Tuesday, 17th October 2017  

Vijayavani

1. ಅಕ್ರಮ ಕಸಾಯಿಖಾನೆ ಮಾಲೀಕರ ದರ್ಪ – ನೋಟಿಸ್​​​ ನೀಡಲು ಹೋದ ಪೊಲೀಸರ ಮೇಲೆಯೇ ಹಲ್ಲೆ – ಹೊಯ್ಸಳ ಸೇರಿ ನಾಲ್ಕು ವಾಹನಗಳು ಜಖಂ 2. ದಿಗ್ವಿಜಯ ಸಿಂಗ್​​ ಸಂಬಂಧಿ ಟೆಂಡರ್​ ಟೋಪಿ – ಗುತ್ತಿಗೆ​​​​​​ ನೆಪದಲ್ಲಿ ಕೋಟಿ ಕೋಟಿ ಪಂಗನಾಮ – ಭವಾನಿ ಸಿಂಗ್​​​ ವಿರುದ್ಧ ವಂಚನೆ ಆರೋಪ 3. ಉಸ್ತುವಾರಿ ಎದುರಲ್ಲೇ ಕಾಂಗ್ರೆಸ್​ ಗಲಾಟೆ – ಕೈಗೆ ಸಿಕ್ಕ ಕುರ್ಚಿಗಳು ಪೀಸ್ ಪೀಸ್​- ಚಿತ್ರದುರ್ಗದಲ್ಲಿ ಮನೆ ಮನೆ ಪ್ರಚಾರದ ವೇಳೆ ಕಿತ್ತಾಟ 4. ಜನರಕ್ಷಾ ಯಾತ್ರೆಗೆ ಅಂತಿಮ ತೆರೆ – ಸಾವಿರಾರು ಕಾರ್ಯಕರ್ತರೊಂದಿಗೆ ಚಾಣಕ್ಯ ಪಾದಯಾತ್ರೆ -ತಿರುವನಂತಪುರಂನಲ್ಲಿ ಬಿಜೆಪಿ ಬೃಹತ್​ Rally  5. ಸಾರಥಿಗೆ ಸಂದ ಬ್ರಿಟನ್​ ಗೌರವ – ಚಕ್ರವರ್ತಿಗೆ ಬಂದಿದೆ ಆಹ್ವಾನ – ಅ.19 ರಂದು ಲಂಡನ್​ನಲ್ಲಿ ಸನ್ಮಾನ
Breaking News :

ಥೂ, ಇವ್ರೂ ಮಕ್ಕಳಾ! ಮಗಳ ಅನೈತಿಕತೆ – ತಂದೆಯ ಮರ್ಡರ್​

Friday, 21.07.2017, 10:40 AM       No Comments

ಕೈತನಾಳ ಹೊಸುರು (ಗೋಕಾಕ್): ಅನೈತಿಕ ಸಂಬಂಧಗಳಿಗಾಗಿ ಅದೆಷ್ಟೋ ಕೊಲೆಗಳು ನಡೆದು ಹೋಗಿವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಮಗಳ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕಾಗಿ. ಕುಟುಂಬದ ಸದಸ್ಯರೆಲ್ಲರೂ ಸೇರಿ ತಂದೆಯನ್ನೇ ಕೊಲೆ ಮಾಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್​ ತಾಲೂಕಿನ ಕೈತನಾಳ ಹೊಸುರಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೆಂಚಪ್ಪ ನೇಗಿನಾಳ (50) ಹತ್ಯೆಗೀಡಾ ನತದೃಷ್ಟ ತಂದೆ. ಕೆಂಚಪ್ಪ ತನ್ನ ಮಗಳ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಂಚಪ್ಪನ ಮಗಳು, ಮಗ ಮತ್ತು ಪತ್ನಿ ಆತನ ಕೊಲೆಗೆ ಸುಪಾರಿ ನೀಡಿದ್ದರು.

ಹಂತಕರು 70 ಸಾವಿರ ರೂ.ಗೆ ಸುಪಾರಿ ಪಡೆದು ಕೆಂಚಪ್ಪನನ್ನು ಕೊಲೆಗೈದು ಬೆಟ್ಟದ ಗುಹೆಯಲ್ಲಿ ಶವವನ್ನು ಮುಚ್ಚಿ ಹಾಕಿದ್ದರು. ಕೊಲೆ ನಡೆದ 15 ದಿನಗಳಲ್ಲಿ ಈ ಪ್ರಕರಣವನ್ನು ಬೇಧಿಸಿರುವ ಗೋಕಾಕ್​ ಗ್ರಾಮೀಣ ಠಾಣೆ ಪೊಲೀಸರು ಕೆಂಚಪ್ಪನ ಮಗಳು, ಮಗ ಮತ್ತು ಪತ್ನಿ ಸೇರಿ 5 ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

(ದಿಗ್ವಿಜಯ ನ್ಯೂಸ್​)

 

 

 

 

Leave a Reply

Your email address will not be published. Required fields are marked *

Back To Top