Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ಛೆ! ಇದೆಂಥಾ ದುರಂತ… ನೀವೇ ಹೇಳಿ ಇದರಲ್ಲಿ ಯಾರದ್ದು ತಪ್ಪು ಒಪ್ಪು?

Wednesday, 26.07.2017, 9:53 AM       No Comments

ನವದೆಹಲಿ: ಒಂದೆಡೆ ಯುವತಿಯೊಬ್ಬಳು ಎಂಬಿಎ ಮಾಡಿದ್ದರೂ ಉದ್ಯೋಗ ಸಿಗದ ದುರವಸ್ಥೆ ಮತ್ತೊಂದೆಡೆ ಅದೇ ಮಾನಸಿಕ ಕ್ಲೀಷೆಯಲ್ಲಿ ಅಮ್ಮನಿಗೆ ಬಡಿಯುವ ಪರಿಪಾಠ ಬೆಳೆಸಿಕೊಂಡ ಯುವತಿ… ಇದಕ್ಕೆಲ್ಲ ಅಂತ್ಯವೆಂಬಂತೆ ಸ್ವಂತ ತಂದೆಯೇ ಆ ಯುವತಿಯನ್ನು ಬಡಿದು ಸಾಯಿಸಿರುವುದು. ಅದೂ ಸಾಲದೆಂಬಂತೆ ಮೊದಲು ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಳೆಂದು ಪೊಲೀಸರಿಗೆ ಸಬೂಬು ನಂತರ ಪೊಲೀಸರ ತೀವ್ರ ವಿಚಾರಣೆಯೋ ಅಥವಾ ಕರುಳಬಳ್ಳಿಯ ಆಕ್ರಂದನವೋ … ಇಲ್ಲಾ ನನ್ನ ಮಗಳನ್ನು ನಾನೇ ಕೊಂದೆ ಎಂದು ತಪ್ಪೊಪ್ಪಿಕೊಂಡ ಅಪ್ಪ… ಹೇಳಿ ಈ ಕಥೆಯಲ್ಲಿ ಯಾರದ್ದು ತಪ್ಪು ಒಪ್ಪು?

ದೆಹಲಿಯ ದ್ವಾರಕ ನಗರದಲ್ಲಿ ವಾಸವಾಗಿರುವ 29 ವರ್ಷದ ಮಹಿಳೆಯೊಬ್ಬಳು ಎಂಬಿಎ ಪದವಿ ಮುಗಿಸಿ ಕೆಲಸ ಸಿಗದೆ ಮನೆಯಲ್ಲೆ ಖಾಲಿ ಕೈಯಲ್ಲಿ ದಿನ ದೂಡುತ್ತಿದ್ದಳು. ಕೆಲಸವಿಲ್ಲದೆ ಮಾನಸಿಕವಾಗಿ ನೊಂದಿದ್ದ ಆಕೆ ಹತಾಶೆಯಿಂದ ಪ್ರತಿನಿತ್ಯ ತನ್ನ ಹೆತ್ತ ತಾಯಿಯನ್ನೆ ಬಡಿಯುತ್ತಿದ್ದಳು.

ಜುಲೈ 21 ರಂದು ಈ ಪರಿಪಾಠ ಮುಂದುವರಿದಾಗ ಇದರಿಂದ ಬೇಸತ್ತ ಆಕೆಯ 53 ವರ್ಷದ ತಂದೆ ತನ್ನ ಹೆಂಡತಿಯನ್ನು ಥಳಿಸುತ್ತಿರುವುದನ್ನು ನೋಡಿ ತಡೆಯಲಾಗದೆ ತನ್ನ ಮಗಳನ್ನು ಮೊಂಡಾದ ವಸ್ತುವಿನಿಂದ ಬಡಿದು ಸಾಯಿಸಿದ್ದಾನೆ. ಪ್ರಾರಂಭದಲ್ಲಿ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಿದ್ದಾನೆ. ಆದರೆ ಪೊಲೀಸರ ತನಿಖೆಯ ನಂತರ ನಾನೇ ಕೊಂದಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.

ನಿರುದ್ಯೋಗದ ನೋವಿನಿಂದ ಹೊರಬರಲು ತಾಯಿಯನ್ನು ಥಳಿಸುತ್ತಿದ್ದ ಮಗಳು ಒಂದೆಡೆಯಾದರೆ, ಹೆಂಡತಿಯನ್ನು ಕಾಪಾಡಲು ಮಗಳನ್ನೆ ಕೊಲೆ ಮಾಡಿದ ಅಪ್ಪ. ದುಃಸ್ಥಿತಿಯಲ್ಲಿದ್ದ ಮಗಳನ್ನು ಸಂತೈಸಿ, ಮಾರ್ಗದರ್ಶನ ನೀಡಬೇಕಿದ್ದ “ಅಪ್ಪ” ಎಲ್ಲಿ ಹೋದ?

ಇನ್ನೊಂದೆಡೆ. ಇತ್ತ ಮಗಳು ಸ್ಮಶಾಣ ಸೇರಿದಳು. ಅತ್ತ ಗಂಡ ಜೈಲು ಪಾಲಾಗಿ ಮತ್ತೆ ಹೆಂಡತಿ ಸಂಕಷ್ಟಕ್ಕೆ ಸಿಲುಕಿದನ್ನು ನೋಡಿದಾಗ… ವಿಧಿಯನ್ನು ದೂಷಿಸುವುದೋ? ಅಥವಾ ವ್ಯವಸ್ತೆಯನ್ನು ಶಪಿಸುವುದೋ? ಛೇ…(ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top