Saturday, 26th May 2018  

Vijayavani

ರಾಮನಗರದಲ್ಲಿ ನಾಡಿಗೆ ಬಂತು ಚಿರತೆ - ರೇಷ್ಮೆ ಸಾಕಾಣಿಕಾ ಕೊಠಡಿಯಲ್ಲಿ ಸೆರೆ - ಅರಣ್ಯಇಲಾಖೆ ಅಧಿಕಾರಿಗಳಿಂದ ಆಪರೇಷನ್​​ ಚಿರತೆ        ಬಿಬಿಎಂಪಿ ರಸ್ತೆ ಕಾಮಗಾರಿ ವೇಳೆ ದುರಂತ - ಬಾಲಕನ ಮೇಲೆ ಹರಿದ ರೋಡ್​​ರೋಲರ್​​ - ಸೈಕಲ್​ ತುಳಿಯುತ್ತಿದ್ದ ಬಾಲಕ ದರ್ಮರಣ        ಕೈ​​​ ಹೈ ಕಮಾಂಡ್​ ಭೇಟಿಗೆ ನಿಗದಿಯಾಗದ ಟೈಂ - ರಾಜ್ಯ ಕಾಂಗ್ರೆಸ್​​​​ ನಾಯಕರ ದೆಹಲಿ ಪ್ರವಾಸ ಕ್ಯಾನ್ಸಲ್​​​ - ಇತ್ತ ಪ್ರಧಾನಿ ಭೇಟಿಗೆ ಸಮಯಾವಕಾಶ ಕೇಳಿದ ಸಿಎಂ        11 ದಿನವಾದ್ರೂ ಸ್ವಕ್ಷೇತ್ರದತ್ತ ಬಾರದ ಶಾಸಕರು - ನಾಯಕರ ಮನೆಗಳಿಗೆ ಬಂದ್ರು ಬೆಂಬಲಿಗರು - ಗೋಳು ಕೇಳೋರಿಲ್ಲದೆ ಜನರ ಕಂಗಾಲು        ಮೋದಿ ಸರ್ಕಾರಕ್ಕೆ ತುಂಬಿತು ನಾಲ್ಕು ವರ್ಷ - 15 ದಿನಗಳ ಕಾಲ ಬಿಜೆಪಿ ಸಂಭ್ರಮಾಚರಣೆ - ಅತ್ತ ಕಾಂಗ್ರೆಸ್​​​ನಿಂದ ವಿಶ್ವಾಸ ದಿನಾಚರಣೆ        ಗಡಿ ನುಸುಳಲು ಬಂದವರಿಗೆ ಬ್ರೇಕ್​ - ಜಮ್ಮುವಿನಲ್ಲಿ ಸೇನಾ ದಾಳಿಗೆ ಐವರು ಉಗ್ರರು ಮಟಾಷ್​​ - ಶಸ್ತ್ರಾಸ್ತ್ರಗಳು ವಶ, ಮುಂದುವರಿದ ಶೋಧ       
Breaking News

ಐತಿಹಾಸಿಕ ಜಾಮಾ ಮಸೀದಿ ಜಮುನಾ ದೇವಿ ದೇವಸ್ಥಾನ ಆಗಿತ್ತಂತೆ !

Thursday, 07.12.2017, 4:18 PM       No Comments

<< ಬಿಜೆಪಿ ನಾಯಕ ವಿನಯ್ ಕಟಿಯಾರ್ ಪ್ರತಿಪಾದನೆ >>

ನವದೆಹಲಿ: ಐತಿಹಾಸಿಕ ಜಾಮಾ ಮಸೀದಿ ಮೂಲತಃ ಜಮುನಾ ದೇವಿ ದೇವಸ್ಥಾನವಾಗಿತ್ತು ಎಂದು ಭಾರತೀಯ ಜನತಾ ಪಾರ್ಟಿ ಪ್ರತಿಪಾದಿಸಿದೆ.

ಮೊಘಲ್​ ದೊರೆಗಳಿಂದ ಸುಮಾರು 6000 ಸ್ಥಳಗಳು ನಾಶವಾಗಿವೆ. ತಾಜ್​ಮಹಲ್​ ಹೇಗೆ ತೇಜೋ ಮಹಾಲಯವಾಗಿತ್ತೋ ಹಾಗೆಯೇ ಜಾಮಾ ಮಸೀದಿ ಹಿಂದೆ ಜಮುನಾ ದೇವಾಲಯವಾಗಿತ್ತು ಎಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಹೇಳಿಕೊಂಡಿದ್ದಾರೆ.

ನಮ್ಮ ಧಾರ್ಮಿಕ ಕ್ಷೇತ್ರಗಳೆಲ್ಲಾ ಮುಸ್ಲಿಮರಿಂದ ದಾಳಿಗೊಳಪಟ್ಟಿವೆ. ಆದರೆ, ನಾವು ಮಾತ್ರ ರಾಮಜನ್ಮ ಭೂಮಿ, ಕಾಶಿಯ ಬಾಬ ವಿಶ್ವನಾಥ ಮಂದಿರ, ಮಥುರಾದ ಕೃಷ್ಣ ಜನ್ಮಭೂಮಿ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ. ಆದರೆ, ಸದ್ಯಕ್ಕೆ ರಾಮಮಂದಿರ ನಿರ್ಮಾಣ ಮಾತ್ರ ನಮ್ಮ ಬೇಡಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಸುಪ್ರೀಂಕೋರ್ಟ್​ನಲ್ಲಿ ನಡೆದ ಅಯೋಧ್ಯೆ ಪ್ರಕರಣದ ವಿಚಾರಣೆ ವೇಳೆ ಸುನ್ನಿ ವಕ್ಫ್ ಬೋರ್ಡ್ ಅ​ನ್ನು ಪ್ರತಿನಿಧಿಸಿದ್ದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ತಾಳಿದ ನಿಲುವನ್ನು ಕಟಿಯಾರ್ ತೀವ್ರವಾಗಿ ವಿರೋಧಿಸಿದ್ದಾರೆ.

ಮುಸ್ಲಿಮರು ರಾಮಮಂದಿರದ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಲು ಹೊರಟಿದ್ದಾರೆ. ಆದರೆ, ನಾವು ಅದನ್ನು ಬಿಡುವುದಿಲ್ಲ. ಒಂದು ವೇಳೆ ಕಾಂಗ್ರೆಸ್ ಅಲ್ಲಿ ಮಸೀದಿ ನಿರ್ಮಿಸುವ ಸಾಹಸ ಮಾಡಿದರೆ, ನಾವು ಉಳಿದ 6000 ಸ್ಥಳಗಳ ಬಗ್ಗೆಯೂ ಮಾತನಾಡಬೇಕಾಗುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top