Sunday, 21st January 2018  

Vijayavani

ಬಳ್ಳಾರಿಯಲ್ಲಿ ಮನೆಗೆ ಬಂದ ಜಾಂಬವಂತ- ಚಿರತೆ ಭಯದಿಂದ ತುಮಕೂರಲ್ಲಿ ಮನೆ ಬಿಟ್ಟ ಕುಟುಂಬ- ರಾಜ್ಯದಲ್ಲಿ ಹೆಚ್ಚಿದ ಕಾಡುಪ್ರಾಣಿಗಳ ಉಪಟಳ        ಕೊಳ್ಳೇಗಾಲದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ- ಮಾದಪ್ಪನ ಬೆಟ್ಟದಲ್ಲಿ ಬಿಎಸ್​ವೈ ವಿಶೇಷ ಪೂಜೆ - ಫ್ಲೆಕ್ಸ್​​ ವಿಚಾರವಾಗಿ ಕಾರ್ಯಕರ್ತರ ಗಲಾಟೆ        ಹೆಲ್ಮೆಟ್​ ಧರಿಸಿ ಬಂದ ಕದೀಮ- ನರ್ಸ್​ ಇರುವಾಗಲೇ ಕ್ಯಾಶ್ ಎಗರಿಸಿದ- ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಹಗಲು ದರೋಡೆ        ದೆಹಲಿ ಅಗ್ನಿ ಅವಘಡದಲ್ಲಿ 17 ಮಂದಿ ಸಜೀವದಹನ- ಪಟಾಕಿ ಕಾರ್ಖಾನೆ ಮಾಲೀಕನ ಬಂಧನ- ಮೃತರಿಗೆ 5 ಲಕ್ಷ ಪರಿಹಾರ (ಕಾರ್ಖಾನೆ ಮಾಲೀಕನ ಬಂಧನ)        ಲಾಲ್​​ಬಾಗ್​ನಲ್ಲಿ ಪುಷ್ಪ ಪ್ರದರ್ಶನ- ಸಸ್ಯಕಾಶಿಗೆ ಹರಿದು ಬಂದ ಜನ- ಲಾಲ್​ಬಾಗ್​ ಸುತ್ತಮುತ್ತ ಭಾರಿ ಟ್ರಾಫಿಕ್​       
Breaking News :

ಚಿನ್ನ ಡಬ್ಕು ಡಬಲ್! ತಗ್ಲಾಕೊಂಡ ಮೌಲ್ವಿಗೆ ಥಳಿತ​

Saturday, 07.10.2017, 3:35 PM       No Comments

ಬಳ್ಳಾರಿ: ಜನರ ನಂಬಿಕೆಯನ್ನ ಬಂಡವಾಳವನ್ನಾಗಿ ಮಾಡಿಕೊಂಡು ವಂಚಿಸುವ ಮೋಸಗಾರರಿಗೆ ಸಮಾ ಶಿಕ್ಷೆಯಾಗಬೇಕು. ಚಿನ್ನಾಭರಣ ಡಬಲ್​ ಮಾಡೋದಾಗಿ ನಂಬಿಸಿ, ವಂಚಿಸುತ್ತಿದ್ದ ಮೌಲ್ವಿಯೊಬ್ಬನಿಗೆ ಮಹಿಳೆಯರು ಹಿಗ್ಗಾಮುಗ್ಗಾ ಗೂಸಾ ನೀಡಿರುವ ಘಟನೆ ಬಳ್ಳಾರಿಯ ಹೊಸ ಯರ್ರಾಗುಡಿಯಲ್ಲಿ ಶುಕ್ರವಾರ ನಡೆದಿದೆ.

ಹೊಸ ಯರ್ರಾಗುಡಿಯಲ್ಲಿ ಗ್ರಾಮಸ್ಥರ ಮನೆಗಳಿಗೆ ಊಟಕ್ಕೆ ಹೋಗ್ತಿದ್ದ ಮೌಲ್ವಿ ಖಾದರ್​ ಭಾಷಾ ಎಂಬಾತ ಚಿನ್ನಾಭರಣ ಅಕ್ಕಿಯಿಲ್ಲಿಟ್ಟು ಡಬಲ್ ಮಾಡೋದಾಗಿ ನಂಬಿಸಿ, ಮೋಸ ಮಾಡುತ್ತಿದ್ದ.

ಈತನನ್ನು ನಂಬಿದ ಗ್ರಾಮದ 8 ರಿಂದ 10 ಜನರು ಮೋಸ ಹೋಗಿದ್ದರು. ಜನರಿಂದ ಖಾದರ್ ​ಭಾಷಾ ಸುಮಾರು 8 ತೊಲೆ ಬಂಗಾರ, ಒಂದೂವರೆ ಲಕ್ಷ ರೂಪಾಯಿ ಹಣ ವಂಚಿಸಿ ಪರಾರಿಯಾಗಿದ್ದ.

ಕೊಪ್ಪಳದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಮೌಲ್ವಿಯನ್ನು ಹಿಡಿದುತಂದ ಗ್ರಾಮಸ್ಥರು ಆತನಿಗೆ ಬಿಸಿ ಬಿಸಿ ಕಜ್ಜಾಯ ಕೊಟ್ಟು ಗ್ರಾಮದಲ್ಲಿ ಮಹಾನುಭಾವನನ್ನು ಮೆರವಣಿಗೆ ಮಾಡಿದ್ದಾರೆ. ನಂತರ ಹೆಚ್ಚಿನ ಸತ್ಕಾರಕ್ಕಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top