Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಅನ್ನದಾತರೇ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ

Sunday, 16.09.2018, 9:22 PM       No Comments

ಶಿರಸಿ: ಕಾಳು ಮೆಣಸಿಗೆ ಬಂದ ಕೊಳೆ ರೋಗ ಶಾಶ್ವತವಲ್ಲ. ರೈತರು ಆತ್ಮ ಸ್ಥೈರ್ಯ ಕಳೆದುಕೊಳ್ಳದೇ ಈ ಕೃಷಿಯನ್ನು ಮುಂದುವರಿಸಿದರೆ ಯಶಸ್ಸು ನಿಶ್ಚಿತ ಎಂದು ಟಿಎಂಎಸ್ ಅಧ್ಯಕ್ಷ ಜಿ. ಎಂ. ಹೆಗಡೆ ಹುಳಗೋಳ ಹೇಳಿದರು.
ಸಂಸ್ಥೆಯ ವ್ಯಾಪಾರಿ ಪ್ರಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿದರು. ಅತಿಯಾದ ಮಳೆಗೆ ಕಾಳು ಮೆಣಸಿಗೆ ರೋಗ ಬಂದಿದೆ. ಕಾಳು ಮೆಣಸು ಕೃಷಿ ಪುನಶ್ಚೇತನ ನಮ್ಮ ರೈತರಿಂದ ಸಾಧ್ಯವಿದೆ. ತಾಲೂಕಿನಲ್ಲಿ ಬೆಳೆಯುವ ಕಾಳು ಮೆಣಸಿಗೆ ಒಳ್ಳೆಯ ಬೆಲೆಯಿದೆ. ಟಿಎಂಎಸ್ ಸಂಸ್ಥೆ ಕಾಳು ಮೆಣಸು ಉತ್ಪನ್ನಗಳನ್ನು ಸಂಸ್ಥೆಯ ಬ್ರಾಂಡ್​ನಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ರೈತರು ಕಾಳು ಮೆಣಸನ್ನು ಉಪ ಬೆಳೆಯಾಗಿ ಬೆಳೆಸಿದರೆ ಲಾಭದಾಯಕ. ಅಡಕೆ ತೋಟದಲ್ಲಿ ಈ ಕೃಷಿ ನಡೆಸಿದರೆ ಕೃಷಿಕರ ವಾರ್ಷಿಕ ಆದಾಯ ದ್ವಿಗುಣ ಆಗಲಿದೆ ಎಂದರು.
ಟಿಎಂಎಸ್ ಆಡಳಿತ ಮಂಡಳಿ ಸಂಖ್ಯೆ 15ಕ್ಕೆ ಏರಿಸುವಿಕೆ ನಿಯಮಾವಳಿ ಪ್ರಕಾರ ಮಾಡಲಾಗುವುದು. ಸಂಘದ ಸದಸ್ಯರು ಸ್ವತಂತ್ರವಾಗಿ ವ್ಯವಹರಿಸಿ ಆರ್ಥಿಕ ಪ್ರಗತಿ ಕಾಣಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದೆ ಎಂದರು. ಸಂಘದ ಉಪಾಧ್ಯಕ್ಷ ಎಸ್.ಎಸ್. ಹೆಗಡೆ ಅಜ್ಜೀಬಳ, ಜಿ.ಟಿ. ಹೆಗಡೆ ತಟ್ಟೀಸರ, ಜಿ.ಎಂ.ಹೆಗಡೆ ಮುಳಖಂಡ, ವಿ.ಆರ್. ಹೆಗಡೆ ಮಣ್ಮನೆ, ಆರ್.ಎಂ. ಹೆಗಡೆ ಗಡಿಕೈ, ಎಂ.ಪಿ. ಹೆಗಡೆ ಹೊನ್ನೆಕಟ್ಟ, ಎನ್.ಡಿ. ಹೆಗಡೆ ಹಾಲೇರಿಕೊಪ್ಪ, ಆರ್.ಎಲ್. ಹೆಗಡೆ, ರಾಜಶೇಖರ ಗೌಡ, ಇಂದಿರಾ ಹುಳಗೋಳ, ಶ್ರೀಮತಿ ಹೆಗಡೆ ಕೋಟಿಕೊಪ್ಪ ಇತರರು ಇದ್ದರು. ಕಾರ್ಯನಿರ್ವಾಹಕ ಎಂ.ಎ. ಹೆಗಡೆ ಕಾನಮುಷ್ಕಿ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶ್ರೀಲತಾ ರಾಜಾರಾಮ ಭಟ್ ಅವರಿಂದ ಸಂಗೀತ ಕಾರ್ಯಕ್ರಮ, ಆಯ್ದ ಕಲಾವಿದರಿಂದ ‘ಚಂದ್ರಹಾಸ ಚರಿತ್ರೆ’ ಯಕ್ಷಗಾನ ಪ್ರದರ್ಶನ ನಡೆಯಿತು.

Leave a Reply

Your email address will not be published. Required fields are marked *

Back To Top