More

    ಮತದಾರರಿಂದಲೇ ಫೀಡ್​ಬ್ಯಾಕ್; ಪಂಚ ರಾಜ್ಯ ಚುನಾವಣೆಗೆ ಮುನ್ನ ಜನರ ಮನದಿಂಗಿತ ಅರಿಯುವ ಯತ್ನ

    ನವದೆಹಲಿ: ಕೋವಿಡ್ ಪರಿಸ್ಥಿತಿ ನಿರ್ವಹಣೆ, 370ನೇ ವಿಧಿ ರದ್ದತಿ, ದಿಢೀರ್ ತ್ರಿವಳಿ ತಲಾಖ್ ರದ್ದುಗೊಳಿಸಿದ್ದು, ರಾಮ ಮಂದಿರ ನಿರ್ಮಾಣ ಕೈಗೆತ್ತಿಕೊಂಡಿರುವುದು ಸೇರಿ ಪ್ರಮುಖ ವಿಚಾರಗಳ ಬಗ್ಗೆ ಮತದಾರರಿಂದಲೇ ನೇರವಾಗಿ ಹಿಮ್ಮಾಹಿತಿ ಪಡೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಬಯಸಿದ್ದಾರೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳ ಚುನಾವಣೆಗೂ ಮೊದಲೇ ಈ ಸರ್ವೆ ಆಗಬೇಕು ಎಂಬುದು ಅವರ ಅಪೇಕ್ಷೆ ಆಗಿದ್ದು, ಈ ಸಂಬಂಧ ಪ್ರಧಾನಿಯವರ ಮೊಬೈಲ್ ಆಪ್​ನಲ್ಲಿ ಸಮೀಕ್ಷೆಯೂ ಆರಂಭವಾಗಿದೆ. ವಿಪಕ್ಷಗಳೆಲ್ಲ ಸೇರಿ ಬಿಜೆಪಿ ವಿರುದ್ಧ ಮೈತ್ರಿಕೂಟ ರಚಿಸುವ ಪ್ರಯತ್ನ ಮುಂದುವರಿದಿದೆ. ಇಂತಹ ಸನ್ನಿವೇಶದಲ್ಲಿ ಪಂಚ ರಾಜ್ಯ ಚುನಾವಣೆ ಸಂದರ್ಭದಲ್ಲಿ ವಿಪಕ್ಷಗಳ ಮೈತ್ರಿ ಪರಿಣಾಮ ಬೀರಲಿದೆಯೇ? ಎಂಬ ಪ್ರಶ್ನೆಗೂ ಈ ಸರ್ವೆಯಿಂದ ಉತ್ತರ ನಿರೀಕ್ಷಿಸಲಾಗುತ್ತಿದೆ.

    13 ವಿಷಯ ಸೂಚಿ: ‘ಶೇರ್ ಯುವರ್ ಒಪೀನಿಯನ್’ ಎಂಬ ಶೀರ್ಷಿಕೆಯ ಈ ಸಮೀಕ್ಷೆಯಲ್ಲಿ ಕೇಳುತ್ತಿರುವ ಇನ್ನಿತರೆ ಪ್ರಶ್ನೆಗಳು ಎಂದರೆ, ಮತದಾನದ ವೇಳೆ ಜನರು ಪರಿಗಣಿಸುವ ಅಂಶಗಳು ಯಾವುದು – ದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ ಅಥವಾ ರಾಜ್ಯಮಟ್ಟದ ವಿಚಾರಗಳು ಅಥವಾ ಸ್ಥಳೀಯ ವಿಷಯ ಎಂಬಿತ್ಯಾದಿ ವಿಷಯ ಸೇರಿ ಒಟ್ಟು 13 ವಿಚಾರಗಳು ಇದರಲ್ಲಿ ಉಲ್ಲೇಖವಾಗಿದೆ.

    ಅಭ್ಯರ್ಥಿ ಆಯ್ಕೆಗೆ ಸಹಕಾರಿ

    ಕೆಲವು ಪ್ರಶ್ನೆಗಳ ಹಿಮ್ಮಾಹಿತಿ ಅಭ್ಯರ್ಥಿಯ ಆಯ್ಕೆಯಲ್ಲಿ ಮಹತ್ವ ಪಡೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ನಿಮ್ಮ ರಾಜ್ಯದಲ್ಲಿ ಮೂವರು ಜನಪ್ರಿಯ ಬಿಜೆಪಿ ನಾಯಕರನ್ನು ಹೆಸರಿಸಿ ಎಂಬ ಪ್ರಶ್ನೆ ಇದೆ. ಇದು ಉತ್ತಮ ಮುಖ್ಯಮಂತ್ರಿಯ ಆಯ್ಕೆಗೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿದೆ. ಶಾಸಕರು ಕೈಗೊಂಡಿರುವ ಉಪಕ್ರಮಗಳ ಬಗ್ಗೆ ಮಾಹಿತಿ ಇದೆಯೇ? ಅವರ ಕೆಲಸ ತೃಪ್ತಿದಾಯಕವೇ? ಅವರು ಜನಸಂಪರ್ಕದಲ್ಲಿದ್ದಾರೆಯೇ? ಅವರನ್ನು ಪುನ ರಾಯ್ಕೆ ಮಾಡಲು ಇಚ್ಛಿಸುತ್ತೀರಾ ಎಂಬ ಪ್ರಶ್ನೆಗಳೂ ಇವೆ.

    ‘ಪದವಿಪೂರ್ವ’ದಲ್ಲಿ ನಟಿ ಸೋನಲ್ ಮೊಂತೆರೋ​; ಇಬ್ಬರು ನಾಯಕಿಯರ ಜೊತೆಗೆ ಮತ್ತೊಬ್ಬ ಬೆಡಗಿ…

    ರೋಗಿ ಎಚ್ಚರವಿರುವಾಗಲೇ ನಡೆಯಿತು ಮಿದುಳಿನ ಶಸ್ತ್ರಚಿಕಿತ್ಸೆ; ಸರ್ಜರಿ ನಡೆಯುವಾಗ ಗಾಯತ್ರಿ ಮಂತ್ರ ಪಠನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts