Thursday, 16th August 2018  

Vijayavani

ಅಜಾತಶತ್ರು ಅಸ್ತಂಗತ - ಅಟಲ್ ಬಿಹಾರಿ ವಾಜಪೇಯಿ ವಿಧಿವಶ - ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮಾಜಿ ಪ್ರಧಾನಿ ನಿಧನ        ಚತುಷ್ಪಥ ಹೆದ್ದಾರಿಯ ಹರಿಕಾರ - ನದಿಜೋಡಣೆಯ ಗುರಿಕಾರ - ಸಭ್ಯ, ಕವಿ ರಾಜಕಾರಣಿ ಅಟಲ್ ಅಜರಾಮರ        ದೆಹಲಿ ನಿವಾಸದಲ್ಲಿ ಪಾರ್ಥಿವ ಶರೀರ - ನಾಳೆ ಪಕ್ಷದ ಕಚೇರಿಯಲ್ಲಿ ದರ್ಶನ - ರಾಜ್​ಘಾಟ್​​ನಲ್ಲಿ ಸಂಜೆ 5ಕ್ಕೆ ಅಂತ್ಯಕ್ರಿಯೆ        ದೇಶಾದ್ಯಂತ 7 ದಿನಗಳ ಶೋಕಾಚರಣೆ - ಹಲವು ರಾಜ್ಯಗಳಲ್ಲಿ ಸರ್ಕಾರಿ ರಜೆ ಘೋಷಣೆ - ರಾಜ್ಯದಲ್ಲಿಯೂ ಸರ್ಕಾರಿ ರಜೆ        ದೇಶ ಮಹಾನ್ ನಾಯಕನ್ನ ಕಳೆದುಕೊಂಡಿದೆ - ನಿಶ್ಯಬ್ದ, ಶೂನ್ಯ ನನ್ನನ್ನ ಆವರಿಸಿದೆ - ಅಟಲ್​ ಅಗಲಿಕೆಗೆ ಮೋದಿ ಕಂಬನಿ        ವಾಜಪೇಯಿ​ ನಿಧನ ವಿಷಾದಕರ - ದೇಶ ಕಂಡ ಅತ್ಯಂತ ಮಹಾನ್ ವ್ಯಕ್ತಿ - ಅಟಲ್ ನಿಧನಕ್ಕೆ ಸ್ವಾಮೀಜಿಗಳ ಸಂತಾಪ        ಮಡಿಕೇರಿಯಲ್ಲಿ ಕುಸಿದ ಮನೆ - ವೈಮಾನಿಕ ಸಮೀಕ್ಷೆಗೆ ಬಿಜೆಪಿ ಮನವಿ - ಕೇರಳದಲ್ಲಿ ರಕ್ಕಸ ವರುಣಗೆ 88 ಮಂದಿ ಬಲಿ        ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಕಂಪನ - ಭಾರಿ ಸ್ಫೋಟದ ಜತೆಗೆ ಕಂಪನದ ಅನುಭವ - ಇನ್ನೂ ಗೊತ್ತಾಗಿಲ್ಲ ಅಸಲಿ ಕಾರಣ...       
Breaking News

ಜ್ಞಾನ ದಾಹಕ್ಕೆ ಹಂಬಲಿಸಿ

Wednesday, 01.08.2018, 2:00 AM       No Comments
<ಹಿರಿಯ ಚಲನಚಿತ್ರನಟ ದೊಡ್ಡಣ್ಣ ಸಲಹೆ>

ಗಂಗಾವತಿ: ಹಣದ ವ್ಯಾಮೋಹ ಕ್ಕೆ ಆದ್ಯತೆ ನೀಡದೇ ಜ್ಞಾನ ದಾಹಕ್ಕೆ ಹಂಬಲಿಸಿದಾಗ ಮಾತ್ರ ಉನ್ನತ ಸ್ಥಾನ ದೊರೆಯಲು ಸಾಧ್ಯ ಎಂದು ಚಿತ್ರನಟ ದೊಡ್ಡಣ್ಣ ಹೇಳಿದರು.

ನಗರದ ಬಾಲಕರ ಸ.ಪ.ಪೂ.ಕಾಲೇಜು ಮೈದಾನದಲ್ಲಿ ಕಸಾಪ ತಾಲೂಕು ಘಟಕ ಮಂಗಳವಾರ ಆಯೋಜಿಸಿದ್ದ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು.

ಕನ್ನಡಕ್ಕೆ ಪೂರ್ವದಿಂದಲೂ ತನ್ನದೇ ಆದ ಇತಿಹಾಸವಿದ್ದು, ಬಾಯಿ ಮಾತಿನಿಂದ ಜ್ಞಾನ ಮೂಡಿಸಿದ ಜಾನಪದ ಸಾಹಿತ್ಯ ಜಗತ್ತಿಗೆ ಮಾದರಿಯಾಗಿದೆ. ಹಣದ ಹಿಂದೆ ಬಿದ್ದರೆ ಏನ್ನನ್ನೂ ಸಾಧಿಸಲು ಸಾಧ್ಯವಿಲ್ಲ. ಆದರೆ, ಜ್ಞಾನ ಪಡೆದಾಗ ಮಾತ್ರ ಎಲ್ಲವೂ ನಿಮ್ಮ ಹಿಂದೆ ಬರುತ್ತಿದ್ದು, ಇದಕ್ಕೆ ಹಾಸ್ಯ ಭಾಷಣಕಾರ ಬಿ.ಪ್ರಾಣೇಶ ಸಾಕ್ಷಿ. ಕನ್ನಡ ಉಳಿವಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕಿದ್ದು, ಕಲಾವಿದರ ಪ್ರೋತ್ಸಾಹಕ್ಕಾಗಿ ಕನ್ನಡ ಕಲಾ ಭವನ ನಿರ್ಮಿಸಲು ಆಸಕ್ತಿವಹಿಸಬೇಕಿದೆ. ಪರಂಪರೆಯ ಸಾಹಿತ್ಯ ಸಾಧಕರು ಉತ್ತರ ಕರ್ನಾಟಕದ ಮೂಲದವರಾಗಿರುವುದಕ್ಕೆ ಹೆಮ್ಮೆ ಪಡಬೇಕಿದ್ದು, ಸಾಹಿತ್ಯಾಸಕ್ತತೆ ಜತೆಗೆ ಅಧ್ಯಾತ್ಮಕ್ಕೂ ಮಾನ್ಯತೆ ನೀಡುವಂತೆ ಸಲಹೆ ನೀಡಿದರು.

ಹಾಸ್ಯ ಭಾಷಣಕಾರ ಎಂ.ಎಸ್.ನರಸಿಂಹ ಮೂರ್ತಿ ಮಾತನಾಡಿ, ಹಾಸ್ಯದ ಮೂಲಕ ದೇಶ, ವಿದೇಶಗಳಲ್ಲೂ ಮನೆಮಾತಾಗಿರುವ ಬಿ.ಪ್ರಾಣೇಶ ಸರಳತೆ ಪ್ರತಿಯೊಬ್ಬರಿಗೂ ಮಾದರಿ. ರಾಜ್ಯಸಮ್ಮೇಳನಕ್ಕೂ ಮೀರಿಸಿದ ತಾಲೂಕು ಮಟ್ಟದ ಸಮ್ಮೇಳನ ಆಯೋಜಿಸಿರುವ ಸ್ಥಳೀಯ ಸಂಘಟಕರ ಶ್ರಮ ಸಾರ್ಥಕವಾಗಿದ್ದು, ಕನ್ನಡ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕಿದೆ ಎಂದರು.

ಶಾಸಕ ಮತ್ತು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಪರಣ್ಣ ಮುನವಳ್ಳಿ ಮಾತನಾಡಿ, ಸರ್ವರ ಸಹಕಾರದಿಂದ ಸಮ್ಮೇಳನ ಯಶಸ್ವಿಯಾಗಿದ್ದು, ಹಾಸ್ಯ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಗರದ ಹೆಮ್ಮೆ ಎಂದರು. ಇದೇ ಸಂದರ್ಭದಲ್ಲಿ ಹಾಸ್ಯ ಭಾಷಣಕಾರ ಬಸವರಾಜ ಮಹಾಮನಿ ಮತ್ತು ತಂಡದಿಂದ ಸಮ್ಮೇಳನಾಧ್ಯಕ್ಷ ಬಿ.ಪ್ರಾಣೇಶರಿಗೆ ಕಾರನ್ನು ಗುರು ಕಾಣಿಕೆಯನ್ನಾಗಿ ನೀಡಲಾಯಿತು.

ಶಾಸಕ ಬಸವರಾಜ ದಢೇಸುಗೂರು, ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ, ಎಸ್.ಶಿವರಾಮಗೌಡ, ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಜಿ.ವೀರಪ್ಪ, ಜಿಪಂ ಉಪಾಧ್ಯಕ್ಷ ಲಕ್ಷ್ಮವ್ವ ನೀರ್ಲೂಟಿ, ಹಾಸ್ಯ ಭಾಷಣಕಾರ ಎಂ.ಶಂಭುಬಳಿಗಾರ, ಚಿತ್ರನಟ ಟೆನ್ನಿಸ್ ಕೃಷ್ಣ, ಬಸವರಾಜ ಮಹಾಮನಿ, ನರಸಿಂಹ ಜೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ನಗರಸಭೆ ಮಾಜಿ ಸದಸ್ಯ ದೇವಪ್ಪ ಕಾಮದೊಡ್ಡಿ, ಮುಖಂಡ ಜೋಗದ ನಾರಾಯಣಪ್ಪ ನಾಯಕ, ಕಸಾಪ ಜಿಲ್ಲಾ ಅಧ್ಯಕ್ಷ ರಾಜಶೇಖರ್ ಅಂಗಡಿ, ತಾಲೂಕು ಅಧ್ಯಕ್ಷ ಎಸ್.ಬಿ.ಗೊಂಡಬಾಳ್, ಮಾಜಿ ಅಧ್ಯಕ್ಷ ನಿಜಲಿಂಗಪ್ಪ ಮೆಣಿಸಿಗೆ ಇದ್ದರು.

 

Leave a Reply

Your email address will not be published. Required fields are marked *

Back To Top