Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಪುತ್ರಿ ಮದ್ವೆಗೆ ಬರೋಬ್ಬರಿ 308 ಬಸ್​ ವ್ಯವಸ್ಥೆ ಮಾಡಿಸಿದ ಶಿವರಾಮೇಗೌಡ್ರು!

Thursday, 07.12.2017, 10:57 AM       No Comments

ಮಂಡ್ಯ:  ತಮ್ಮ ಪುತ್ರಿಯ ಮದುವೆಗೆ ರೆಡ್ಡಿ ಮಗಳ ಮದುವೆ ಆಮಂತ್ರಣಕ್ಕಿಂತ ಅದ್ಧೂರಿಯಾದ ವಿಡಿಯೋ ಆಮಂತ್ರಣ ಮಾಡಿಸಿದ್ದ ಮಾಜಿ ಶಾಸಕ ಎಲ್​.ಆರ್​. ಶಿವರಾಮೇಗೌಡ ಈಗ ವಿವಾಹಕ್ಕೆ ಆಗಮಿಸುವ ಜನರಿಗಾಗಿ ಬರೋಬ್ಬರಿ 308 ಬಸ್​ಗಳ ವ್ಯವಸ್ಥೆ ಮಾಡಿಸಿದ್ದಾರೆ.

ಇಂದು (ಡಿ.7) ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಮದುವೆಗೆ ಆಗಮಿಸಲು ನಾಗಮಂಗಲ ಕ್ಷೇತ್ರದ ಪ್ರತಿ ಬೂತ್​ಗೂ ಬಸ್​ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದಕ್ಕಾಗಿ 308 ಕೆಎಸ್​ಆರ್​ಟಿಸಿ ಬಸ್​ಗಳನ್ನು ಬಾಡಿಗೆ ಪಡೆದಿದ್ದಾರೆ ಮಾಜಿ ಶಾಸಕರು.

ಪತ್ನಿ ಸುಧಾ ಅವರ ತವರೂರಾದ ತುರುವೇಕೆರೆಯಿಂದಲೂ ಬಸ್​ ವ್ಯವಸ್ಥೆ ಮಾಡಿದ್ದು, ಮಂಡ್ಯ, ನಾಗಮಂಗಲ, ಮಳವಳ್ಳಿ, ಪಾಂಡವಪುರ, ಕೆ.ಆರ್.ಪೇಟೆ, ಮದ್ದೂರು, ಚನ್ನರಾಯಪಟ್ಟಣ ಹೀಗೆ ಹಲವು ಊರುಗಳಿಂದ ಮದುವೆಗೆ ಬರಲು ಜನರಿಗೆ ಅನುಕೂಲ ಕಲ್ಪಿಸಲಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top