Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಸಚಿನ್ ಅವರನ್ನೇ ಚಕಿತಗೊಳಿಸಿದ, ಸುನಾಮಿ ಸುಳಿವು ನೀಡಿದ್ದ ಸಂಶೋಧಕ ಡಾ.ಅರುಣಾಚಲಂ ನಿಧನ

Friday, 08.12.2017, 1:55 PM       No Comments

<< ಟಿವಿಯಲ್ಲಿ ಕ್ರಿಕೆಟ್ ನೋಡುತ್ತಲ್ಲೇ ಸಚಿನ್ ತೆಂಡೂಲ್ಕರ್​ ಬೆನ್ನುನೋವಿಗೆ ನೀಡಿದರು ವೈಜ್ಞಾನಿಕ ಪುರಾವೆ >>

ಭದ್ರಾವತಿ: ಖ್ಯಾತ ಸಂಶೋಧಕ ಡಾ.ಅರುಣಾಚಲಂ ಕುಮಾರ್ ಅವರು ಶುಕ್ರವಾರ ಭದ್ರಾವತಿಯ ನಂಜಾಪುರ ಗ್ರಾಮದಲ್ಲಿ ನಿಧನರಾಗಿದ್ದಾರೆ.
ಮೂಲತಃ ಚೆನ್ನೈನವರಾಗಿರುವ ಅವರು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ತಮ್ಮ ಆರೈಕೆ ನೋಡಿಕೊಳ್ಳುತ್ತಿದ್ದ ರವಿ ಮತ್ತು ಲಕ್ಷ್ಮೀ ದಂಪತಿ ಮನೆಯಲ್ಲೇ ಉಳಿದುಕೊಂಡಿದ್ದರು.

ಡಾ.ಅರುಣಾಚಲಂ ಅವರ ಮೃತದೇಹವನ್ನು ಮಂಗಳೂರಿಗೆ ಕೊಂಡೊಯ್ಯಲಾಗಿದೆ. ಅವರ ಕೊನೆಯ ಆಸೆಯಂತೆ ದೇಹದಾನ ಮಾಡಲಾಗುತ್ತಿದೆ. ತಮ್ಮ ನೆಚ್ಚಿನ ಗುರುವಿನ ಅಂತಿಮ ದರ್ಶನಕ್ಕೆ, ದೇಶ ವಿದೇಶಗಳಿಂದ ವಿದ್ಯಾರ್ಥಿಗಳ ದೊಡ್ಡ ದಂಡು ಮಂಗಳೂರಿನಲ್ಲಿ ಕಾದು ಕೂತಿದೆ.

ಕ್ರಿಕೆಟ್ ದೇವರಿಗೂ ಅತೀವ ಗೌರವ

ಸಚಿನ್ ತೆಂಡೂಲ್ಕರ್​ಗೆ ಬೆನ್ನು ನೋವು ಬಾಧಿಸಲಿದೆ ಎಂಬುದನ್ನು ಅರುಣಾಚಲಂ ಅವರು ಸಚಿನ್ ಆಸ್ಪತ್ರೆಗೆ ದಾಖಲಾಗುವ ಮೂರು ತಿಂಗಳ ಮುಂಚೆಯೇ ತಿಳಿಸಿದ್ದರು. ಈ ಬಗ್ಗೆ ಸಂಶೋಧನಾ ಲೇಖನವನ್ನೇ ಬರೆದಿದ್ದರು. ವಿಶೇಷ ಅಂದರೆ, ಡಾ. ಅರುಣಾಚಲಂ ಅವರು, ಸಚಿನ್​ರನ್ನು ನೇರವಾಗಿ ಭೇಟಿಯೂ ಆಗಿರಲಿಲ್ಲ. ಟಿವಿಯಲ್ಲಿ ಕ್ರಿಕೆಟ್ ನೋಡುತ್ತಲೇ ಸಚಿನ್ ಕುರಿತು ಸಂಶೋಧನಾ ಲೇಖನ ಬರೆದಿದ್ದರು ಅರುಣಾಚಲಂ.

ವಿದ್ಯಾರ್ಥಿಗಳ ಜತೆ ಪ್ರಯೋಗಶಾಲೆಯಲ್ಲಿ ಡಾ .ಅರುಣಾಚಲಂ ಕುಮಾರ್.

ಸುನಾಮಿ ಸುಳಿವು ನಿಜವಾಯ್ತು
ಇನ್ನು ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ ಸಂಭವಿಸಲಿದೆ. ಇದರಿಂದ ಸುನಾಮಿ ಅಪ್ಪಳಿಸಲಿದೆ. ದಕ್ಷಿಣ ಭಾರತದಲ್ಲೂ ಅಲ್ಲೋಲ ಕಲ್ಲೋಲವಾಗಲಿದೆ ಎಂದು ಸಂಶೋಧನಾ ಲೇಖನ ಪ್ರಕಟಿಸಿದ ಎರಡೇ ವಾರಕ್ಕೆ ಅದು ನಿಜವಾಯಿತು. 2004 ಡಿಸೆಂಬರ್ 26ರಂದು ಬೃಹತ್ ಅಲೆಗಳು ಚೆನ್ನೈ ಕಡಲಿಗೆ ಅಪ್ಪಳಿಸಿ ಅಪಾರ ಸಾವು ನೋವು, ಆಸ್ತಿಪಾಸ್ತಿಗೆ ಹಾನಿಯಾಗಿತ್ತು.

ಎಂಬಿಬಿಎಸ್ ಅಂಗರಚನಾಶಾಸ್ತ್ರ ಪದವಿ ಪಡೆದಿದ್ದ ಅರುಣಾಚಲಂ, ಮಂಗಳೂರಿನ ಹಲವು ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿದ್ದರು. ಕೆಎಂಸಿ ಕಾಲೇಜಿನ ಅನಾಟಮಿ ವಿಭಾಗದ ಪ್ರೊಫೆಸರ್​, ನಿಟ್ಟೆ ವಿವಿಯ ಡೀನ್, ಕನಚೂರು ಅಕಾಡೆಮಿ ಜನರಲ್ ಎಜುಕೇಷನ್ ಸಂಸ್ಥೆಯ ವೈಸ್ ಚೇರ್ಮನ್ ಕೂಡ ಆಗಿದ್ದರು. ದೇಶ, ವಿದೇಶದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಇವರ ವಿದ್ಯಾರ್ಥಿಗಳು ವೈದ್ಯರಾಗಿದ್ದಾರೆ.

 

Leave a Reply

Your email address will not be published. Required fields are marked *

Back To Top