Tuesday, 16th January 2018  

Vijayavani

ಮಹದಾಯಿ ಉಳಿಸಿಕೊಳ್ಳಲು ಏನು ಬೇಕಾದ್ರೂ ಮಾಡ್ತೀವಿ - ಮತ್ತೆ ಕ್ಯಾತೆ ತೆಗೆದ ಪಾಲ್ಯೇಕರ್​ - ಇತ್ತ ಗೋವಾ ಸಚಿವನ ವಿರುದ್ಧ ಪಾಟೀಲ್ ಕಿಡಿ        ನನ್ನ ವಿರುದ್ಧ ಸುಳ್ಳು ಕೇಸ್​ ದಾಖಲಿಸಲು ಯತ್ನ - ಕೇಂದ್ರ ಸರ್ಕಾರದ ವಿರುದ್ಧ ತೊಗಾಡಿಯಾ ಕಿಡಿ - ಕಣ್ಣೀರಿಟ್ಟು ಅಚ್ಚರಿ ಮೂಡಿಸಿದ ಫೈರ್ ಬ್ರ್ಯಾಂಡ್​        ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡು ಬಾವಿಗೆ ಬಿದ್ದ ಮರಿ ಆನೆ - ಮರಿ ಮೇಲೆತ್ತಲು ಅರಣ್ಯ ಇಲಾಖೆ ಹರ ಸಾಹಸ - ತಮಿಳುನಾಡಿನ ರಾಯಕೋಟೆ ಬಳಿ ಘಟನೆ        ಭಾರತ ಪ್ರವಾಸದಲ್ಲಿ ಇಸ್ರೇಲ್​ ಪ್ರಧಾನಿ - ಮುಂಬೈಗೆ ಬಂದಿಳಿದ ಮುಂಬೈ ದಾಳಿ ಸಂತ್ರಸ್ತ ಮೋಶೆ - ಭಾರತಕ್ಕೆ ಬಂದಿದ್ದು ಖುಷಿ ತಂದಿದೆ ಎಂದ ಬಾಲಕ        ತಮಿಳುನಾಡಿನಲ್ಲಿ ಮುಂದುವರಿದ ಪೊಂಗಲ್ ಸಡಗರ - ಅಳಂಗನಲ್ಲೂರಿನಲ್ಲಿ ಜಲ್ಲಿಕಟ್ಟು ಕಿಕ್​ - ಸಿಎಂ, ಡಿಸಿಎಂ ರಿಂದ ಕ್ರೀಡೆ ಉದ್ಘಾಟನೆ       
Breaking News :

ಪ್ರಜಾಪ್ರಭುತ್ವಕ್ಕಾಗಿ ಸುಪ್ರೀಂಕೋರ್ಟ್ ಉಳಿಸಿ: ನಾಲ್ವರು ನ್ಯಾಯಮೂರ್ತಿಗಳ ಮೊರೆ

Friday, 12.01.2018, 1:54 PM       No Comments

<< ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯಾಯಮೂರ್ತಿಗಳಿಂದ ಸುದ್ದಿಗೋಷ್ಠಿ >>

ನವದೆಹಲಿ: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕೆಂದರೆ ಸುಪ್ರೀಂಕೋರ್ಟ್​ ಅನ್ನು ಉಳಿಸಿ ಎಂದು ಸುಪ್ರೀಂ ಕೋರ್ಟ್​ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ದೇಶದ ಜನತೆಗೆ ಮನವಿ ಮಾಡಿದ್ದಾರೆ.

ಸ್ವತಂತ್ರ ಭಾರತ ಹಾಗೂ ಸುಪ್ರೀಂಕೋರ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿ, ಕೋರ್ಟ್​ನ ಆಡಳಿತ ವ್ಯವಸ್ಥೆಯ ಕುರಿತು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಸುಪ್ರೀಂಕೋರ್ಟ್​ನ ಹಿರಿಯ ನ್ಯಾಯಮೂರ್ತಿ ಜಸ್ತಿ ಚಲಮೇಶ್ವರ್​ ಅವರು ಶುಕ್ರವಾರ ದೆಹಲಿಯ ತುಘಲಕ್​ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಇತರೆ ನ್ಯಾಯಮೂರ್ತಿಗಳ ಪರವಾಗಿ ಮಾತನಾಡಿದರು. ಹಿರಿಯ ನ್ಯಾಯಮೂರ್ತಿಗಳಾದ ಜಸ್ಟೀಸ್​ ಜೋಸೆಫ್​ ಕುರಿಯನ್​, ಜಸ್ಟೀಸ್​ ರಂಜನ್​ ಗೊಗೋಯ್​, ಜಸ್ಟೀಸ್​ ಮದನ್​ ಲೋಕೂರ್​ ಸಾಥ್​ ನೀಡಿದರು.

ಸುಪ್ರೀಂಕೋರ್ಟ್​ನ ಆಡಳಿತ ವ್ಯವಸ್ಥೆ ಹಳಿ ತಪ್ಪುತ್ತಿರುವ ಕುರಿತು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆವು. ಜತೆಗೆ ಆಡಳಿತ ವ್ಯವಸ್ಥೆ ಸುಧಾರಿಸುವ ಕುರಿತು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದೆವು. ಈ ಕುರಿತು 2 ತಿಂಗಳ ಹಿಂದೆ ಸಿಜೆಐಗೆ ಪತ್ರ ಸಹ ಬರೆದಿದ್ದೆವು. ಶುಕ್ರವಾರ ಬೆಳಗ್ಗೆ ಸಹ ದೀಪಕ್​ ಮಿಶ್ರಾ ಅವರನ್ನು ನಾವು ನಾಲ್ವರೂ ಭೇಟಿ ಮಾಡಿ ಮನವೊಲಿಸಲು ಪ್ರಯತ್ನಿಸಿದೆವು. ಆದರೆ, ಅದು ಸಾಧ್ಯವಾಗಲಿಲ್ಲ ಎಂದು ಚಲಮೇಶ್ವರ್​ ಅವರು ತಿಳಿಸಿದರು.

ಎಲ್ಲಿಯವರೆಗೆ ಸುಪ್ರೀಂಕೋರ್ಟ್​​ನ ಘನತೆಯನ್ನು ಕಾಪಾಡುವುದರ ಜತೆಗೆ ಅದರ ತಟಸ್ಥ ಧೋರಣೆಯನ್ನು ಪೋಷಿಸುವುದಿಲ್ಲವೋ ಅಲ್ಲಿಯವರೆಗೆ ಈ ದೇಶದ ಅಥವಾ ಯಾವುದೇ ದೇಶದ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಉತ್ತಮ ಪ್ರಜಾಪ್ರಭುತ್ವವೆಂದರೆ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ನ್ಯಾಯಾಧೀಶ. ಇಲ್ಲಿ ನ್ಯಾಯಾಧೀಶ ಎಂಬುದು ಸಾಂಕೇತಿಕ ; ಅದು ಸಂಸ್ಥೆ ಎಂದರ್ಥ ಎಂದು ಅಭಿಪ್ರಾಯಪಟ್ಟರು.

ತುರ್ತು ಸಭೆ ಕರೆದ ಪ್ರಧಾನಿ ಮೋದಿ

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿದ ಬಳಿಕ ದೇಶಾದ್ಯಂತ ಭಾರೀ ಸಂಚಲನ ಉಂಟಾಗಿದ್ದು, ಈ ಕುರಿತು ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ಕರೆದಿದ್ದಾರೆ. ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಅವರಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಬುಲಾವ್​ ನೀಡಲಾಗಿದೆ.

ಕಣ್ಣೀರಿಟ್ಟಿದ್ದ ಸಿಜೆಐ ಟಿ.ಎಸ್​. ಠಾಕೂರ್​

ಭಾರತದ ನ್ಯಾಯಾಲಯಗಳಲ್ಲಿ ಕೋಟ್ಯಂತರ ಪ್ರಕರಣಗಳು ಕೊಳೆಯುತ್ತಿದ್ದು, ಅವುಗಳ ಇತ್ಯರ್ಥಕ್ಕೆ ಸಾಕಷ್ಟು ನ್ಯಾಯಾಧೀಶರಿಲ್ಲದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಟಿ.ಎಸ್​. ಠಾಕೂರ್​ ಅವರು 2016ರ ಏಪ್ರಿಲ್​ನಲ್ಲಿ ಕಣ್ಣೀರಿಟ್ಟಿದ್ದರು.

ದೇಶದ ಪ್ರಧಾನಮಂತ್ರಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರೆದುರೇ ನ್ಯಾಯಾಂಗದ ದುಸ್ಥಿತಿಯ ಬಗ್ಗೆ ಮಾತನಾಡುತ್ತ ಸಿಜೆಐ ಗದ್ಗದಿತರಾದ ದೃಶ್ಯ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಸಿಜೆಐ ದುಃಖಕ್ಕೆ ತಕ್ಷಣವೇ ಪ್ರಧಾನಿ ಸ್ಪಂದಿಸಿ, ಅದೇ ಸಮಾರಂಭದಲ್ಲಿ ತುರ್ತು ಕ್ರಮದ ನಿರ್ಣಯ ಕೈಗೊಂಡಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top