Wednesday, 15th August 2018  

Vijayavani

ಹೊರಗೆ ದೋಸ್ತಿ, ಒಳಗೆ ಕುಸ್ತಿ - ದೂರವಾಗದ ಸಿದ್ದು, ಕುಮಾರ ಮುನಿಸು - ರಾಯಣ್ಣನ ಪ್ರತಿಮೆ ಬಳಿ ಬಯಲಾಯ್ತು ಮೈತ್ರಿ ಹುಳುಕು        ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟ - ಕೆಆರ್‌ಎಸ್‌ಗೆ ಭಾರಿ ಪ್ರಮಾಣದ ನೀರು- ಶ್ರೀರಂಗಪಟ್ಟಣ ಬಳಿ ಪ್ರವಾಹ ಪರಿಸ್ಥಿತಿ        ಮನೆ, ಮಠ , ಶಾಲೆ ಎಲ್ಲವೂ ಜಲಾವೃತ - ಹೊನ್ನಾಳಿಯಲ್ಲಿ ಸ್ಕೂಲ್‌ಗೆ ನುಗ್ಗಿದ ತುಂಗಭದ್ರ - ಅಪಾಯ ಲೆಕ್ಕಿಸದೆ ವಿದ್ಯಾರ್ಥಿಗಳ ಆಟ        ಕರಾವಳಿಯಲ್ಲಿ ಬಿಡುವುಕೊಡದ ವರುಣ - ಬೆಳ್ತಂಗಡಿಯಲ್ಲಿ ನಿರ್ಮಾಣ ಹಂತದ ಮನೆ ಕುಸಿತ - ಅತ್ತ ಹಾಸನದಲ್ಲಿ ರಸ್ತೆ ಕುಸಿತ        ಮಲೆನಾಡಿನಲ್ಲಿ ಮುಂದುವರಿದ ಮಳೆ ಆರ್ಭಟ - ನಾಲ್ಕು ವರ್ಷಗಳ ಬಳಿಕ ಲಿಂಗನಮಕ್ಕಿ ಭರ್ತಿ - ಜೋಗ ಜಲಾಪಾತದಲ್ಲಿ ಜಲ ವೈಭವ        ಕೇರಳದಲ್ಲಿ ತಗ್ಗದ ಪ್ರವಾಹ - ನೀರಿನಲ್ಲಿ ಸಿಲುಕೊಂಡ ರಾಜ್ಯ ಸಾರಿಗೆ ಬಸ್‌ - ಅಯ್ಯಪ್ಪನಿಗೂ ತಟ್ಟಿದ ನೆರೆಹಾವಳಿ       
Breaking News

ನಮಗೆ ವಿರಾಟ್​ ಕೊಹ್ಲಿ ಮಾತ್ರ ವಿಶೇಷ ಎಂದೆನಿಸಿಲ್ಲ: ಅಫ್ಘಾನ್​ ನಾಯಕ

Wednesday, 13.06.2018, 8:33 AM       No Comments

ನವದೆಹಲಿ: ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನೂ ನಮಗೆ ವಿರಾಟ್​ ಕೊಹ್ಲಿ ಇದ್ದಂತೆ ಎಂದು ಅಫ್ಘಾನಿಸ್ತಾನ ತಂಡದ ನಾಯಕ ಅಸ್ಘರ್​ ಸ್ಟಾನಿಕ್​ಝೈ ಟೀಂ ಇಂಡಿಯಾದ ಸಾಮರ್ಥ್ಯದ ಬಗ್ಗೆ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ.

ಭಾರತ ವಿರುದ್ಧ ಚೊಚ್ಚಲ ಟೆಸ್ಟ್​ ಪಂದ್ಯವನ್ನಾಡಲು ಅಫ್ಘಾನಿಸ್ತಾನ ಸಜ್ಜಾಗಿದ್ದು, ಈ ಸಂಭ್ರಮವನ್ನು ಅಫ್ಘಾನ್​ ನಾಯಕ ಅಸ್ಘರ್​ ಸ್ಟಾನಿಕ್​ಝೈ ಅವರು ಮಾಧ್ಯಮ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಒಂದು ತಂಡದ ಒಬ್ಬ ಆಟಗಾರನ ಮೇಲೆ ಅವಲಂಬಿತವಾಗಲ್ಲ. ವಿರಾಟ್​ ಕೊಹ್ಲಿ ಅವರು ಅದ್ಭುತ ಆಟಗಾರ. ಟೆಸ್ಟ್​ನಲ್ಲಿ ಉತ್ತಮ ಅನುಭವವನ್ನು ಹೊಂದಿದ್ದಾರೆ. ಟೀಂ ಇಂಡಿಯಾವನ್ನು ನೋಡಿದರೆ ಎಲ್ಲರೂ ವಿರಾಟರೇ, ನಮಗೆ ಕೊಹ್ಲಿ ಮಾತ್ರ ವಿಶೇಷ ಅನಿಸಿಲ್ಲ. ಟೀಂ ಇಂಡಿಯಾದಲ್ಲಿ ಪ್ರತಿಯೊಬ್ಬರು ಉತ್ತಮ ಆಟಗಾರರಾಗಿದ್ದು, ಎಲ್ಲರೂ ಉತ್ತಮ ಅನುಭವವನ್ನು ಹೊಂದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಭಾರತದೊಂದಿಗೆ ಚೊಚ್ಚಲ ಟೆಸ್ಟ್​ ಪಂದ್ಯವನ್ನಾಡುವುದು ನಮ್ಮ ಆಟಗಾರರ ಕನಸ್ಸಾಗಿತ್ತು. ಅದು ಇಂದು ನನಸಾಗಿದೆ. ಅಲ್ಲಾನ ದಯೆಯಿಂದ ನಮಗೆ ಒಳ್ಳೆಯ ಅವಕಾಶ ಸಿಕ್ಕಿದೆ. ನಮ್ಮ ಕ್ರಿಕೆಟ್​ ಇತಿಹಾಸದಲ್ಲಿ ಈ ಒಂದು ದಿನ ಹೆಚ್ಚು ಆನಂದದಾಯಕ ದಿನವಾಗಿ ಉಳಿಯಲಿದೆ ಎಂದು ತಿಳಿಸಿದರು.

ಭಾರತದ ಬಹುತೇಕ ಪಿಚ್​ಗಳು ಸ್ವಾಭಾವಿಕವಾಗಿ ಸ್ಪಿನ್ ಸ್ನೇಹಿಯಾಗಿರುವ ಕಾರಣ ನಾವು ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಸೇರಿದಂತೆ ನಾಲ್ವರು ಸ್ಪಿನ್ನರ್​ಗಳೊಂದಿಗೆ ಅಜಿಂಕ್ಯ ರಹಾನೆ ಸಾರಥ್ಯದ ಭಾರತ ತಂಡಕ್ಕೆ ಸವಾಲು ನೀಡಲು ಸಜ್ಜಾಗಿದ್ದೇವೆ. ನಾವೆಲ್ಲರೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top