Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ವಿಚ್ಛೇದಿತ ಪತ್ನಿಗೆ ಮದುವೆ ಮಾಡಿಸಿದ ಮಾಜಿ ಪತಿ!

Saturday, 08.07.2017, 7:58 PM       No Comments

ಚಿಕ್ಕಬಳ್ಳಾಪುರ: ವಿಚ್ಛೇದಿತ ಪತ್ನಿಯ ಪ್ರೇಮ ಪುರಾಣ ಅರಿತ ಮಾಜಿ ಪತಿ, ತಾನೇ ಮುಂದೆ ನಿಂತು ಅವರಿಬ್ಬರಿಗೆ ಬಲವಂತದ ಮದುವೆ ಮಾಡಿಸಿದ ಘಟನೆ ಜಿಲ್ಲೆಯ ಚಿಂತಾಮಣಿ‌ ನಗರದಲ್ಲಿ ನಡೆದಿದೆ.

ಈಶ್ವರ್ ಗೌಡ‌, ವಿಚ್ಛೇದಿತ ಪತ್ನಿ ರಚನಾ‌ ಹಾಗೂ ಮಂಜುನಾಥ್​ಗೆ ಮದುವೆ ಮಾಡಿಸಿದ ಮಾಜಿ ಗಂಡ. ಈಶ್ವರ್ ಗೌಡ‌ ಹಾಗೂ ರಚನಾ ಕೆಲವು ವರ್ಷಗಳಿಂದೆ ಮದುವೆ ಆಗಿದ್ದರು. ಆದರೆ, ಇವರು ವಿಚ್ಛೇದನ ಪಡೆದುಕೊಂಡಿದ್ದರು.

ರಚನಾ-ಈಶ್ವರ್ ಗೌಡ ಒಡೆತನದ ರಚನಾ ಕ್ರಿಯೇಟಿವ್ ಖಾಸಗಿ ಶಾಲೆಯಲ್ಲಿ ಮಂಜುನಾಥ್​ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಈಶ್ವರ್ ಗೌಡ ಮಂಜುನಾಥ್​ನನ್ನ ಅಪಹರಿಸಿ ಮನೆಯಲ್ಲಿ ಕೂಡಿಹಾಕಿದ್ದರು. ಮಂಜುನಾಥ್ ಮೇಲೆ ಹಲ್ಲೆ ನಡೆಸಿ ಬಲವಂತವಾಗಿ ರಚನಾ ಜೊತೆ ಎರಡು ದಿನಗಳ ಹಿಂದೆ ಮದುವೆ ಮಾಡಿಸಿದ್ದಾರೆ.

ತನಗೆ ಬೆದರಿಸಿ ಬಲವಂತದ ಮದುವೆ ಮಾಡಿಸಿದ್ದಾರೆ ಎಂದು ಮಂಜುನಾಥ್​ ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top