Sunday, 24th June 2018  

Vijayavani

ಕಾವೇರಿ ನೀರು ಪ್ರಾಧಿಕಾರ ಸಮಿತಿ ರಚನೆ - ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಸರ್ಕಾರದಿಂದ ಪುಸ್ತಕ        ಮಾಜಿ ಸಿಎಂ ಸಿದ್ದುಗೆ ಎಚ್​ಡಿಕೆ ಬಂಪರ್ ಆಫರ್​ - ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ?        ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಆರೋಪ - ಆತ್ಮಹತ್ಯೆ ಯತ್ನ - ಇದೆಲ್ಲಾ ಷಡ್ಯಂತ್ರ ಅಂದ್ರು ಮುನಿಯಪ್ಪ        ಕಲ್ಲಿನ ಹಾರ ಬೇಕಾದ್ರೆ ಕೊರಳಿಗೆ ಹಾಕಿ - ಸುಗಂಧರಾಜದ ಹೂವಿನ ಹಾರ ಬೇಡ್ವೇಬೇಡ - ಸಚಿವ ಡಿಕೆಶಿ ಆಕ್ಷೇಪ        ವಿದ್ಯುತ್ ಉಳಿಸಲು ಕೇಂದ್ರದ ಮೆಗಾ ಪ್ಲಾನ್ - ಇನ್ಮುಂದೆ 24 ಡಿಗ್ರಿಗೆ ಎಸಿ ಡಿಫಾಲ್ಟ್​ ಸೆಟ್ಟಿಂಗ್       
Breaking News

ಸೂಬ್ರತೋನ ಸಹಾರಾ ತ್ರಿಶಂಕು ಸ್ಥಿತಿಗೆ

Friday, 13.10.2017, 5:22 PM       No Comments

ನವದೆಹಲಿ: ಸ್ವರ್ಗವೇ ಧರೆಗಿಳಿದಿದೆ ಎಂದು ಬಿಂಬಿಸಿ ಭಾರತೀಯ ರಿಯಲ್ ಎಸ್ಟೇಟ್​ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಆ್ಯಂಬಿ ವ್ಯಾಲಿಯನ್ನು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಲು ಮತ್ತೆ ಯಾವುದೇ ಖರೀದಿದಾರರು ಮುಂದೆ ಬಂದಿಲ್ಲ. ಆದರೆ ಈ ಬಾರಿ ಕಾರಣ ವಿಚಿತ್ರವಾಗಿದೆ ಸಹಾರಾ ಕಂಪನಿಯ ಮಾಲೀಕ ಸುಬ್ರತಾ ರಾಯ್​ ಹಾಗೂ ಕಂಪನಿಯ ಉಳಿದ ನಿರ್ದೇಶಕರೇ ಹರಾಜು ಪ್ರಕ್ರಿಯೆಗೆ ಅಡ್ಡಿ ಪಡಿಸಿದರೆಂದು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ(SEBI) ಹೇಳಿದೆ.

SEBI ಪರ ವಕೀಲ ಅರವಿಂದ್​ ದತ್ತರ್​, ನ್ಯಾಯಮೂರ್ತಿಗಳಾದ ದೀಪಕ್​ ಮಿಶ್ರಾ, ರಂಜನ್​ ಗೋಗೊಯ್ ಮತ್ತು ಎ ಕೆ ಸಿಕ್ರಿಯವರಿದ್ದ ನ್ಯಾಯಪೀಠದ ಮುಂದೆ ಹಾಜರಾಗಿ ಆ್ಯಂಬಿ ವ್ಯಾಲಿ ಖರೀದಿಸಲು ಯಾರು ಮುಂದೆ ಬಂದಿಲ್ಲ ಎಂದು ತಿಳಿಸಿದ್ದಾರೆ.

ಯಮುನಾ ಹೆದ್ದಾರಿ 2500 ಕೋಟಿ ರೂ.ಗೆ ಮಾರಾಟ! ಯಾಕೆ ಗೊತ್ತಾ?

ಜತೆಗೆ ಹರಾಜು ಪ್ರಕ್ರಿಯೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ರಾಯ್ ಹಾಗೂ ಇತರ ನಿರ್ದೇಶಕರ ವಿರುದ್ಧ ಕ್ರಮ ಜರುಗಿಸವಂತೆ SEBI ನ್ಯಾಯ ಪೀಠವನ್ನು ಕೋರಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಈ ರೀತಿಯ ವರ್ತನೆಯನ್ನು ನ್ಯಾಯಾಲಯ ಸಹಿಸುವುದಿಲ್ಲ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರಿಗೆ ಮುಂದಿನ 48 ಗಂಟೆಗಳಲ್ಲಿ ಆ್ಯಂಬಿ ವ್ಯಾಲಿಯನ್ನು ಸಂಪೂರ್ಣವಾಗಿ SEBI ಗೆ ಒಪ್ಪಿಸ ಬೇಕು ಮತ್ತು ಕಂಪನಿಗೆ ನೇಮಿಸಿರುವ ತೀರ್ಪುಗಾರರು ಹಾಗೂ ನ್ಯಾಯಮೂರ್ತಿ ಎ ಕೆ ಓಕಾ ಅವರ ಮಾರ್ಗದರ್ಶನದಲ್ಲಿ ಹರಾಜು ಪ್ರಕ್ರಿಯೆ ನಡೆಸ ಬೇಕು ಎಂದು ನ್ಯಾಯಪೀಠ ಹೇಳಿದೆ.

ಸಹಾರಾ ಗ್ರೂಪ್​ ಆ್ಯಂಬಿ ವ್ಯಾಲಿಯ ಲಿಮಿಟೆಡ್​ನ ಎಲ್ಲ ವ್ಯವಹಾರಗಳನ್ನು ನಿಲ್ಲಿಸಿದ ಮೇಲೆ ಮಹಾರಾಷ್ಟ್ರ ಪೊಲೀಸರು ಆ್ಯಂಬಿ ವ್ಯಾಲಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top