Wednesday, 21st March 2018  

Vijayavani

ಸದ್ಯಕ್ಕಿಲ್ಲ ರೋಹಿಣಿ ಸಿಂಧೂರಿ ವರ್ಗಾವಣೆ - ಸರ್ಕಾರದ ಆದೇಶಕ್ಕೆ ತಡೆ - ಹೊಸ ಆದೇಶಕ್ಕೆ ಸಿಎಟಿ ಸೂಚನೆ        ಇರಾಕ್‌ನಲ್ಲಿ ಭಾರತೀಯರ ಹತ್ಯೆಗೆ ವಿಪಕ್ಷ ಖಂಡನೆ - ಕಲಾಪದ ಆರಂಭದಲ್ಲೇ ಗದ್ದಲ ಕೋಲಾಹಲ - ರಾಜ್ಯಸಭಾ ಕಲಾಪ ನಾಳೆಗೆ ಮುಂದೂಡಿಕೆ        ಕೈ ಕೊಟ್ಟು ತೆನೆ ಇಳಿಸಿ ಕಮಲ ಮುಡಿದ ನಡಹಳ್ಳಿ - ಬಿಜೆಪಿ ಸೇರಿದ ಎ.ಎಸ್‌ ಪಾಟೀಲ್ - ಬಿಎಸ್‌ವೈ ಸಮ್ಮುಖದಲ್ಲಿ ಸೇರ್ಪಡೆ        ಬೆಂಗಳೂರಲ್ಲಿ ಮಿತಿ ಮೀರಿದ ಸರಗಳ್ಳರ ಹಾವಳಿ - ವಿದ್ಯಾರಣ್ಯಪುರದಲ್ಲಿ ಚೈನ್ ಸ್ನ್ಯಾಚಿಂಗ್ - ವೃದ್ಧೆಯ 16 ಗ್ರಾಂ ಸರ ಕಸಿದ ಖದೀಮರು        ಕಾಫಿನಾಡಲ್ಲಿ ರಾಹುಲ್‌ ಯಾತ್ರೆ - ಶೃಂಗೇರಿಗೆ ಎಐಸಿಸಿ ಅಧ್ಯಕ್ಷರ ಭೇಟಿ - ಸಂಜೆ ಹಾಸನದಲ್ಲಿ ಕಾಂಗ್ರೆಸ್ ರಣಕಹಳೆ       
Breaking News

ಕಳಸಾ-ಬಂಡೂರಿ: ಕಣಕುಂಬಿಗೆ ಭೇಟಿ ನೀಡಿದ ಗೋವಾ ಸಚಿವ ಪಾಲ್ಯೇಕರ್

Saturday, 13.01.2018, 6:23 PM       No Comments

ಪಣಜಿ: ಮಹದಾಯಿ ನೀರನ್ನು ಕರ್ನಾಟಕಕ್ಕೆ ಬಿಡಲು ವಿರೋಧಿಸುತ್ತಿರುವ ಗೋವಾ ರಾಜ್ಯ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್, ಪೊಲೀಸ್ ಭದ್ರತೆಯಲ್ಲಿ ಕಳಸಾ-ಬಂಡೂರಿ ನಾಲೆ ನಿರ್ಮಾಣದ ಕಣಕುಂಬಿ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಕರ್ನಾಟಕ ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತಿದೆ. ಈ ಕುರಿತು ನ್ಯಾಯಾಧಿಕರಣದಲ್ಲಿ ದೂರು ಸಲ್ಲಿಸಲಾಗುವುದು. ಮಹದಾಯಿ ನಮ್ಮ ತಾಯಿ. ಅದನ್ನು ರಕ್ಷಿಸಲು ನಾವು ಬದ್ಧ. ಆದರೆ, ಈ ವಿಷಯದಲ್ಲಿ ಕರ್ನಾಟಕ ರಾಜಕೀಯ ಆಟವಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಲಯದಲ್ಲಿ ದೂರು
ನ್ಯಾಯಾಧಿಕರಣದ ಸ್ಪಷ್ಟ ಸೂಚನೆಯಿದ್ದರೂ ಕರ್ನಾಟಕ, ಕಳಸಾ-ಬಂಡೂರಿ ನಾಲಾ ನಿರ್ವಿುಸುತ್ತಿದೆ. ಈ ಕುರಿತು ಫೆಬ್ರವರಿ 6ರಿಂದ ಆರಂಭವಾಗುವ ನ್ಯಾಯಾಧಿಕರಣದಲ್ಲಿ ದೂರು ಸಲ್ಲಿಸಲಾಗುವುದು ಎಂದು ಸಾಲಿಸಿಟರ್ ಜನರಲ್ ಆತ್ಮಾರಾಮ ನಾಡಕರ್ಣಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ‘ಕರ್ನಾಟಕವು ಕಳಸಾ ನಾಲೆಗೆ ಅಣೆಕಟ್ಟು ನಿರ್ವಿುಸಿದರೆ, ಗೋವಾಕ್ಕೆ ಮಹದಾಯಿ ನದಿಯ ಒಂದು ಹನಿ ನೀರು ಬರುವುದಿಲ್ಲ. ಕರ್ನಾಟಕವು ಈ ಭಾಗದ ನೀರನ್ನು ಮಲಪ್ರಭೆಗೆ ಬಿಡಲು ಯೋಚಿಸಿದೆ. ಅದರ ವಿರುದ್ಧ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top