Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಖಾಸಗಿ ವೈದ್ಯರ ಧರಣಿ: ಚಿಕಿತ್ಸೆ ದೊರೆಯದೆ 4 ಅಮಾಯಕ ಜೀವಗಳ ಸಾವು

Tuesday, 14.11.2017, 1:41 PM       No Comments

>> ಪೂರ್ವ ಮಾಹಿತಿ ನೀಡದೆ ಖಾಸಗಿ ವೈದ್ಯರು ಧರಣಿ ಕುಳಿತಿರುವುದರಿಂದ ಉಂಟಾಗುತ್ತಿರುವ ತೊಂದರೆ

ಬೆಂಗಳೂರು: ಅತ್ತ ಸುವರ್ಣ ಸೌಧದ ಎದುರು ತಮ್ಮ ಬೇಡಿಕೆ ಇಡೇರಿಸದ ಹೊರತು ಕದಲುವುದಿಲ್ಲ ಎಂದು ವೈದ್ಯರು ಪ್ರತಿಭಟನೆಗೆ ಕುಳಿತಿದ್ದಾರೆ. ಅದರ ಪರಿಣಾಮ ಇತ್ತ ಚಿಕಿತ್ಸೆ ಸಿಗದೇ ನಾಲ್ಕು ಜೀವಗಳು ಬಲಿಯಾಗಿವೆ.

ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿ ಬೆಳಗಾವಿಯ ಸುವರ್ಣ ಸೌಧದೆದುರು ಧರಣಿ ಕುಳಿತಿರುವ ವೈದ್ಯರು ಏಕಾಏಕಿ ಸೇವೆ ಸ್ಥಗಿತಗೊಳಿಸಿರುವುದು ರೋಗಿಗಳಿಗೆ ಇನ್ನಿಲ್ಲದ ಕಷ್ಟ ಉಂಟುಮಾಡಿದೆ.

ಚಿಕಿತ್ಸೆ ದೊರೆಯದೆ ಕೊನೆಯುಸಿರೆಳೆದ ರೋಗಿಗಳು

ರಕ್ತ ಕಾರಿಕೊಳ್ಳುತ್ತಿದ್ದ ಕಲ್ಲವ್ವ ಶ್ರೀಶೈಲ್‌ ಅಂಬಿ ಎಂಬ ಬಾಲಕಿಯನ್ನು ಬೆಳಗಾವಿ ಜಿಲ್ಲೆಯ ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಸಿಗದೇ ಬಾಲಕಿ ಪ್ರಾಣ ಬಿಟ್ಟಿದ್ದಾಳೆ.

ತುಮಕೂರುನಲ್ಲಿ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ ಎಂದು ನದೀಮ್ ಪಾಷಾ-ಫರ್ರ್‌ ದಂಪತಿ ತಮ್ಮ 3 ತಿಂಗಳ ಮಗುವನ್ನ ಹಾಸನದತ್ತ ಕರೆದೊಯ್ಯುತ್ತಿದ್ದರು. ಈ ವೇಳೆ ಮಾರ್ಗ ಮಧ್ಯದಲ್ಲೇ ದಂಪತಿಯ 3 ತಿಂಗಳ ಮಗು ಮೃತಪಟ್ಟಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮುಕ್ಕುಂಪಿ ಗ್ರಾಮದಲ್ಲಿ ಪಿಡಿಒ ಗ್ಯಾನಪ್ಪ ಬಡ್ನಾಳ ಎಂಬುವವರಿಗೆ ಹೃದಯಾಘಾತವಾಗಿತ್ತು. ಗಂಗಾವತಿ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಸಿಗದೇ ಪಿಡಿಒ ಗ್ಯಾನಪ್ಪ ಮೃತಪಟ್ಟಿದ್ದಾರೆ.

ಬಾಗಲಕೋಟೆಯ ಹುನಗುಂದ ತಾಲೂಕಿನ ಇಳಕಲ್​ ನಗರದ ಶೇಖಪ್ಪ ಎಂಬುವರು ಹೃದಯಾಘಾತಕ್ಕೆ ಒಳಗಾಗಿದ್ದರು. ಖಾಸಗಿ ಆಸ್ಪತ್ರೆ ಬಂದ್​​​​ ಆಗಿದ್ದರಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ 52 ವರ್ಷದ ಶೇಖಪ್ಪ ಮೃತಪಟ್ಟಿದ್ದಾರೆ. ಸೋಮವಾರವಷ್ಟೇ ಬಾಗಲಕೋಟೆ ಜಿಲ್ಲೆಯಲ್ಲಿ ಮೂವರು ರೋಗಿಗಳು ಚಿಕಿತ್ಸೆ ಸಿಗದೇ ಮೃತಪಟ್ಟಿದ್ದರು.

ಇನ್ನು ವೈದ್ಯರೊಂದಿಗೆ ಸಂಧಾನಕ್ಕಾಗಿ ಸರ್ಕಾರ ಸೋಮವಾರ ಪ್ರಯತ್ನಪಟ್ಟಿತ್ತಾದರೂ ಅದರಿಂದ ಯಾವುದೇ ಸಕಾರಾತ್ಮಕ ಬೆಳವಣಿಗೆಗಳಾಗಿಲ್ಲ. ಶೀಘ್ರದಲ್ಲಿಯೇ ಇದಕ್ಕೆ ಪರಿಹಾರ ದೊರೆಯದಿದ್ದರೆ ಸಮಸ್ಯೆ ಉಲ್ಭಣಗೊಂಡು ಸಾರ್ವಜನಿಕರು ತೊಂದರೆ ಅನುಭವಿಸುವುದು ಖಚಿತ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top