Thursday, 18th October 2018  

Vijayavani

ಅಭಿಮಾನಿಗಳ ಪಾಲಿಗೆ ಮಳೆರಾಯನೇ ವಿಲನ್​​​​​​​​​-ದಾವಣಗೆರೆಲಿ ಮುಂಜಾನೆಯ ಚಿತ್ರ ಪ್ರದರ್ಶನ ರದ್ದು- ಆಯುಧಪೂಜಾ ಸಂಭ್ರಮ ಮಂಕು        ಶಿವಮೊಗ್ಗದಲ್ಲೂ ವಿಲನ್​​ ಚಿತ್ರಕ್ಕೆ ಬ್ರೇಕ್​-ಮಧ್ಯರಾತ್ರಿ ಪ್ರದರ್ಶನಕ್ಕೆ ಪೊಲೀಸರ ಅಡ್ಡಿ-ಥಿಯೇಟರ್​​​​​ ಬಳಿ ಅಭಿಮಾನಿಗಳ ಜಾಗರಣೆ        ನಾಡಿನಾದ್ಯಂತ ನವರಾತ್ರಿ ವೈಭವ-ಇಂದು ಆಯುಧಪೂಜೆ ಸಂಭ್ರಮ-ಅತ್ತ ಅರಮನೆಯಲ್ಲಿ ಶಸ್ತ್ರಾಸ್ತ್ರ ಪೂಜೆಗೆ ಕ್ಷಣಗಣನೆ        ಯುವದಸರಾಗೆ ಬಿತ್ತು ಅದ್ಧೂರಿ ತೆರೆ-ರಾಕಿಂಗ್​​ ಸ್ಟಾರ್​ ಡೈಲಾಗ್​​ಗೆ ಫುಲ್​​​ ಖುಷ್​-ಕೊನೆ ದಿನ ಕುಣಿದು ಕುಪ್ಪಳಿಸಿದ ಯುವಕರು        ಲಿಂಗಾಯತ ಪ್ರತ್ಯೇಕ ಧರ್ಮ ತಪ್ಪು-ಧರ್ಮ, ಜಾತಿ ವಿಚಾರಕ್ಕೆ ಸರ್ಕಾರ ಕೈ ಹಾಕಬಾರದು-ತಪ್ಪೊಪ್ಪಿಕೊಂಡ ಸಚಿವ ಡಿಕೆಶಿ        ಅಂಬಿ ಮನೆಗೆ ಮಂಡ್ಯ ಜೆಡಿಎಸ್​​​​ ಕ್ಯಾಂಡಿಡೇಟ್​-ಕ್ಯಾಂಪೇನ್​​​​ಗೆ ಬರುವಂತೆ ರೆಬಲ್​ಗೆ​​​​​​ ಇನ್ವೇಟ್​-ಅಶೀರ್ವಾದ ಪಡೆದ ಶಿವರಾಮೇಗೌಡ       
Breaking News

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಅಷ್ಟಪಥ

Saturday, 09.06.2018, 3:02 AM       No Comments

466 ಕೋಟಿ ರೂ. ವೆಚ್ಚದಲ್ಲಿ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಸಂರ್ಪಸುವ ಅಷ್ಟಪಥದ ‘ಮೇಜರ್ ಆರ್ಟಿರಿಯಲ್ ರಿಂಗ್ ರಸ್ತೆ’ (ಎಂಎಆರ್) ನಿರ್ವಣಕ್ಕೆ ಬಿಡಿಎ ಮುಂದಾಗಿದೆ. ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. 320 ಎಕರೆ ಭೂಮಿಯನ್ನೂ ಸ್ವಾಧೀನಪಡಿಸಿಕೊಂಡಿದೆ. ಇನ್ನೆರಡು ವರ್ಷದಲ್ಲಿ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ. ಈ ರಸ್ತೆ ಅಭಿವೃದ್ಧಿಯಿಂದ ಬೆಂಗಳೂರಿನ ಕೆಂಪೇಗೌಡ ಬಡಾವಣೆಗೂ ಅಭಿವೃದ್ಧಿ ಭಾಗ್ಯ ದೊರೆಯಲಿದ್ದು, ಸುತ್ತಮುತ್ತಲಿನ ಭೂಮಿ ಬೆಲೆ ಮತ್ತಷ್ಟು ಏರಲಿದೆ.

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಸಂರ್ಪಸುವಂತೆ ನೈಸ್ ರಸ್ತೆಗೆ ಸಮಾನಾಂತರವಾಗಿ 8 ಪಥದ ರಸ್ತೆ ನಿರ್ವಿುಸಲು ಬಿಡಿಎ ಮುಂದಾಗಿದೆ. ಮೇಜರ್ ಆರ್ಟಿರಿಯಲ್ ರಿಂಗ್ ರಸ್ತೆ ನಿರ್ವಣಕ್ಕೆ (ಎಂಎಆರ್) ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂದಾಜು 466 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ವಿುಸಲು ಸ್ಟಾರ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಸಂಸ್ಥೆಗೆ ಟೆಂಡರ್ ಅಂತಿಮಗೊಳಿಸಲಾಗಿದೆ. ಇದರಿಂದ ಕೆಂಪೇಗೌಡ ಬಡಾವಣೆಗೂ ಅಭಿವೃದ್ಧಿ ಭಾಗ್ಯ ದೊರೆಯುವ ಜತೆಗೆ ಸುತ್ತಮುತ್ತಲಿನ ಭೂಮಿ ಬೆಲೆ ಮತ್ತಷ್ಟು ಏರಲಿದೆ.

ಮಾಗಡಿ ರಸ್ತೆಯ ಸೀಗೆಹಳ್ಳಿಯ ಬಳಿಯಿಂದ ಮೈಸೂರು ರಸ್ತೆಯ ಚಲ್ಲಘಟ್ಟಕ್ಕೆ ಸಂರ್ಪಸುವಂತೆ 100 ಮೀಟರ್ ಅಗಲದ ರಸ್ತೆಯಲ್ಲಿ 23 ಮೀಟರ್ ಮುಖ್ಯ ಸಾಗಣೆ ಮಾರ್ಗಗಳಿರಲಿದೆ. ರಸ್ತೆಯ ಇಕ್ಕೆಲಗಳಲ್ಲಿ ವಾಣಿಜ್ಯ ಸಂಕೀರ್ಣಗಳಿಗೆ ಅವಕಾಶ, ಸರ್ವೀಸ್ ರಸ್ತೆ, ಪಾದಚಾರಿ ಮಾರ್ಗ ಸೇರಿ ಇನ್ನಿತರ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. 2 ವರ್ಷದಲ್ಲಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲು ಟೆಂಡರ್​ನಲ್ಲಿ ಸೂಚಿಸಲಾಗಿದೆ.

320 ಎಕರೆ ಭೂಸ್ವಾಧೀನ

ಎಂಎಆರ್ ರಸ್ತೆಗಾಗಿ ಒಟ್ಟಾರೆ 320 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡಿರುವ ಬಿಡಿಎ, ಭೂಮಿ ಕಳೆದುಕೊಂಡ ರೈತರಿಗೆ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ನೀಡಲು ತೀರ್ವನಿಸಿದೆ. ಈ ಹಿಂದೆ ಪೆರಿಫೆರಲ್ ರಿಂಗ್ ರಸ್ತೆ ನಿರ್ವಣದಲ್ಲಿ ಭೂ ಸ್ವಾಧೀನದ ವಿಚಾರದಲ್ಲಾದ ಎಡವಟ್ಟಿನಿಂದ ಪಾಠ ಕಲಿತಿರುವ ಬಿಡಿಎ, ಪ್ರಸ್ತುತ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಹಣದ ಬದಲಾಗಿ ಶೇ.50 ಅಭಿವೃದ್ಧಿ ಪಡಿಸಿದ ಭೂಮಿಯನ್ನೇ ನೀಡಲು ಮುಂದಾಗಿದೆ. ಇದರಿಂದ ಜಮೀನು ಮಾಲೀಕರೊಂದಿಗಿನ ಸಂಬಂಧ ಹಾಗೂ ಯೋಜನೆ ಶೀಘ್ರ ಪೂರ್ಣಗೊಳಿಸಲು ಸಹಕಾರಿಯಾಗಲಿದೆ. ಕಂಬಿಪುರ, ಕೆ. ಕೃಷ್ಣಸಾಗರ, ಭೀಮನಕುಪ್ಪೆ, ಸೂಲಿಕೆರೆ, ಕೆಂಚೇನಪುರ, ಕನ್ಹಳ್ಳಿ, ಕೊಡಿಗೆಹಳ್ಳಿ, ಮಾಚೋಹಳ್ಳಿ, ಚಲ್ಲಘಟ್ಟ, ಸೀಗೇಹಳ್ಳಿ ಭಾಗದಲ್ಲಿ ಈಗಾಗಲೇ ಬಿಡಿಎ ಭೂಸ್ವಾಧೀನ ಮಾಡಿಕೊಂಡಿದೆ.

ಚಲ್ಲಘಟ್ಟದಲ್ಲಿ ಮೆಟ್ರೋ ಡಿಪೋ

ಮೆಟ್ರೋ 2ನೇ ಹಂತದಲ್ಲಿ ಚಲ್ಲಘಟ್ಟದಲ್ಲಿ ಡಿಪೋ ನಿರ್ವಣವಾಗಲಿದ್ದು, ಕೆಂಪೇಗೌಡ ಬಡಾವಣೆ ಸಂರ್ಪಸಲಿದೆ. ಈ ಸಂಬಂಧ ಬಿಡಿಎ ಹಾಗೂ ಬೆಂಗಳೂರು ಮೆಟ್ರೋ ರೈಲು ನಿಗಮ ಮಾತುಕತೆ ನಡೆಸುತ್ತಿದ್ದು, ನಿಲ್ದಾಣಗಳು, ಸಂಪರ್ಕ ವ್ಯವಸ್ಥೆ ಇತ್ಯಾದಿ ವಿಚಾರಗಳನ್ನು ಅಂತಿಮಗೊಳಿಸಲಿದೆ.

ಹಳೇ ಯೋಜನೆಗೆ ಹೊಸ ರೂಪ

2011ರಲ್ಲಿ ಪೆರಿಫೆರಲ್ ರಿಂಗ್ ರಸ್ತೆ-2 (ಪಿಆರ್​ಆರ್-2)ಎಂಬ ಯೋಜನೆ ಅನುಷ್ಠಾನಕ್ಕೆ ಬಿಡಿಎ ಮುಂದಾಗಿತ್ತು. ಈ ಸಂಬಂಧ 500 ಎಕರೆಗೂ ಹೆಚ್ಚು ಪ್ರದೇಶವನ್ನು ಭೂಸ್ವಾಧೀನ ಮಾಡಿಕೊಂಡು ಅಂತಿಮ ಅಧಿಸೂಚನೆ ಪ್ರಕಟಿಸಲಾಗಿತ್ತು. ಆದರೆ ಜಮೀನು ಕಳೆದುಕೊಂಡವರಿಗೆ ಪರಿಹಾರ ಇನ್ನಿತರ ಸಮಸ್ಯೆಗಳಿಂದಾಗಿ ಯೋಜನೆ ಅನುಷ್ಠಾನಕ್ಕೆ ಹಿಂದೇಟು ಹಾಕಿತ್ತು. ಇದೀಗ ಪಿಆರ್​ಆರ್-2ನಲ್ಲಿ ಒಂದು ಭಾಗವನ್ನು ಆಯ್ದುಕೊಂಡಿರುವ ಬಿಡಿಎ, ಎಂಎಆರ್ ನಿರ್ವಿುಸಲು ಯೋಜನೆ ರೂಪಿಸಿದೆ. ಇದರಿಂದ ಕೆಂಪೇಗೌಡ ಬಡಾವಣೆಗೆ ಉತ್ತಮ ಸಂಪರ್ಕ ಸಿಗಲಿದೆ. ಹೊಸ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಬಿಟ್ಟು ಪಿಆರ್​ಆರ್-2ನಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಅಧಿಸೂಚನೆ ರದ್ದುಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *

Back To Top