Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಬಾಲಕಿಗೆ ಹೃದಯದಲ್ಲಿ ರಂಧ್ರ: ದಿಗ್ವಿಜಯ ನ್ಯೂಸ್​ಗೆ ಮಿಡಿದ ಸಚಿವ ಜಮೀರ್

Saturday, 14.07.2018, 2:01 PM       No Comments

ಮೈಸೂರು: ಮೂರು ವರ್ಷದ ಕಂದಮ್ಮನ ಹೃದಯದಲ್ಲಿದ್ದ ರಂಧ್ರ, ಅದಕ್ಕೆ ಚಿಕಿತ್ಸೆ ಕೊಡಿಸಲು ಕುಟುಂಬದವರ ಪರದಾಟಗಳ ಬಗ್ಗೆ ದಿಗ್ವಿಜಯ ನ್ಯೂಸ್ ನ ವರದಿಯಿಂದ ಎಚ್ಚೆತ್ತುಕೊಂಡ ಆಹಾರ ಸಚಿವ ಜಮೀರ್​ ಅಹಮದ್​ ಆಕೆಯ ಚಿಕಿತ್ಸೆಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ನಂಜನಗೂಡು ತಾಲೂಕಿನ ಮಹೇಂದ್ರ, ಗೌರಮ್ಮ ದಂಪತಿ ತಮ್ಮ ಮಗು ದೀಕ್ಷಿತಾಗೆ ಹೃದಯದಲ್ಲಿ ರಂಧ್ರವಿದೆ ಎಂದು ಗೊತ್ತಾದಾಗ ಶಾಕ್ ಆಗಿದ್ದರು. ಕಿತ್ತು ತಿನ್ನುವ ಬಡತನ. ಏಳು ವರ್ಷಗಳಿಂದ ಅಲೆದಾಡಿದರೂ ಬಿಪಿಎಲ್​ ಕಾರ್ಡ್​ ಸಿಕ್ಕಿರಲಿಲ್ಲ. ಬೀರದೇವನಪುರದ ಅಂಗನವಾಡಿಗೆ ಮಕ್ಕಳ ವೈದ್ಯಕೀಯ ಪರೀಕ್ಷೆಗಾಗಿ ಬಂದ ವೈದ್ಯರು ದೀಕ್ಷಿತಾಗೆ ಹೃದಯದಲ್ಲಿ ಸಮಸ್ಯೆ ಇದೆ. ಶಸ್ತ್ರಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕು ಎಂದು ತಿಳಿದಾಗ ಅಕ್ಷರಶಃ ಕಂಗಾಲಾಗಿದ್ದರು.
ಬಿಪಿಎಲ್​ ಕಾರ್ಡ್​ ಇದ್ದಿದ್ದರೆ ನಾರಾಯಣ ಹೃದಯಾಲಯದಲ್ಲಿ ಉಚಿತ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಅದೂ ಇಲ್ಲ ಎಂದು ಅಲವತ್ತುಕೊಳ್ಳುತ್ತಿದ್ದರು. ಈ ಬಗ್ಗೆ ದಿಗ್ವಿಜಯ ನ್ಯೂಸ್​ ಇಂದು ಬೆಳಗ್ಗೆ ವರದಿ ಮಾಡಿತ್ತು. ಅದನ್ನು ನೋಡಿದ ಕೂಡಲೇ ಆಹಾರ ಸಚಿವ ಜಮೀರ್​ ಅಹ್ಮದ್​, ಬಡ ಕುಟುಂಬಕ್ಕೆ ಬಿಪಿಎಲ್​ ಕಾರ್ಡ್​ ಒದಗಿಸುತ್ತೇವೆ. ಕೂಡಲೇ ಚಿಕಿತ್ಸೆ ಪ್ರಾರಂಭ ಮಾಡಿ ಎಂದಿದ್ದಾರೆ.

ಈಗ ಮೈಸೂರಿನ ನಾರಾಯಣ ಹೃದಯಾಲಯ ಉಚಿತ ಚಿಕಿತ್ಸೆಗೆ ಮುಂದಾಗಿದೆ. ಸೋಮವಾರ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಬರುವಂತೆ ಪಾಲಕರಿಗೆ ತಿಳಿಸಿದೆ. ಅಧಿಕಾರಿಗೂ ಬಿಪಿಎಲ್​ ಕಾರ್ಡ್​ ನೀಡಲು ವ್ಯವಸ್ಥೆ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top