Wednesday, 19th September 2018  

Vijayavani

ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ಹೈಕಮಾಂಡ್​​ ಅಂಗಳಕ್ಕೆ ಅತೃಪ್ತರ ಪುರಾಣ - ರಾಹುಲ್​​ ಜತೆ ಇಂದು ಸಿದ್ದರಾಮಯ್ಯ ಚರ್ಚೆ        ರಣೋತ್ಸಾಹದಲ್ಲಿ ಕಮಲ ಪಾಳಯ - ಇಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​​ನಲ್ಲಿ ಶಾಸಕಾಂಗ ಸಭೆ        ಸಚಿವ ಡಿಕೆಶಿಗೆ ಫುಡ್​​ ಪಾಯ್ಸನ್​ - ಅಪೋಲೋ ಆಸ್ಪತ್ರೆಯಲ್ಲಿ ಸಚಿವರಿಗೆ ಟ್ರೀಟ್​ಮೆಂಟ್​ - ಸಂಜೆ ಡಿಸ್ಚಾರ್ಜ್ ಸಾಧ್ಯತೆ        ರಾಮಚಂದ್ರಾಪುರ ಮಠದ ಕೈತಪ್ಪಿದ ಗೋಕರ್ಣ ದೇಗುಲ - ಶ್ರೀ ಮಹಾಬಲೇಶ್ವರ ದೇವಸ್ಥಾನ ಸರ್ಕಾರದ ಸುಪರ್ದಿಗೆ        ದುಬೈ ಅಂಗಳದಲ್ಲಿಂದು ಭಾರತ- ಪಾಕ್​​ ಕಾಳಗ - ರೋಹಿತ್​​​​ ಪಡೆ ವಿರುದ್ಧ ಸರ್ಫರಾಜ್​ ಟೀಮ್​​ ತಂತ್ರ       
Breaking News

ಅಪರಿಚಿತರಿಂದ ಚಿನ್ನದ ಬಳೆ ಮತ್ತು ಸರ ಅಪಹರಣ

Friday, 13.07.2018, 5:00 AM       No Comments

ಕೃಷ್ಣರಾಜಸಾಗರ: ಇಲ್ಲಿನ ಪೇಪರ್ ಮಿಲ್ ಸರ್ಕಲ್ ಬಳಿ ಗೌರಮ್ಮ ಎಂಬುವರಿಗೆ ಅಪರಿಚಿತ ಮಹಿಳೆ ಹಣದ ಆಮಿಷವೊಡ್ಡಿ ಚಿನ್ನದ ಬಳೆ ಮತ್ತು ಸರವನ್ನು ಕಸಿದು ಪರಾರಿಯಾಗಿದ್ದಾಳೆ.

ಕೆನರಾ ಬ್ಯಾಂಕ್‌ಗೆ ತೆರಳಲು ವೃದ್ಧೆ ಗೌರಮ್ಮ ಪೇಪರ್ ಮಿಲ್ ಸರ್ಕಲ್ ಬಳಿ ಬಸ್ ಇಳಿದು ನಡೆದು ಹೋಗುತ್ತಿರುವಾಗ ಹಿಂದಿನಿಂದ ಬಂದ ಸುಮಾರು 30 ರಿಂದ 40 ವರ್ಷದ ಅಪರಿಚಿತ ಮಹಿಳೆ ಹಣದ ಚೀಲ ಸಿಕ್ಕಿದ್ದು, ಇದು ನಿಮ್ಮದಿರಬಹುದು ಎಂದು ಗೌರಮ್ಮರನ್ನು ಕೇಳಿದ್ದಾಳೆ. ಬಳಿಕ ಹಣದ ಆಸೆ ತೋರಿಸಿ, ಖಾಲಿ ಜಾಗದಲ್ಲಿ ಹಣ ಹಂಚಿಕೊಳ್ಳೋಣ ಎಂದು ಕರೆದೊಯ್ದಿದ್ದಾಳೆ.

ತಕ್ಷಣ ಅಲ್ಲಿಗೆ ಬಂದ ವ್ಯಕ್ತಿ, ಹಣದ ಚೀಲ ನನ್ನದು. ರಸ್ತೆಯಲ್ಲಿ ಬಿದ್ದು ಹೋಗಿತ್ತು ಎಂದು ಗಲಾಟೆ ತೆಗೆದಿದ್ದಾನೆ. ಹಳೇ ಕಾಲದ ಆಭರಣವನ್ನು ಮುಟ್ಟಿ ಆಣೆ ಮಾಡುವಂತೆ ಪಟ್ಟು ಹಿಡಿದಾಗ ಗೌರಮ್ಮರ ಚಿನ್ನದ ಬಳೆ ಮತ್ತು ಸರವನ್ನು ಬಿಚ್ಚಿ ಸೆರಗಿನ ಬಟ್ಟೆಯಲ್ಲಿ ಸುತ್ತಿ ಕಣ್ಣುಮುಚ್ಚಿ ಆಣೆ ಮಾಡಿದ್ದಾಳೆ. ಅಲ್ಲದೆ ಸೀರೆ ಸೆರಗನ್ನು ಬಿಡಿಸಬಾರದು ಎಂದು ನಂಬಿಸಿ ಇಬ್ಬರು ಅಪರಿಚಿತರು ಸ್ಥಳದಿಂದ ತೆರಳಿದ್ದಾರೆ.

ಬಳಿಕ ಅಲ್ಲಿಂದ ಸ್ವಲ್ಪ ದೂರ ಬಂದ ಗೌರಮ್ಮ ಸೆರಗು ಬಿಚ್ಚಿ ನೋಡಿದಾಗ ಕಲ್ಲು ಇರುವುದನ್ನು ಕಂಡು ಕಿರುಚಾಡಿದ್ದಾರೆ. ತಕ್ಷಣ ಸ್ಥಳೀಯರು ಹುಡುಕಾಡಿದರಾದರೂ ಯಾರೂ ಪತ್ತೆಯಾಗಲಿಲ್ಲ.

ಗೌರಮ್ಮ ನೀಡಿದ ದೂರಿನ ಮೇರೆಗೆ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back To Top