Saturday, 26th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ಗೌರಿ ಹತ್ಯೆ: ಕೈಚೆಲ್ಲಿದ SIT – ಅಸಹಾಯಕತೆಯಿಂದ ಸಾರ್ವಜನಿಕರಿಗೆ ಮೊರೆ

Thursday, 07.09.2017, 8:10 PM       No Comments

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್​ ಭೀಕರ ಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುತುವರ್ಜಿ ವಹಿಸಿ ರಚಿಸಿದ್ದ So Called ಅತ್ಯಂತ ದಕ್ಷ ವಿಶೇಷ ತನಿಖಾ ತಂಡವು ಆರಂಭದಲ್ಲೇ ಕೈಚೆಲ್ಲಿ ಕುಳಿತಿದೆ.

ಹತ್ಯೆ ನಡೆದ ನಂತರ Golden Hour ನಲ್ಲಿ ಸ್ಥಳೀಯ ಪೊಲೀಸರು ತೋರುತ್ತಾ ಬಂದಿರುವ ಪೆದ್ದುತನಗಳಿಂದಾಗಿ ಪ್ರಕರಣದ ಮೇಲೆ ತಮ್ಮ ಹಿಡಿತ ಸಡಿಲಗೊಂಡಿರುದನ್ನು ಮನಗಂಡ SIT ಇದೀಗ ತಮ್ಮ ಮೊಬೈಲ್​ ನಂಬರ್​, ಈ ಮೇಲೆ ವಿಳಾಸ ನೀಡಿ, ಹತ್ಯೆ ಬಗ್ಗೆ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ ಎಂದು ಸಾರ್ವಜನಿಕರಿಗೆ ದುಂಬಾಲು ಬಿದ್ದಿದೆ.

Pls download Vijayavani Android App

ಘಟನೆ ನಡೆದ 2 ದಿನಗಳ ನಂತರ ಇದೀಗ ಗೌರಿ ಮನೆಯ ಕಾಂಪೌಂಡಿನಲ್ಲಿ 2 ಗುಂಡುಗಳು ಪತ್ತೆಯಾಗಿವೆ ಎಂದಿದ್ದಾರೆ. ಘಟನಾ ಸ್ಥಳದಲ್ಲಿ ಮಹಜರು ನಡೆಸುವಾಗ ಈ ಗುಂಡುಗಳು ಪೊಲೀಸರ ಕಣ್ಣಿಗೆ ಬೀಳಲಿಲ್ಲವೇ? ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿ ದಿಗ್ಭಂಧನ ವಿಧಿಸದೆ, ಜನ ಜಂಗುಳಿ ಸೇರುತ್ತಿದ್ದರೂ ಪೊಲೀಸರು ಕೈ ಕಟ್ಟಿಕೊಂಡು ಬೆದರು ಬೊಂಬೆಗಳಂತೆ ನಿಂತಿದ್ದೇಕೆ? ಎಂಬ ಪ್ರಶ್ನೆ ಕಾಡ ತೊಡಗಿದೆ.

ಏನೇ ಆಗಲಿ Golden Hourನಲ್ಲಿ ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕದೇ ಇದೀಗ ಸಾರ್ವಜನಿಕರ ಮೊರೆ ಹೋಗಿರುವುದು SIT ಕಾರ್ಯಕ್ಷಮತೆಯ ಮೇಲೆ ಸಂದೇಹ ಮೂಡುವಂತೆ ಮಾಡಿದೆ. ಇದೂ ಇನ್ನೊಂದು ಕಲಬುರ್ಗಿ ಹತ್ಯೆ ಪ್ರಕರಣದಂತೆ ಹಳ್ಳ ಹಿಡಿಯುತ್ತದೋ ಅಥವಾ ಗೌರಿ ಸೋದರ ಇಂದ್ರಜೀತ್​ ಲಂಕೇಶ್​ ಬಯಸಿದಂತೆ ತಕ್ಷಣ CBI ರಂಗ ಪ್ರವೇಶಿಸಿ ಹಂತಕರನ್ನು ಹೆಡೆಮುರಿಗೆ ಕಟ್ಟುತ್ತದೆಯಾ ಕಾದು ನೋಡಬೇಕಿದೆ.

ಈ ಮಧ್ಯೆ ಸಾರ್ವಜನಿಕರ ಮಾಹಿತಿಗಾಗಿ –
SIT Mobile No: 9480800202
Email ID: [email protected]

Leave a Reply

Your email address will not be published. Required fields are marked *

Back To Top