Tuesday, 16th October 2018  

Vijayavani

ಜಮಖಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಜಂಗೀಕುಸ್ತಿ- ಕೈ-ಕಮಲ ಅಭ್ಯರ್ಥಿಗಳಿಂದ ನಾಮಿನೇಷನ್​​ - ಬಿಎಸ್​ವೈ, ಸಿದ್ದು ಶಕ್ತಿಪ್ರದರ್ಶನ        ಗಣಿಧಣಿಗಳ ನಾಡಲ್ಲಿ ಬಿಗ್ ಫೈಟ್-ಉಗ್ರಪ್ಪ-ಶಾಂತಾರಿಂದ ಉಮೇದುವಾರಿಕೆ-ರಾಮುಲು, ಡಿಕೆಶಿ ನಡುವೆ ಅಸಲಿ ಕದನ        ಶಿವಮೊಗ್ಗ ಅಖಾಡದಲ್ಲಿ ಮಾಜಿ ಸಿಎಂ ಪುತ್ರರ ಸಮರ-ಇಂದು ಮಧು ಬಂಗಾರಪ್ಪ ನಾಮಪತ್ರ-ಜೆಡಿಎಸ್‌ ಅಭ್ಯರ್ಥಿಗೆ ಕಾಂಗ್ರೆಸ್ ಸಾಥ್        ಮಂಡ್ಯ ಲೋಕಸಭಾ ಚುನಾವಣೆ ಕದನ-ಇಂದು ಬಿಎಸ್​​ವೈ, ಎಚ್​ಡಿಕೆಯಿಂದ ಪ್ರಚಾರ-ದೋಸ್ತಿಗೆ ಸೆಡ್ಡು ಹೊಡೆಯಲು ಕಮಲ ಪ್ಲಾನ್​​        ರಾಮನಗರದಲ್ಲಿ ಕೋಟ್ಯಧಿಪತಿಗಳ ಕಾರುಬಾರು-ಸಿಎಂ ಪತ್ನಿ 127 ಕೋಟಿ ರೂ. ಒಡತಿ-ನಾನೇನು ಕಮ್ಮಿನಾ ಅಂತಿದ್ದಾರೆ ಚಂದ್ರಶೇಖರ್        ಬೈ ಎಲೆಕ್ಷನ್​ ಟೆನ್ಷನ್​ ಮಧ್ಯೆಯೇ ಡಿಸಿಎಂ ವರ್ಕಿಂಗ್​​-ಹುಬ್ಬಳ್ಳಿ ಠಾಣೆಗೆ ದಿಢೀರ್ ವಿಸಿಟ್​​​​​​​​​​-ಬೀಟ್ ಸಿಸ್ಟ್ಂ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಪಾಠ       
Breaking News

ಬಯಲಾಯಿತು ಫ್ಯೂಚರ್ ಮೇಕರ್ ಉತ್ಪನ್ನಗಳ ಅಸಲಿಯತ್ತು

Tuesday, 25.09.2018, 3:02 AM       No Comments

| ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಕರ್ನಾಟಕ ಸೇರಿ 7 ರಾಜ್ಯಗಳ 60 ಲಕ್ಷ ಜನರಿಗೆ 3 ಸಾವಿರ ಕೋಟಿ ರೂ. ವಂಚಿಸಿದ ಆರೋಪಕ್ಕೆ ಗುರಿಯಾಗಿರುವ ಫ್ಯೂಚರ್ ಮೇಕರ್ ಲೈಫ್​ಕೇರ್ ಪ್ರೖೆ.ಲಿ. (ಎಫ್​ಎಂಎಲ್​ಸಿ) ಕಂಪನಿಯ ಮತ್ತೊಂದು ಮುಖವಾಡ ಬಯಲಾಗಿದೆ.

ಜನರನ್ನು ಆಕರ್ಷಿಸುವ ಉದ್ದೇಶದಿಂದ 7,500 ರೂ. ಪಾವತಿಸುವ ಗ್ರಾಹಕರಿಗೆ ನೀಡುತ್ತಿದ್ದ ಉತ್ಪನ್ನಗಳು ಕಳಪೆ ಎಂಬುದು ಬೆಳಕಿಗೆ ಬಂದಿದೆ. 2,500 ರೂ. ಸದಸ್ಯತ್ವ ಶುಲ್ಕವೆಂದು ಕಡಿತ ಮಾಡಿ ಉಳಿದ ಹಣಕ್ಕೆ ಕಳಪೆ ಉತ್ಪನ್ನಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದರು ಎಂದು ತೆಲಂಗಾಣದ ಸೈಬರಾಬಾದ್ ಕಮಿಷನರ್ ವಿ.ಸಿ. ಸಜ್ಜನರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಬಂಧಿತ ಎಫ್​ಎಂಎಲ್​ಸಿ ಕಂಪನಿ ಅಧ್ಯಕ್ಷ, ಮುಖ್ಯ ವ್ಯವಸ್ಥಾಪಕ ನಿರ್ದೇಶಕ ರಾಧೆ ಶ್ಯಾಂ, ತನ್ನ ಕಂಪನಿ ಹೆಸರಿನಲ್ಲಿ ಗ್ರೀನ್ ಟೀ, ಖಾರದ ಪುಡಿ, ದನಿಯಾ ಪುಡಿ, ಸ್ಲಿಂ ಟೀ, ಪ್ರೊಟೀನ್ ಪೌಡರ್, ಹೇರ್ ಆಯಿಲ್, ಹೇರ್ ಕಲರ್ ಇನ್ನಿತರ ಗೃಹೋಪಯೋಗಿ, ಸೌಂದರ್ಯವರ್ಧಕ, ಹರ್ಬಲ್ ಉತ್ಪನ್ನ ಸೇರಿ 38ಕ್ಕೂ ಅಧಿಕ ಉತ್ಪನ್ನಗಳನ್ನು ಹೂಡಿಕೆದಾರರ ಮೂಲಕ ಮಾರಾಟ ಮಾಡಿಸುತ್ತಿದ್ದಾನೆ. ಆದರೆ ಈ ಉತ್ಪನ್ನಗಳ ಮೇಲೆ ತಯಾರಿಸಿದ ಕಾರ್ಖಾನೆ ವಿಳಾಸ, ಮಾಲೀಕರ ಹೆಸರು ಉಲ್ಲೇಖಿಸಿಲ್ಲ. ಪ್ರತಿ ಉತ್ಪನ್ನ ಮಾರುಕಟ್ಟೆಗೆ ಬಿಡುವ ಮೊದಲು ಭಾರತೀಯ ಮಾನಕ ಬ್ಯೂರೋ (ಬಿಐಎಸ್) ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್​ಎಸ್​ಎಸ್​ಐ) ನೋಂದಣಿ ಹೊಂದಿರಬೇಕು. ಉತ್ಪನ್ನಗಳ ಮೇಲೆ ಬಿಐಎಸ್ ಮತ್ತು ಎಫ್​ಎಸ್​ಎಸ್​ಐ ಕೋಡ್ ನಂಬರ್ ನಮೂದಿಸಬೇಕು. ಆದರೆ, ಫ್ಯೂಚರ್ ಮೇಕರ್ ಕಂಪನಿಯ ಯಾವುದೇ ವಸ್ತುಗಳ ಮೇಲೆ ಇವನ್ನು ನಮೂದಿಸಿಲ್ಲ. ಪ್ರತಿ ವಸ್ತುವಿನ ಗುಣಮಟ್ಟ ಅನುಮಾನಾಸ್ಪದವಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೋಸ ಆಗುತ್ತಿದೆ, ಆಗುತ್ತಿಲ್ಲ!: ವಿಜಯವಾಣಿ ಮುಖಪುಟದಲ್ಲಿ ಎಫ್​ಎಂಎಲ್​ಸಿ ಕಂಪನಿಯ ಧೋಖಾ ಕುರಿತು ಸೋಮವಾರ ಪ್ರಕಟಿಸಿದ ವರದಿ ನೋಡಿ ನೂರಾರು ಮಂದಿ ವಿಜಯವಾಣಿ ಕಚೇರಿಗೆ ಕರೆ ಮಾಡಿದ್ದಾರೆ. ಬಹುತೇಕರು ವಂಚನೆ ಬಗ್ಗೆ ನೋವು ಹಂಚಿಕೊಂಡಿದ್ದು, ಕೆಲವರು ವಂಚನೆ ಆಗಿಲ್ಲ ಎಂದೂ ಹೇಳಿದ್ದಾರೆ. ನಾವು ಪಾವತಿಸಿದ ಹಣಕ್ಕೆ ಉತ್ಪನ್ನಗಳನ್ನು ಕೊಡುತ್ತಿದ್ದು, ಅವುಗಳ ಮಾರಾಟದಿಂದ ಲಾಭ ಬರುತ್ತಿರುವುದಾಗಿ ಮಂಗಳೂರಿನ ಗಂಗಾಧರ್ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೈಬರಾಬಾದ್ ಪೊಲೀಸರು, ಚೈನ್​ಲಿಂಕ್ ಮತ್ತು ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಕಂಪನಿಗಳ ಮಾಲೀಕರು ಗ್ರಾಹಕರ ಸಭೆ ಕರೆದು ಮರಳು ಮಾಡಿ ಹೂಡಿಕೆದಾರರಿಗೆ ಅಲ್ಪಸ್ವಲ್ಪ ಕಮಿಷನ್ ಮತ್ತು ಗಿಫ್ಟ್ ಕೊಟ್ಟು ಆಕರ್ಷಿಸುತ್ತಾರೆ. ಯಾವುದಕ್ಕೂ ಮರುಳಾಗದಂತೆ ಎಚ್ಚರಿಸಿದ್ದಾರೆ.

50 ರೂ. ಟೀ ಬ್ಯಾಗ್  1800 ರೂ.ಗೆ ಸೇಲ್

ಎಫ್​ಎಂಎಲ್​ಸಿ ಕಂಪನಿ 2 ಗ್ರಾಂ ಇರುವ 30 ಟೀ ಬ್ಯಾಗ್​ಗಳನ್ನು 1,800 ರೂ.ಗೆ ಮಾರುತ್ತಿದ್ದು, ಇದರ ಮಾರುಕಟ್ಟೆ ಬೆಲೆ 50 ರೂ. ಮಾತ್ರ. 56 ರೂ. ಮೌಲ್ಯದ 400 ಗ್ರಾಂ ಅಗಸೆ ಬೀಜಕ್ಕೆ 900 ರೂ. ಪಡೆಯುತ್ತಿದ್ದರು. ಇದೇ ರೀತಿ ಎಲ್ಲ ವಸ್ತುಗಳನ್ನು ದುಬಾರಿಗೆ ಮಾರುತ್ತಿದ್ದರು.

ಸ್ಥಳೀಯ ಠಾಣೆಗೆ ದೂರು ನೀಡಿ

ಮೋಸ ಹೋಗಿರುವವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ. ಆ ನಂತರ ತೆಲಂಗಾಣದ ಸೈಬರಾಬಾದ್​ನ ಆರ್ಥಿಕ ಅಪರಾಧ ವಿಭಾಗದ ಎಡಿಸಿಪಿ ಪ್ರವೀಣ್​ಕುಮಾರ್ ಮೊಬೈಲ್ 9490617207ಗೆ ಕರೆ ಮಾಡಿ. ಪ್ರಕರಣದ ತನಿಖೆ ಕುರಿತು ಕರ್ನಾಟಕ ಪೊಲೀಸ್ ಅಧಿಕಾರಿಗಳ ಜತೆ ರ್ಚಚಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಸೈಬರಾಬಾದ್ ಕಮಿಷನರ್ ವಿ.ಸಿ. ಸಜ್ಜನರ್ ಸಲಹೆ ನೀಡಿದ್ದಾರೆ.

60 ಲಕ್ಷ ಜನರಿಗೆ ಧೋಖಾ!

Leave a Reply

Your email address will not be published. Required fields are marked *

Back To Top