Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಮಾಫಿಯಾ ಪೀಕಲಾಟ: ಗೋವಾದ ಸಚಿವನಿಗೆ ಬೀಚುಗಳಲ್ಲಿ ಅಡ್ಡಾಡುವುದಕ್ಕೆ ಭಯವಂತೆ!

Wednesday, 13.09.2017, 7:02 PM       No Comments

ಪಣಜಿ: ಡ್ರಗ್ಸ್​ ಮಾಫಿಯಾದ ಬೆದರಿಕೆಯಿಂದಾಗಿ ಗೋವಾದ ಸುಂದರ ಬೀಚ್​ಗಳಲ್ಲಿ ಅಡ್ಡಾಡುವುದಕ್ಕೆ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗೋವಾದ ಸಚಿವರೊಬ್ಬರು ತಿಳಿಸಿದ್ದಾರೆ.

ನನಗೆ ಡ್ರಗ್ಸ್​ ಮಾಫಿಯಾದಿಂದ ಬೆದರಿಕೆ ಇದೆ. ಜತೆಗೆ ಹಲವರು ನನ್ನನ್ನು ಹಿಂಬಾಲಿಸುತ್ತಿದ್ದಾರೆ. ಇದರಿಂದಾಗಿ ನಾನು ಬೆಳಗಿನ ಸಮಯದಲ್ಲಿ ಬೀಚ್​ನಲ್ಲಿ ಓಡಾಡುವುದನ್ನು ಬಿಟ್ಟಿದ್ದೇನೆ. ನನ್ನ ಮನೆಯ ಟೆರೇಸ್​ನಲ್ಲೇ ನಾನು ವಾಕಿಂಗ್​ ಮಾಡುತ್ತಿದ್ದೇನೆ ಎಂದು ಸ್ವತಃ ಗೋವಾದ ಮೀನುಗಾರಿಕೆ ಸಚಿವ ವಿನೋದ್​ ಪಾಲಿನ್ಕರ್​ ತಿಳಿಸಿದ್ದಾರೆ.

ಸಿಯೋಲಿಮ್​ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಸಚಿವರು ಡ್ರಗ್ಸ್​ ಮಾಫಿಯಾದ ಬೆದರಿಕೆ ಕುರಿತು ಗೋವಾದ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದಾರೆ. ಪ್ರಧಾನ ಕಾರ್ಯದರ್ಶಿ ಸಚಿವರಿಗೆ ರಕ್ಷಣೆಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ವಿನೋದ್​ ಪಾಲಿನ್ಕರ್​ ಅವರು ಗೋವಾದ ಬೀಚ್​ಗಳಲ್ಲಿ ನಡೆಯುವ ರೇವ್​ ಪಾರ್ಟಿಗಳನ್ನು ವಿರೋಧಿಸಿದ್ದರು. ಅದರಲ್ಲೂ ಪ್ರಮುಖವಾಗಿ ಅಂಜುನಾ ಮತ್ತು ಚಾಪೋರಾ ಬೀಚ್​ಗಳಲ್ಲಿ ಆಯೋಜಿಸಲಾಗುವ ಪಾರ್ಟಿಗಳತ್ತ ಬೊಟ್ಟು ಮಾಡಿದ್ದರು. ಈ ಎರಡು ಬೀಚ್​ಗಳಲ್ಲಿ ಆಯೋಜಿಸಲಾಗುವ ರೇವ್​ ಪಾರ್ಟಿಗಳಲ್ಲಿ ಡ್ರಗ್ಸ್​ ಪೂರೈಕೆ ಯಥೇಚ್ಛವಾಗಿ ನಡೆಯುತ್ತದೆ ಎಂಬುದರ ಕುರಿತು ಅವರು ಮಾಹಿತಿ ಬಹಿರಂಗ ಪಡಿಸಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top