Saturday, 18th August 2018  

Vijayavani

ಭಾರೀ ಮಳೆಗೆ ತತ್ತರಿಸಿದ ಕೇರಳದಲ್ಲಿ ಮೋದಿ ವೈಮಾನಿಕ ಸಮೀಕ್ಷೆ: ಐನೂರು ಕೋಟಿ ನೆರವು ಘೋಷಣೆ        ಕೊಡಗಿಗೆ ಮಳೆ ಸಂಕಷ್ಟ: ಹಾನಿ ಬಗ್ಗೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿಗೆ ಮುಖ್ಯಕಾರ್ಯದರ್ಶಿ ವರದಿ        ಕೊಡಗಿನ ಗೋಣಿಕೊಪ್ಪದಲ್ಲಿ ಮಳೆಯ ಅಬ್ಬರಕ್ಕೆ ಕುಸಿದ ಮನೆ: ನಾಲ್ಕು ಮಂದಿ ದುರ್ಮರಣ        ಚಾರ್ಮಾಡಿ ಘಾಟ್​​ನ ತಿರುವಿನಲ್ಲಿ ಕೆಟ್ಟು ನಿಂತ ವಾಹನ: ಧರ್ಮಸ್ಥಳ ಮಾರ್ಗದಲ್ಲಿ ವಿಪರೀತ ಟ್ರಾಫಿಕ್​ ಜಾಮ್        ಅರಕಲಗೂಡನಲ್ಲಿ 200 ಮನೆಗಳು ಜಲಾವೃತ: ದ್ವೀಪದಂತಾದ ರಾಮನಾಥಪುರ, ಮುಳುಗಿದ ನಿಮಿಷಾಂಭ ದೇಗುಲ       
Breaking News

ಡಿ.ಕೆ.ಶಿವಕುಮಾರ್‌ ಒಬ್ಬ ಹುಚ್ಚು ದೊರೆಯಿದ್ದಂತೆ: ಜಿ.ಎಸ್‌.ಬಸವರಾಜು

Tuesday, 17.07.2018, 12:24 PM       No Comments

ತುಮಕೂರು: ಡಿಕೆಶಿ ಒಬ್ಬ ಹುಚ್ಚು ದೊರೆಯಾಗಿದ್ದು, ಮೊಹಮ್ಮದ್‌ ಬಿನ್ ತುಘಲಕ್ ರೀತಿ ಡಿ.ಕೆ. ಶಿವಕುಮಾರ್‌ ಆಡುತ್ತಿದ್ದಾರೆ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಹೇಮಾವತಿ ನಾಲೆ ಕಿರಿದುಗೊಳಿಸಲು ಡಿಕೆಶಿ ಹೊರಟಿದ್ದಾರೆ. ಗುಬ್ಬಿಯಿಂದ ಕುಣಿಗಲ್ 70-166 ಕಿ.ಮೀ. ಉದ್ದದ ನಾಲೆಯನ್ನು ಕಿರಿದುಗೊಳಿಸಿ ಎಕ್ಸ್‌ಪ್ರೆಸ್ ಕ್ಯಾನಲ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. 1440 ಕ್ಯೂಸೆಕ್‌ ಸಾಮರ್ಥ್ಯವನ್ನು 900ಕ್ಕೆ ಇಳಿಸಲು ನಿರ್ಧರಿಸಿದ್ದು, ಅವೈಜ್ಞಾನಿಕವಾಗಿದೆ. ಇದೆಲ್ಲವು ಅವರ ಸ್ವಾರ್ಥ ಸಾಧನೆಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಾಲೆಯನ್ನು ಕಿರಿದುಗೊಳಿಸುವ ಮೂಲಕ ತುಮಕೂರು ರೈತರಿಗೆ ಬರೆ ಎಳೆಯಲು ಮುಂದಾಗಿದ್ದಾರೆ. ಈ ಭಾಗದ ಜನರನ್ನು ಸರ್ವನಾಶ ಮಾಡಲು ಕೈ ಹಾಕಿದ್ದಾರೆ. ಉದ್ಧಟತನದ ಕೆಲಸಕ್ಕೆ ಡಿ.ಕೆ.ಶಿವಕುಮಾರ್‌ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top