಸ್ಪತ್ರೆಗೆ ಸಿಸಿಬಿ ಪೊಲೀಸರ ಭೇಟಿ - ಮಾರುತಿ ಬಳಿ ಹೇಳಿಕೆ ಪಡೆಯದೆ ಪೊಲೀಸರು ವಾಪಸ್‌        ಜಿಮ್ ಟ್ರೈನರ್ ಮೇಲೆ ಹಲ್ಲೆ, ಕಿಡ್ನಾಪ್ ಕೇಸ್ - ಫಿಲಂ ಚೇಂಬರ್​ನಿಂದ ನಾಳೆ ಮೀಟಿಂಗ್ - ದುನಿಯಾ ವಿಜಿ ವಿರುದ್ಧ ಕ್ರಮ ಸಾಧ್ಯತೆ        ಆಯುಷ್ಮಾನ್ ಭಾರತ್ ಯೋಜನೆ ಜಾರಿ - 50 ಕೋಟಿ ಜನರಿಗೆ ಲಾಭ, 5 ಲಕ್ಷವರೆಗೆ ವಿಮೆ - ರಾಂಚಿಯಲ್ಲಿ ಪ್ರಧಾನಿಯಿಂದ ಚಾಲನೆ        ಆಂಧ್ರದಲ್ಲಿ ಹಾಡಹಗಲೇ ನಕ್ಸಲರ ಅಟ್ಟಹಾಸ - ಶಾಸಕ, ಮಾಜಿ ಶಾಸಕನ ಭೀಕರ ಹತ್ಯೆ - 50ಕ್ಕೂ ಹೆಚ್ಚು ನಕ್ಸಲರಿಂದ ರಕ್ತದೋಕುಳಿ       
Breaking News

ಶಾಲೆ ಪ್ರಾರಂಭವಾಗಿ ಒಂದೂವರೆ ತಿಂಗಳಾದರೂ ಬಿಬಿಎಂಪಿ ಶಾಲಾ ಮಕ್ಕಳಿಗೆ ಸಿಕ್ಕಿಲ್ಲ ಸಮವಸ್ತ್ರ

Tuesday, 10.07.2018, 12:10 PM       No Comments

ಬೆಂಗಳೂರು: ಮೇ ತಿಂಗಳ ಕೊನೆಯ ವಾರದಿಂದಲೇ ಪ್ರಸಕ್ತ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ತರಗತಿ ಆರಂಭವಾಗಿದ್ದರೂ ಬಿಬಿಎಂಪಿ ವ್ಯಾಪ್ತಿಯ ಶಾಲಾ ಮಕ್ಕಳು ಸಮವಸ್ತ್ರಕ್ಕಾಗಿ ಇನ್ನೂ ಪರದಾಡುತ್ತಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 90 ನರ್ಸರಿ, 15 ಪ್ರಾಥಮಿಕ ಶಾಲೆ, 32 ಪ್ರೌಢಶಾಲೆ ಹಾಗೂ 14 ಪದವಿ ಪೂರ್ವ ಕಾಲೇಜು ಹಾಗೂ ಆರೇಳು ಪದವಿ ಕಾಲೇಜುಗಳಿದ್ದು, ಸುಮಾರು 22 ಸಾವಿರ ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲರಿಗೂ ಬಿಬಿಎಂಪಿಯೇ ಸಮವಸ್ತ್ರ, ಶೂ, ಸಾಕ್ಸ್‌ ವಿತರಿಸಬೇಕಿದೆ.

ಬಿಬಿಎಂಪಿ ಶಾಲಾ ಮಕ್ಕಳಿಗೆ ಪ್ರವೇಶಾತಿ ಪಡೆಯುವ ಸಮಯದಲ್ಲೇ ಮಕ್ಕಳಿಗೆ ಸಮವಸ್ತ್ರ ಸೇರಿ ಎಲ್ಲ ಸೌಕರ್ಯ ನೀಡುವುದಕ್ಕೆ ಮೂರು ವರ್ಷಗಳಿಗೆ ಟೆಂಡರ್​ ಕರೆಯಲಾಗಿತ್ತು. ಆದರೆ ಗುತ್ತಿಗೆದಾರರಿಗೆ ಕಳೆದ ವರ್ಷದ ಬಿಲ್ ಪಾವತಿಸಿಲ್ಲ. ಆ ಕಾರಣ ಈ ಬಾರಿ ಗುತ್ತಿಗೆದಾರರು ಇನ್ನೂ ಸಮವಸ್ತ್ರ ಪೂರೈಕೆ ಮಾಡುವಲ್ಲಿ ವಿಳಂಬ ಮಾಡುತ್ತಿದ್ದಾರೆ.

ಕಳೆದ ವರ್ಷದ್ದೇ ಸುಮಾರು ನಾಲ್ಕು ಕೋಟಿ ರೂ. ಬಿಲ್​ ಕಟ್ಟಬೇಕಿದೆ. ಆ ಹಣ ಬಂದ ಕೂಡಲೇ ನಿಯಮದ ಪ್ರಕಾರ ಮೆಟೀರಿಯಲ್ ಪೂರೈಕೆ ಮಾಡುತ್ತೀವಿ ಎಂದು ಗುತ್ತಿಗೆ ಪಡೆದ ಎಲ್​ವಿಟಿ ಕಂಪನಿ ಹೇಳುತ್ತಿದೆ. ಪಾಲಿಕೆ ಹಾಗೂ ಗುತ್ತಿಗೆದಾರರ ನಡುವಿನ ಕಿತ್ತಾಟದಿಂದಾಗಿ ವಿದ್ಯಾರ್ಥಿಗಳು ಸಮವಸ್ತ್ರವಿಲ್ಲದೇ ಪಾಠ ಕೇಳುವ ಸ್ಥಿತಿ ಬಂದಿದೆ. (ದಿಗ್ವಿಜಯ ನ್ಯೂಸ್​)

 

Leave a Reply

Your email address will not be published. Required fields are marked *

Back To Top