Monday, 23rd October 2017  

Vijayavani

1. ಲಿಂಗಾಯತರು ಹಿಂದೂಗಳಲ್ಲ ಹೇಳಿಕೆ – ಜಾಮದಾರ್​ಗೆ ಕನೇರಿ ಮಠದ ಶ್ರೀ ತಿರುಗೇಟು – ಬಹಿರಂಗ ಚರ್ಚೆಗೆ ಕಾಡಸಿದ್ದೇಶ್ವರ ಸ್ವಾಮಿಗಳ ಆಹ್ವಾನ 2. ರಾಜ್ಯ ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ – ಸಿದ್ದು, ಪರಂ, ಡಿಕೆಶಿ ದೂರ ದೂರ – ಹೈಕಮಾಂಡ್​ ಸಾಮೂಹಿಕ ಜಪ, ನಾಯಕರು ಸಪರೇಟ್​ ರೂಪ 3. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಜನರ ತೆರಿಗೆ ದುಡ್ಡಲ್ಲಿ ಕಾಂಗ್ರೆಸ್‌ ಪಕ್ಷಕ್ಕೂ ಪ್ರಚಾರ – ಬೆನ್ನುತಟ್ಟಿಕೊಳ್ಳೋ ಸಮಾವೇಶಕ್ಕೆ ಪಿಡಿಓಗಳೂ ದುರ್ಬಳಕೆ 4. ನಟ ವಿಜಯ್ ಬೆಂಬಲಕ್ಕೆ ನಿಂತ ತಲೈವಾ – ಮೆರ್ಸಲ್‌ ಸಿನಿಮಾದ ಬಗ್ಗೆ ಮೆಚ್ಚುಗೆಯ ಟ್ವೀಟ್ – ವಿವಾದಾತ್ಮಕ ವಿಷಯಗಳಿಗೂ ರಜನಿಕಾಂತ್ ಪರೋಕ್ಷ ಶ್ಲಾಘನೆ 5. ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಬಿಗ್​ ಶಾಕ್​ – ಬಿಜೆಪಿಗೆ ಸೇರಲು 1 ಕೋಟಿ ರೂ ಆಮೀಷ – ಹಾರ್ದಿಕ್​ ಪಟೇಲ್​ ಸಂಗಡಿಗನ ಗಂಭೀರ ಆರೋಪ
Breaking News :

ಎಂಬಿಗೆ ವಿನಾಶಕಾಲೇ ಬುದ್ಧಿ, ರಾಗಾಗೆ ಕಾಮನಸೆನ್ಸೂ ಇಲ್ಲ ಅಂದ್ರು ಬಿಎಸ್ವೈ

Wednesday, 13.09.2017, 10:10 AM       No Comments

ಬಾಗಲಕೋಟೆ: ತಮ್ಮ ರಾಜಕೀಯ ಲಾಭಕ್ಕಾಗಿ ಅಮೆರಿಕದಲ್ಲಿ ವಿದ್ಯಾರ್ಥಿಗಳೆದುರು ಭಾರತದ ಮಾನವನ್ನು ಹರಾಜು ಹಾಕಿದ ಕಾಂಗ್ರೆಸ್​ ಯುವ ನಾಯಕ ರಾಹುಲ್​​ ಗಾಂಧಿ ಅವರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಾಲಗಕೋಟೆಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು ರಾಹುಲ್ ಪ್ರಧಾನಿಯಾಗುವುದು ತಿರುಕ ಕಂಡ ಕನಸಿನಂತಿದೆ ಎಂದು ರಾಹಲ್​ ವಿರುದ್ಧ ಕಿಡಿಕಾರಿದ್ದಾರೆ.

ಜನ ನಗ್ತಾರೆ ಅನ್ನೋ ಕಾಮನ್ ಸೆನ್ಸ್ ಅವರಿಗಿಲ್ಲ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ತಲೆ ಕೆಟ್ಟಿದೆ. ಅವರದ್ದು ಚೈಲ್ಡ್ ಬಿಹೇವಿಯರ್. ಹಾಗಾಗಿ ಅವರು ಏನ್ ಮಾತಾಡ್ತಾರೋ ಅವರಿಗೆ ಗೊತ್ತಾಗ್ತಾ ಇಲ್ಲ. ಅವರ ಗೌರವವನ್ನು ಅವರೇ ಕಳೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಂಬಿಗೆ ವಿನಾಶಕಾಲೇ ಬುದ್ಧಿ:
ಇನ್ನು ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ವಿಚಾರವಾಗಿ ಸಿದ್ದಗಂಗಾ ಶ್ರೀ ಬಗ್ಗೆ ಎಂ.ಬಿ. ಪಾಟೀಲ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪನವರು ಎಂ.ಬಿ. ಪಾಟೀಲರದ್ದು ವಿನಾಶಕಾಲೇ ವಿಪರೀತ ಬುದ್ಧಿ. ಈ ವಿಚಾರದಲ್ಲಿ ಸಿದ್ದಗಂಗಾ ಶ್ರೀಗಳ ಹೆಸರು ತರಬಾರದು ಎಂದು ಸಲಹೆ ನೀಡಿದ್ದಾರೆ.

ಶ್ರೀಗಳ ಬಗ್ಗೆ ಮಾತನಾಡಿದರೆ ಎಲ್ಲರೂ ಅವರನ್ನ ಖಂಡಿಸುತ್ತಾರೆ. ಅವರು ಮೌನವಾಗಿರುವುದು ಶೋಭೆ ತರುವಂಥದ್ದು, ವೀರಶೈವ ಮಹಾಸಭಾ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ರಾಜಕೀಯವಾಗಿ ಗೊಂದಲ ಉಂಟು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top