Thursday, 19th July 2018  

Vijayavani

ಉಡುಪಿಯ ಶಿರೂರು ಶ್ರೀಗಳು ವೃಂದಾವನಸ್ಥ - ಚಿಕಿತ್ಸೆ ಫಲಕಾರಿಯಾಗದೇ ವಿಧಿವಶ - ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರು        ವಿವಿ ಸಿಂಡಿಕೇಟ್​​​​​​​​ ನಾಮನಿರ್ದೇಶಿತ ಸದಸ್ಯರ ರದ್ದು - ಸಿಎಂ ಎಚ್​ಡಿಕೆ ವಿರುದ್ಧ ಸಿಡಿದೆದ್ದ ಸಿದ್ದು - ಈ ಪ್ರಕರಣವನ್ನ ಸುಮ್ನೆ ಬಿಡಲ್ಲವೆಂದ ಮಾಜಿ ಸಿಎಂ        CWC ಸದಸ್ಯರಾದ ಸಿದ್ದರಾಮಯ್ಯಗೆ ಬಿಗ್​​​​​​​ ಶಾಕ್​​ - ಕ್ಯಾಬಿನೆಟ್ ಸ್ಥಾನಮಾನಕ್ಕೆ ಕೈ ನಾಯಕರೇ ಕೊಕ್ಕೆ - ಪರಂ,ಡಿಕೆಶಿಯಿಂದ ಮಾಸ್ಟರ್​ ಪ್ಲಾನ್​​        ಸಿಎಂ ಆದ ಬಳಿಕ ಕೊಡಗು ಜಿಲ್ಲೆಗೆ ಎಚ್​ಡಿಕೆ - ಹಾರಂಗಿ, ತಲಕಾವೇರಿಯಲ್ಲಿ ವಿಶೇಷ ಪೂಜೆ - ಮುಖ್ಯಮಂತ್ರಿಗೆ ಸ್ವಾಗತ ಕೋರಿದ ಫತಾಹ್​​​        ಬಿಟ್ಟ ಅಸ್ತ್ರವೇ ಜಮೀರ್​ಗೆ ತಿರುಗುಬಾಣ - ದೋಸ್ತಿ ವಿರುದ್ಧ ಹೋರಟಕ್ಕೆ ಬಿಜೆಪಿ ರಣತಂತ್ರ - ಸಚಿವರ ವಿರುದ್ಧ ಅನ್ವರ್ ಮಾಣಿಪ್ಪಾಡಿ ವರದಿ ಅಸ್ತ್ರ        ರಾತ್ರಿ ಬೀದಿ ನಾಯಿಗಳಿಗೆ ಊಟ ಹಾಕಿದ್ದೇ ತಪ್ಪಾಯ್ತು - ವಿದ್ಯಾರ್ಥಿನಿಗೆ ಸ್ಥಳೀಯರ ಕಿರಿಕ್​ - ಮಹಲಕ್ಷ್ಮಿ ಲೇಔಟ್​​​ನಲ್ಲಿ ಬೀದಿ ರಂಪಾಟ       
Breaking News

ತಾಯಿ ಎದುರೇ ನೀರಿನಲ್ಲಿ ಕೊಚ್ಚಿಹೋದ ಬಾಲಕಿ ಸಾವು

Monday, 09.07.2018, 7:47 PM       No Comments

ಶಿವಮೊಗ್ಗ: ಮಲೆನಾಡಿನಾದ್ಯಂತ ಸುರಿಯುತ್ತಿರುವ ಮಳೆಗೆ ಮನೆ ಎದುರಿನ ಹಳ್ಳದಲ್ಲಿ ತೇಲಿ ಹೋಗಿ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ.

ತೀರ್ಥಹಳ್ಳಿ ತಾಲೂಕು ಹೊನ್ನೆತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂದಾಳಬೈಲು ಸಮೀಪದ ದೊಡ್ಲಿ ಮನೆ ಗ್ರಾಮದಲ್ಲಿ ತಾಯಿ ಎದುರೇ ಬಾಲಕಿ ಆಶಿಕಾ(15) ಎಂಬಾಕೆ ಹಳ್ಳದಲ್ಲಿ ಕೊಚ್ಚಿಹೋಗಿದ್ದಾಳೆ.

ದೊಡ್ಲಿಮನೆ ಗ್ರಾಮದ ಯೋಗೇಂದ್ರ ಗೌಡ ಹಾಗೂ ಅನಿತಾ ಅವರ ಪುತ್ರಿ ಆಶಿಕಾ, ಅಮ್ಮನೊಂದಿಗೆ ಮನೆ ಎದುರು ಹರಿಯುತ್ತಿದ್ದ ಹಳ್ಳ ದಾಟಲು ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿದ್ದ ಅಡಕೆ ಮರದ ಸೇತುವೆ ಮೇಲೆ ನಡೆಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾಳೆ.

ಗುಡ್ಡೇಕೇರಿ ಸರ್ಕಾರಿ ಫ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿರುವ ಆಶಿಕಾ ತಂದೆ ಯೋಗೇಂದ್ರ ಗೌಡ ಕಳೆದ ವರ್ಷವಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದರು.

ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back To Top