Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

66 ವರ್ಷಗಳಿಂದ ಬಿಟ್ಟಿದ್ದ ಗಿನ್ನೆಸ್​ ದಾಖಲೆಯ ಉಗುರು ಕತ್ತರಿಸಲು ಒಪ್ಪಿಕೊಂಡ ಹಿರಿಯ ನಾಗರಿಕ

Wednesday, 11.07.2018, 4:20 PM       No Comments

ನ್ಯೂಯಾರ್ಕ್​: ಸತತ 66 ವರ್ಷಗಳಿಂದ ಉಗುರನ್ನು ಕತ್ತರಿಸದೆ ಗಿನ್ನೆಸ್​ ದಾಖಲೆ ನಿರ್ಮಿಸಿದ್ದ ಹಿರಿಯ ನಾಗರಿಕ ಶ್ರೀಧರ್​ ಚಿಲ್ಲಾಲ್​ ಇದೀಗ ತಮ್ಮ ಉದ್ದನೆಯ ಉಗುರುಗಳನ್ನು ಕಟ್​ ಮಾಡಲು ಒಪ್ಪಿಕೊಂಡಿದ್ದಾರೆ. ಹಾಗಾಗಿಯೇ ಟೈಮ್ಸ್​ ಸ್ಕ್ವಾರ್​ನ ಮ್ಯೂಸಿಯಂನಲ್ಲಿ ಉಗುರು ಕತ್ತರಿಸುವ ಸಮಾರಂಭವನ್ನು ಇಂದು ಆಯೋಜಿಸಲಾಗಿತ್ತು.

ಶ್ರೀಧರ್​ ಮೂಲತಃ ಭಾರತದವರಾಗಿದ್ದು ಈಗ 82 ವರ್ಷ ವಯಸ್ಸಾಗಿದೆ. ತಮ್ಮ ಎಡಗೈನ ಉಗುರನ್ನು 1952ರಿಂದಲೂ ಕತ್ತರಿಸಿರಲಿಲ್ಲ. ಇದರಿಂದ ಅವರ ಉಗುರುಗಳು ಸುಮಾರು 909.6 ಸೆಂಟಿ ಮೀಟರ್​ಗಳಷ್ಟು ಉದ್ದ ಬೆಳೆದಿವೆ. ಹೆಬ್ಬೆರಳಿನ ಉಗುರು 197.8 ಸೆಂಟಿ ಮೀಟರ್​ಗಳಷ್ಟು ಬೆಳೆದಿದೆ. ಈ ಉದ್ದನೆಯ ಉಗುರುಗಳು 2016ರಲ್ಲಿ ಗಿನ್ನೆಸ್​ ದಾಖಲೆ ಮಾಡಿದ್ದವು.

ಅಂತೂ ಉದ್ದುದ್ದ ಉಗುರುಗಳನ್ನು ಬಿಟ್ಟುಕೊಂಡಿದ್ದ ಶ್ರೀಧರ್ ಒಂದೇ ಕೈಯಲ್ಲಿ ಕೆಲಸಗಳನ್ನು ಮಾಡಿಕೊಳ್ಳಬೇಕಾಗಿತ್ತು. ಇನ್ನು ಉಗುರು ಕತ್ತರಿಸಿದ ಬಳಿಕ ಸಹಜ ಜೀವನ ನಡೆಸಬಹುದಾಗಿದೆ.

Leave a Reply

Your email address will not be published. Required fields are marked *

Back To Top