Sunday, 21st January 2018  

Vijayavani

ಬಳ್ಳಾರಿಯಲ್ಲಿ ಮನೆಗೆ ಬಂದ ಜಾಂಬವಂತ- ಚಿರತೆ ಭಯದಿಂದ ತುಮಕೂರಲ್ಲಿ ಮನೆ ಬಿಟ್ಟ ಕುಟುಂಬ- ರಾಜ್ಯದಲ್ಲಿ ಹೆಚ್ಚಿದ ಕಾಡುಪ್ರಾಣಿಗಳ ಉಪಟಳ        ಕೊಳ್ಳೇಗಾಲದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ- ಮಾದಪ್ಪನ ಬೆಟ್ಟದಲ್ಲಿ ಬಿಎಸ್​ವೈ ವಿಶೇಷ ಪೂಜೆ - ಫ್ಲೆಕ್ಸ್​​ ವಿಚಾರವಾಗಿ ಕಾರ್ಯಕರ್ತರ ಗಲಾಟೆ        ಹೆಲ್ಮೆಟ್​ ಧರಿಸಿ ಬಂದ ಕದೀಮ- ನರ್ಸ್​ ಇರುವಾಗಲೇ ಕ್ಯಾಶ್ ಎಗರಿಸಿದ- ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಹಗಲು ದರೋಡೆ        ದೆಹಲಿ ಅಗ್ನಿ ಅವಘಡದಲ್ಲಿ 17 ಮಂದಿ ಸಜೀವದಹನ- ಪಟಾಕಿ ಕಾರ್ಖಾನೆ ಮಾಲೀಕನ ಬಂಧನ- ಮೃತರಿಗೆ 5 ಲಕ್ಷ ಪರಿಹಾರ (ಕಾರ್ಖಾನೆ ಮಾಲೀಕನ ಬಂಧನ)        ಲಾಲ್​​ಬಾಗ್​ನಲ್ಲಿ ಪುಷ್ಪ ಪ್ರದರ್ಶನ- ಸಸ್ಯಕಾಶಿಗೆ ಹರಿದು ಬಂದ ಜನ- ಲಾಲ್​ಬಾಗ್​ ಸುತ್ತಮುತ್ತ ಭಾರಿ ಟ್ರಾಫಿಕ್​       
Breaking News :

ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು: ಮಹಿಳೆ ಮೇಲೆ ಫೈರಿಂಗ್

Tuesday, 19.09.2017, 11:07 PM       No Comments

ವಿಜಯಪುರ: ಕಳೆದ ಕೆಲ ದಿನಗಳಿಂದ ಶಾಂತವಾಗಿದ್ದ ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು ಮಾರ್ಧನಿಸಿದೆ. ಮಹಿಳೆ ಮೇಲೆ ಎರಡು ಸುತ್ತು ಫೈರಿಂಗ್ ಮಾಡಿ ಕೊಲೆಗೆ ಯತ್ನಿಸಲಾಗಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ.

ವಿಜಯಪುರ ನಗರದ ಶಾಸ್ತ್ರಿ ಕಾಲೊನಿಯಲ್ಲಿ ರಾತ್ರಿ 9 ರ ಸುಮಾರಿಗೆ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಮುಮ್ತಾಜ್ ಖಾನ್ ಎಂಬಾಕೆ ಮೇಲೆ ರಹೀಂ ನಗರ ನಿವಾಸಿ ಸಮೀರ ಪಠಾಣ ಎಂಬಾತ ಗುಂಡು ಹಾರಿಸಿದ್ದಾನೆ. ಎರಡು ಸುತ್ತು ಫೈರಿಂಗ್ ಮಾಡಿ ಕೊಲೆಗೆ ಯತ್ನಿಸಲಾಗಿದೆ. ಆದರೆ, ಮುಮ್ತಾಜ್ ಖಾನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಗೆ ಅನೈತಿಕ ಸಂಬಂಧವೇ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಗಾಂಧಿ ಚೌಕ್ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top