Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ದೇಶೀಯ ಸರಕು ಸಾಗಣೆ ಹಡಗಿನಲ್ಲಿ ಸ್ಫೋಟ: 22 ಸಿಬ್ಬಂದಿ ರಕ್ಷಣೆ

Thursday, 14.06.2018, 2:38 PM       No Comments

ಕೋಲ್ಕತ: ಇಪ್ಪತ್ತೆರಡು ಸಿಬ್ಬಂದಿ ಸಾಗುತ್ತಿದ್ದ ದೇಶೀಯ ಸರಕು ಸಾಗಣೆ ಹಡಗಾದ ಎಂವಿ ಎಸ್ಎಸ್​ಎಲ್​ ಕೋಲ್ಕತದ ಡೆಕ್​ನಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದ್ದು, ಎಲ್ಲ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.

ಕೃಷ್ಣಪಟ್ಟಣಂನಿಂದ ಕೋಲ್ಕತಗೆ ತೆರಳುತ್ತಿದ್ದಾಗ ಸಮುದ್ರ ಮಾರ್ಗ ಮಧ್ಯದಲ್ಲಿ ವೆಸೆಲ್​ ಡೆಕ್​ನಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟ ಸಂಭವಿಸಿ ಬೆಂಕಿ ಆವರಿಸಿದೆ. ವಿಷಯ ತಿಳಿದ ತಕ್ಷಣ ಹಲ್ದಿಯಾದಿಂದ ತೆರಳಿದ ಭಾರತೀಯ ಕೋಸ್ಟ್ ಗಾರ್ಡ್ ಹಡಗು ರಾಜ್​ಕಿರಣ್​ ಹಡಗಿನಲ್ಲಿದ್ದ 22 ಸಿಬ್ಬಂದಿಯನ್ನು ರಕ್ಷಿಸಿದೆ.

ಮೂಲಗಳ ಪ್ರಕಾರ ಈಗಾಗಲೇ ಹಡಗಿನ ಶೇ.70 ಭಾಗ ಬೆಂಕಿಗೆ ಆಹುತಿಯಾಗಿದ್ದು, ಈ ಹಡಗು ಶ್ರೇಯಸ್​ ಶಿಪ್ಪಿಂಗ್​ ಅಂಡ್​ ಲಾಜಿಸ್ಟಿಕ್ಸ್​ನದ್ದು ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top