Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಗೌರಿ ಹತ್ಯೆ ತನಿಖೆಗೆ ಆಂಧ್ರ ನಕ್ಸಲ್​ ಪೊಲೀಸರ ನೆರವು

Sunday, 10.09.2017, 10:32 AM       No Comments

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್​ ಹಂತಕರನ್ನು ಪತ್ತೆ ಹಚ್ಚಲು ಹೆಣಗಾಡುತ್ತಿರುವ SIT ತಂಡ ಇದೀಗ ಆಂಧ್ರ ಪೊಲೀಸರ ನೆರವು ಯಾಚಿಸಿದೆ.

ಗೌರಿ ಹತ್ಯೆ ಪ್ರಕರಣದಲ್ಲಿ ನಕ್ಸಲರ ಕೈವಾಡ ತಳ್ಳಿಹಾಕುವಂತಿಲ್ಲ. ಎಲ್ಲಾ ಆಯಾಮಗಳಲ್ಲೂ ಹತ್ಯೆ ಪ್ರಕರಣವನ್ನು ಪರಿಶೀಲಿಸುತ್ತಿದ್ದೇವೆ. ಹಾಗಾಗಿ ಆಂಧ್ರ ನಕ್ಸಲರ ಬಗ್ಗೆ ಪರಿಣತಿ ಹೊಂದಿರುವ ಅಲ್ಲಿನ ಪೊಲೀಸರ ನೆರವು ಪಡೆಯುವುದಾಗಿ SIT ಮೂಲಗಳು ತಿಳಿಸಿವೆ.

SITಗೆ ನೆರವು ನೀಡಲು ಆಂಧ್ರ ಪ್ರದೇಶದ ವಿಶೇಷ ಪೊಲೀಸರ ತಂಡವೊಂದು ನಗರಕ್ಕೆ ಆಗಮಿಸಿದೆ. ಜತೆಗೆ SITಯ ಒಂದು ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು, ಮಾಹಿತಿ ಕಲೆ ಹಾಕುತ್ತಿದೆ. ದಕ್ಷಿಣ ಕನ್ನಡದಲ್ಲಿ 7 ನಕ್ಸಲರು ಸಕ್ರಿಯರಾಗಿದ್ದು, ಅವರು ಆಂಧ್ರಪ್ರದೇಶದ ನಕ್ಸಲರೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿದ್ದಾರೆ ಎಂದು ಮಾಹಿತಿ ಇದೆ ಎಂದು SITಯ ಮೂಲಗಳು ತಿಳಿಸಿವೆ.

ಇದೇ ಸಂದರ್ಭದಲ್ಲಿ ಗೌರಿ ಲಂಕೇಶ್​ ಅವರ ಹತ್ಯೆ ನಡೆದ ನಂತರ 40 ನಿಮಿಷಗಳವರೆಗೆ ಮಳೆ ಸುರಿದಿತ್ತು. ಇದರಿಂದಾಗಿ ಪ್ರಮುಖ ಸಾಕ್ಷಾಧಾರಗಳು ನೀರಿನಲ್ಲಿ ಕೊಚ್ಚಿಹೋಗಿರುವ ಸಾಧ್ಯತೆ ಇದೆ. ಕಾಂಪೌಂಡ್​, ಗೇಟ್​ ಮೇಲಿನ ಬೆರಳಚ್ಚು, ಕೂದಲು ಸೇರಿದಂತೆ ಪ್ರಮುಖ ಸಾಕ್ಷಿಗಳು ನಾಶವಾಗಿರಬಹುದು ಎಂದು SITಯ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top