Friday, 21st September 2018  

Vijayavani

Breaking News

ಕಾಲ್ಚಳಕದಾಟ ಫುಟಬಾಲ್​ ವಿಶ್ವಕಪ್​ಗೆ ವರ್ಣರಂಜಿತ ಚಾಲನೆ

Thursday, 14.06.2018, 10:59 PM       No Comments

ಮಾಸ್ಕೊ: ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸಿರುವ ರಷ್ಯಾದಲ್ಲಿ ಫುಟ್ಬಾಲ್‌ ಸಂಭ್ರಮಕ್ಕೆ ಇಂದು ವರ್ಣರಂಜಿತ ಚಾಲನೆ ನೀಡಲಾಯಿತು.

ಮಾಸ್ಕೊದ ಲುಜ್ನಿಕಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯದ ಆರಂಭಕ್ಕೂ ಮೊದಲು ನಡೆದ ಉದ್ಘಾಟನಾ ಸಮಾರಂಭ ಸಾವಿರಾರು ಪ್ರೇಕ್ಷಕರ ಮನಸೂರೆಗೊಳಿಸಿತು. ರಷ್ಯಾದ ಖ್ಯಾತ ರೂಪದರ್ಶಿ ನಥಾಲಿಯಾ ಅವರೊಂದಿಗೆ 2010ರ ಫಿಫಾ ವಿಶ್ವಕಪ್‌ ವಿಜೇತ ಸ್ಪೇನ್‌ ತಂಡದ ನಾಯಕ ಐಕರ್‌ ಕ್ಯಾಸಿಲಾಸ್‌ ವಿಶ್ವಕಪ್‌ ಟ್ರೋಫಿಯನ್ನು ಕ್ರೀಡಾಂಗಣಕ್ಕೆ ತಂದಿರಿಸಿದರು.

ಖ್ಯಾತ ಪಾಪ್‌ ಗಾಯಕರಾದ ರಾಬಿ ವಿಲಿಯಮ್ಸ್‌, ಅಯ್ದಾ ಗ್ಯಾರಿಫುಲಿನಾ, ನಿಕ್ಕಿ ಜ್ಯಾಮ್‌ ಮತ್ತು ಎರಾ ಇಸ್ಪ್ರೇಫಿ ಅವರ ಹಾಡುಗಳು ಪ್ರೇಕ್ಷಕರಿಗೆ ಮುದ ನೀಡಿತು. ನೃತ್ಯ ಪ್ರದರ್ಶನಗಳು ಕಣ್ಮನ ಸೆಳೆದವು. ನಂತರ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ತಂಡಗಳ ಪಥ ಸಂಚಲನ ನಡೆಯಿತು.
ಸಮಾರಂಭದಲ್ಲಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, “ಫುಟ್ಬಾಲ್‌ ಅನ್ನು ನಾವು ನಿಜಕ್ಕೂ ಪ್ರೀತಿಸುತ್ತೇವೆ. 1897ರಲ್ಲಿ ಇಲ್ಲಿ ಮೊದಲ ಬಾರಿ ಅಧಿಕೃತ ಪಂದ್ಯ ನಡೆಯಿತು. ನಂತರ ಫುಟ್ಬಾಲ್‌ ಬಗ್ಗೆ ಇಲ್ಲಿನ ಜನರಿಗೆ ಪ್ರೀತಿ ಮೊಳೆಯಿತು. ರಷ್ಯಾದ ಫುಟ್​ಬಾಲ್​ ಆತಿಥ್ಯವನ್ನು ಎಲ್ಲರೂ ಸವಿಯಲಿದ್ದಾರೆ. ಈ ಅದ್ಭುತ ಕ್ರೀಡೆ ನಮ್ಮೆಲ್ಲರನ್ನೂ ಬೆಸೆದಿದೆ,” ಎಂದು ಹೇಳಿದರು.

ಈ ಕಾರ್ಯಕ್ರಮದಲ ನಂತರ ರಷ್ಯಾ ಮತ್ತು ಸೌದಿ ಅರೇಬಿಯಾ ನಡುವೆ ಫುಟ್​ಬಾಲ್​ ಪಂದ್ಯ ನಡೆಯಿತು. ಪಂದ್ಯದಲ್ಲಿ ರಷ್ಯಾ 5-0 ಗೋಲು ಅಂತರದಲ್ಲಿ ಮೊದಲ ಗೆಲುವು ದಾಖಲಿಸಿತು.

Leave a Reply

Your email address will not be published. Required fields are marked *

Back To Top