Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಅಬ್ದುಲ್ಲಾಜಿ ನೀವ್​ ಹೇಳಿದ್ದು ಸರಿ, ಪಿಒಕೆ ಪಾಕಿಸ್ತಾನಕ್ಕೆ ಸೇರಿದ್ದು: ರಿಷಿ ಕಪೂರ್​

Sunday, 12.11.2017, 3:16 PM       No Comments

ಮುಂಬೈ: ಪಾಕ್ ಆಕ್ರಮಿತ ಕಾಶ್ಮಿರ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಶನಿವಾರದಂದು ನ್ಯಾಷನಲ್​ ಕಾನ್ಫರೆನ್ಸ್​ ಅಧ್ಯಕ್ಷ ಫಾರೂಕ್​ ಅಬ್ದುಲ್ಲಾ ನೀಡಿದ್ದ ವಿವಾದಿತ ಹೇಳಿಕೆಗೆ ಬಾಲಿವುಡ್​ನ ಖ್ಯಾತ ನಟ ರಿಷಿ ಕಪೂರ್​ ಸಹಮತ ವ್ಯಕ್ತಪಡಿಸಿದ್ದಾರೆ.

ಪಾಕ್​ ಆಕ್ರಮಿತ ಕಾಶ್ಮೀರ ಎಂದೆಂದಿಗೂ ಪಾಕಿಸ್ತಾನದ ಅವಿಭಾಜ್ಯ ಅಂಗ, ವಿಭಜನೆಯ ಸಂದರ್ಭದಲ್ಲಿ ಮಹಾರಾಜರೊಂದಿಗೆ ಆದ ಒಪ್ಪಂದವನ್ನು ಭಾರತ ಮರೆತಂತಿದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಫಾರೂಕ್​ ಅಬ್ದುಲ್ಲಾ ನೀಡಿದ್ದರು.

ಇದರ ಕುರಿತು ಟ್ವಿಟ್ಟರ್​ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ನಟ ರಿಷಿ ಕಪೂರ್​, ” ಸಲಾಮ್​ ಫಾರೂಕ್​ ಅಬ್ದುಲ್ಲಾಜಿ, ನಿಮ್ಮ ಹೇಳಿಕೆಗೆ ನನ್ನ ಸಂಪೂರ್ಣ ಸಹಮತವಿದೆ. ಜಮ್ಮು ಮತ್ತು ಕಾಶ್ಮೀರ ನಮ್ಮದು, ಪಾಕ್​ ಆಕ್ರಮಿತ ಕಾಶ್ಮಿರ ಅವರದು. ಈ ಸತ್ಯವನ್ನು ಒಪ್ಪಿಕೊಳ್ಳುವುದೊಂದೇ ಈ ಸಮಸ್ಯೆಗಿರುವ ಪರಿಹಾರ. ನನಗೀಗ 65 ವಯಸ್ಸು ನಾನು ಸಾಯುವ ಮುನ್ನ ಒಮ್ಮೆ ಪಾಕಿಸ್ತಾನ ನೋಡಬಯಸುತ್ತೇನೆ. ನನ್ನ ಮಕ್ಕಳು ಸಹ ತಮ್ಮ ಮೂಲವನ್ನು ನೋಡಲಿ ಎಂದು ಬಯಸುತ್ತೇನೆ. ಈ ಜಗಳ ನಿಲ್ಲಿಸಿಬಿಡಿ. ಜೈ ಮಾತಾ ದಿ,” ಎಂದಿದ್ದಾರೆ.

ಶನಿವಾರ ಕಾಶ್ಮೀರ ಸಮಸ್ಯೆಯ ಬಗ್ಗೆ ಮಾತನಾಡಿದ್ದ ಅಬ್ದುಲ್ಲಾ, ಪಿಒಕೆ ಯಾವತ್ತಿದ್ದರೂ ಪಾಕಿಸ್ತಾನದ ಭಾಗ ಎಂದು ನಾನು ಭಾರತೀಯರಿಗೆ ಮತ್ತು ವಿಶ್ವದ ಜನರಿಗೆ ತಿಳಿಸಲು ಬಯಸುತ್ತೇನೆ. ಪಿಒಕೆ ಪಾಕಿಸ್ತಾನದ್ದು ಹಾಗೂ ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿದ್ದು, ಉಭಯ ದೇಶಗಳ ನಡುವೆ ಎಷ್ಟೇ ಯುದ್ಧ ನಡೆದರೂ ಇದನ್ನು ಬದಲಿಸಲು ಸಾಧ್ಯವಿಲ್ಲ ಎಂದು ಅವರು​ ಅಭಿಪ್ರಾಯ ಪಟ್ಟಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top