Saturday, 22nd September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ವಯಸ್ಸಾಗಿದೆ ಎಂದು ಯಾಮಾರಿದರೆ ಯುವತಿಯರಿಗೆ ಕಿರುಕುಳ ಗ್ಯಾರಂಟಿ!

Saturday, 17.03.2018, 1:11 PM       No Comments

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಓಡಾಡುವ ಮಹಿಳೆಯರು ಎಚ್ಚರದಿಂದ ಇರಬೇಕು. ಸ್ವಲ್ಪ ಯಾಮಾರಿದರೂ ಕಾಮುಕರು ಬಸ್‌ನಲ್ಲಿ ಎಲ್ಲರೆದುರೇ ಕಿರುಕುಳ ಕೊಡುತ್ತಾರೆ.

ಇಂತದ್ದೇ ಒಂದು ಪ್ರಕರಣದಲ್ಲಿ ಬಸ್‌ನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ ತೋರಿದ ಮುದುಕನ ವಿರುದ್ಧ ಯುವತಿಯೊಬ್ಬಳು ಕೋರಮಂಗಲ ಪೊಲೀಸ್‌ ಠಾಣೆಗೆ ದೂರನ್ನು ದಾಖಲಿಸಿದ್ದಾಳೆ.

ಕೋರಮಂಗಲದ 100 ಅಡಿ ರಸ್ತೆಯ ಈಝೋನ್‌ ಬಳಿ ಬಸ್‌ನಲ್ಲಿ ತೆರಳುತ್ತಿದ್ದಾಗ ಮಾ.13ರ ರಾತ್ರಿ 8 ಗಂಟೆ ಸುಮಾರಿನಲ್ಲಿ ಯುವತಿ ಕುಳಿತಿದ್ದ ಸೀಟ್‌ ಪಕ್ಕದಲ್ಲಿಯೇ ನಿಂತಿದ್ದ 65 ವರ್ಷದ ಮುದುಕ ಅಸಭ್ಯವಾಗಿ ವರ್ತಿಸಿದ್ದಾನೆ.

ಪಕ್ಕದಲ್ಲಿಯೇ ನಿಂತಿದ್ದ ಮುದುಕನನ್ನು ನೋಡಿ ಕುಳಿತುಕೊಳ್ಳುತ್ತೀರಾ ಎಂದು ಕೇಳಿದ ಯುವತಿಗೆ ಬೇಡ ನೀವೆ ಕುಳಿತುಕೊಳ್ಳಿ ಎಂದು ಹೇಳಿದ ಕಾಮುಕ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಇದೇನು ಮಾಡುತ್ತಿದ್ದೀರ ಎಂದು ಪ್ರಶ್ನಿಸಿದ ಯುವತಿಯ ವಿರುದ್ಧವೇ ತಿರುಗಿ ಬಿದ್ದ ಮುದುಕ ಎಗರಾಡಿದ್ದಾನೆ.

ನಂತರ ಸಹ ಪ್ರಯಾಣಿಕರು ನಿಮ್ಮ ತಂದೆಯ ವಯಸ್ಸಾಗಿದೆ ಹೋಗಲಿ ಬಿಡಮ್ಮ ಎಂದಿದ್ದಾರೆ. ಆಗ ಬಸ್‌ ಚಾಲಕ ಮತ್ತು ನಿರ್ವಾಹಕ ಕಾಮುಕನನ್ನು ಬಸ್‌ನಿಂದ ಇಳಿಸಿದ್ದಾರೆ.

ಘಟನೆಯಿಂದ ಬೇಸತ್ತ ಯುವತಿ ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದಾಳೆ. (ದಿಗ್ವಿಜಯ ನ್ಯೂಸ್)

 

 

Leave a Reply

Your email address will not be published. Required fields are marked *

Back To Top