Tuesday, 20th February 2018  

Vijayavani

ಸದನದಲ್ಲಿ ಶಾಸಕರಿಲ್ಲದೆ ಬಣಬಣ - ಇಂದಿನ ಕಲಾಪಕ್ಕೆ ಬರೀ 22 ಮಂದಿ ಹಾಜರ್​ - ಬಜೆಟ್​ ಅಧಿವೇಶನವೂ 3 ದಿನ ಮೊಟಕು.        ಒಬ್ಬರಿಗಿಂತ ಮತ್ತೊಬ್ಬ ಖತರ್ನಾಕ್​​ - ಎಂಎಲ್​ಎ ಪುತ್ರನ ಟೀಂನಲ್ಲಿ 8 ಮಂದಿ - ಇದು ನಲಪಾಡ್​​​​​ ಗ್ಯಾಂಗ್​ನ ಕಂಪ್ಲೀಟ್​ ಕಹಾನಿ.        ವಿದ್ವತ್​ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ - ಮೂಗಿನ ಮೂಳೆ‌ ಕಟ್​​​, ಮೂಖ ಊದಿಕೊಂಡಿದೆ - ಐಸಿಯುನಲ್ಲೇ ಚಿಕಿತ್ಸೆ ಅಂದ್ರು ಮಲ್ಯ ಆಸ್ಪತ್ರೆ ವೈದ್ಯರು.        ವಿದ್ವತ್​​​​​​​​​​ ಬಿಜೆಪಿ ಕಾರ್ಯಕರ್ತ ವಿಚಾರ - ವಿವಾದದ ಬಳಿಕ ತಪ್ಪು ಸರಿಪಡಿಸಿಕೊಂಡ ಬಿಜೆಪಿ - ಅವ್ರು ನಮ್ಮ ಕಾರ್ಯಕರ್ತನಲ್ಲ ಅಂತಾ ಅಮಿತ್ ಷಾ ಸ್ಪಷ್ಟನೆ.        ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ - ಚಲಿಸುತ್ತಿದ್ದ ಲಾರಿಯ ಟಯರ್ ಸ್ಫೋಟ - ಇಬ್ಬರ ದುರ್ಮರಣ, ಲಾರಿ ಚಾಲಕನ ಸ್ಥಿತಿ ಗಂಭೀರ.       
Breaking News

ಆಕ್ಸಿಜನ್ ಕಿಟ್ ಹಿಡಿದೇ ಭಾಷಣ ಮಾಡಿದ ಗಿರೀಶ್ ಕಾರ್ನಾಡ್

Sunday, 14.01.2018, 7:34 PM       No Comments

ಮೈಸೂರು: ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಜ್ಞಾನ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಆಕ್ಸಿಜನ್ ಕಿಟ್ ಅಳವಡಿಸಿಕೊಂಡೇ ಬಹುರೂಪಿ-2018 ರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾಗಿಯಾಗಿದ್ದಾರೆ.

ಆಕ್ಸಿಜನ್ ಕಿಟ್ ಹಿಡಿದು ವೇದಿಕೆ ಮೇಲೆ ಕುಳಿತ ಕಾರ್ನಾಡ್​, ಪ್ರೇಕ್ಷಕರಿಗೆ ಆಕ್ಸಿಜನ್ ಬಾಕ್ಸ್ ತೋರಿಸಿ ಭಾಷಣ ಪ್ರಾರಂಭಿಸಿದರು. ನನ್ನ ಎರಡೂ ಶ್ವಾಸಕೋಶಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದು ಮೂರನೇ ಪುಪ್ಪಸ. ಇದಿಲ್ಲದೇ ಇದ್ದರೆ ನನಗೆ ಉಸಿರಾಟದ ಸಮಸ್ಯೆ ಆಗುತ್ತದೆ ಎಂದರು.

ಇತ್ತೀಚೆಗೆ ನಾನು ಟೈಗರ್ ಜಿಂದಾ ಹೈ ಹಿಂದಿ ಚಿತ್ರದಲ್ಲೂ ಅಭಿನಯಿಸಿದ್ದೆ . ಅದರಲ್ಲೂ ಆಕ್ಸಿಜನ್ ಬಾಕ್ಸ್ ಹಾಕಿಕೊಂಡೇ ಅಭಿನಯಿಸಿದ್ದೇನೆ. ಚಿತ್ರ ನೋಡಿದವರು ಯಾವಾಗಲೂ ನೀವು ಮೇಕ್ ಅಪ್ ಮಾಡಿಕೊಂಡೇ ಓಡಾಡುತ್ತೀರಾ ಎಂದು ಕೇಳುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು. (ದಿಗ್ವಿಜಯ ನ್ಯೂಸ್) 

Leave a Reply

Your email address will not be published. Required fields are marked *

Back To Top