Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :

ಹಾಲು ಕುಡಿಯುವ ಹಾಲುಗಲ್ಲದ ಮಗುವಿಗೇ ಕ್ರಿಮಿನಾಶಕ ಸಿಂಪಡಿಸಿ ಕೊಂದ!

Tuesday, 05.12.2017, 3:31 PM       No Comments

ಚಿಕ್ಕೋಡಿ: ಬಯಸದೇ ಬಂದ ಪಿಟ್ಸ್ ಗೆ ತುತ್ತಾಗಿದ್ದ ತಾಯಿಯೊಬ್ಬಳು ಕರುಳಿನ ಕುಡಿಯ ಹಾಲುಗಲ್ಲದ ನಗುವಿನಲ್ಲಿ ತನ್ನೆಲ್ಲ ನೋವನ್ನು ಮರೆತಿದ್ದಳು. ಆದರೆ, ಹಣದ ಆಸೆಗೆ ಬಿದ್ದ ಪತಿ ವಿಷ ನೀಡಿ ಏನೂ ಅರಿಯದ ಕಂದಮ್ಮನನ್ನು ಹೊಸಕಿ ಹಾಕಿದ್ದಾನೆ.

ವರದಕ್ಷಿಣೆ ಆಸೆಗೆ ತನ್ನ ಮಗುವಿಗೇ ಕ್ರಿಮಿನಾಶಕ ಸಿಂಪಡಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ನಡೆದಿದೆ.

ನಾಮ್​ದೇವ್ ಎಂಬಾತ ತನ್ನ ತಾಯಿಯ ಜತೆ ಸೇರಿಕೊಂಡು ಒಂದು ವರ್ಷದ ಮಗು ಜೋಯೆಲ್ ನಾಮದೇವ್ ನಡುವಿನಕೇರಿಗೆ ಶುಕ್ರವಾರ ಕೀಟನಾಶಕ ಸಿಂಪಡಿಸಿದ್ದಾನೆ.

ಮಗುವನ್ನು ತಕ್ಷಣ ನಿಪ್ಪಾಣಿ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಈ ಬಗ್ಗೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪತ್ನಿಗೆ ಪಿಟ್ಸ್ ಇದ್ದರೂ ಕೆಲಸಕ್ಕೆ ಹೋಗುವಂತೆ ನಾಮ್​ದೇವ್​ ಪೀಡಿಸುತ್ತಿದ್ದ. ಪತಿಗೆ ಹೆದರಿ ಪತ್ನಿ ಜೋಸ್ಪಿನ್​ ತಾಯಿ ಮನೆಗೆ ತೆರಳಿದ್ದಳು. ಇತ್ತೀಚೆಗಷ್ಟೇ ಮರಳಿ ಪತಿ ಮನೆಗೆ ಬಂದಿದ್ದಳು. (ದಿಗ್ವಿಜಯ ನ್ಯೂಸ್) 

Leave a Reply

Your email address will not be published. Required fields are marked *

Back To Top