Monday, 15th October 2018  

Vijayavani

‘ಉಪ' ಕದನಕ್ಕೆ ಇಂದು ಉಮೇದುವಾರಿಕೆ-ಶಿವಮೊಗ್ಗದಲ್ಲಿ ಮಾಜಿ ಸಿಎಂ ಪುತ್ರ ನಾಮಪತ್ರ- ಇತ್ತ ರಾಮನಗರದಿಂದ ಸಿಎಂ ಪತ್ನಿ        ಕುತೂಹಲ ಕೆರಳಿಸಿದ ಬೆಳಗಾವಿ ಎಪಿಎಂಸಿ ಎಲೆಕ್ಷನ್-ಲಕ್ಷ್ಮೀ ವಿರುದ್ಧ ಸೋಲು ತೀರಿಸಿಕೊಳ್ಳಲು ಜಾರಕಿಹೊಳಿ ಬಣ ಸಿದ್ಧತೆ        ಸ್ಯಾಂಡಲ್​ವುಡ್​ನಲ್ಲೂ ‘ಮೀ ಟೂ’ ಸದ್ದು-ನಟಿ ಸಂಗೀತಾ ಭಟ್ ದಯವಿಟ್ಟು ಗಮನಿಸಿ ಅಂತ ಫೇಸ್​ಬುಕ್​ನಲ್ಲಿ ನೋವು        ಮೀ ಟೂ ಆರೋಪಕ್ಕೆ ಖುಷ್ಬು ತಿರುಗೇಟು-ಕೇಜ್ರಿಸ್ಟಾರ್ ಮೇಲೆ ಬೊಟ್ಟು ಮಾಡಿದವರಿಗೆ ಎದುರೇಟು        MEE TOOಗೆ ಬಿತ್ತು ಮೊದಲ ವಿಕೆಟ್-ಕೇಂದ್ರ ಸಚಿವ ಸ್ಥಾನಕ್ಕೆ ಎಂ.ಜೆ.ಅಕ್ಬರ್ ರಿಸೈನ್​        ಪೆಟ್ರೋಲ್ ಬ್ಯಾರಲ್ ಸ್ಫೋಟಕ್ಕೆ ಕೊಪ್ಪಳದ ಅಧಿಕಾರಿ ಸಾವು -ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನಲ್ಲಿ ಕೊನೆಯುಸಿರು       
Breaking News

ಡಿಜಿಪಿ‌ ಮನಸ್ಸು ಮಾಡಿದ್ರೆ ಸಿಎಂ ಎಚ್​ಡಿಕೆಯನ್ನು ಜೈಲಿಗೆ ಹಾಕಬಹುದು: ಗೋ.ಮಧುಸೂದನ್​

Thursday, 20.09.2018, 5:47 PM       No Comments

ಮೈಸೂರು: ಇದು ಕುಮಾರಸ್ವಾಮಿ ಹತಾಶೆಯ ಪರಮಾವಧಿ. ಡಿಜಿಪಿ‌ ಮನಸ್ಸು ಮಾಡಿದರೆ ಸಿಎಂ ಜೈಲಿಗೆ ಹಾಕಬಹುದು ಎಂದು ಮೈಸೂರಿನಲ್ಲಿ ಬಿಜೆಪಿ ಮುಖಂಡ ಗೋ.ಮಧುಸೂದನ್ ಕಿಡಿ ಕಾರಿದ್ದಾರೆ.

“ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ಕೊಟ್ಟರೆ ನಾನು ಸುಮ್ಮನಿರುವುದಿಲ್ಲ. ಬಿಜೆಪಿ ವಿರುದ್ಧ ದಂಗೆ ಏಳುವಂತೆ ರಾಜ್ಯದ ಜನರಿಗೆ ಕರೆ ಕೊಡುತ್ತೇನೆ” ಎಂಬ ಎಚ್​ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ದಂಗೆಗೆ ಕರೆ ಕೊಡೋಕೆ ರಾಜ್ಯದ ಜನ ನಿಮ್ಮ ಗುಲಾಮರಾ? ಸಿಎಂ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿ. ದಂಗೆ ಹೇಳಿಕೆ ನಿಮ್ಮ ವ್ಯಕ್ತಿತ್ವದ ಯೋಗ್ಯತೆ ತೋರಿಸುತ್ತದೆ ಎಂದರು.

ಯಾರಾದರೂ ದಂಗೆಗೆ ಕರೆ ಕೊಟ್ಟರೆ 24 ಗಂಟೆಯಲ್ಲೇ ಅವರನ್ನು ಪೊಲೀಸರು ಬಂಧಿಸುತ್ತಾರೆ. 37 ಸೀಟು ಪಡೆದು ನೀವು ಸಿಎಂ ಆಗಿರುವುದೇ ಜನರಿಗೆ ಆಶ್ಚರ್ಯ ಆಗಿದೆ. ನೀವು ನಿಮ್ಮ ಸ್ಥಾನಕ್ಕೆ ಗೌರವ ಕೊಡುವಂತೆ ಮಾತನಾಡಿ. ನೀವು ಕೇವಲ ಕುಮಾರಸ್ವಾಮಿ ಅಲ್ಲ. ಮುಖ್ಯಮಂತ್ರಿ ಎಂದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top