Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಇಂಗ್ಲೆಂಡ್ ವಿಶ್ವದಾಖಲೆ ಮೊತ್ತ: ಕಾಂಗರೂ ಪಡೆಗೆ ನೀರು ಕುಡಿಸಿದ ಆಂಗ್ಲರು

Wednesday, 20.06.2018, 3:07 AM       No Comments

ನಾಟಿಂಗ್​ಹ್ಯಾಂ: ಏಕದಿನ ಕ್ರಿಕೆಟ್​ನಲ್ಲಿ 500 ರನ್ ಮೊತ್ತದ ಸನಿಹ ತಲುಪುವ ಮೂಲಕ ಇಂಗ್ಲೆಂಡ್ ಹೊಸ ವಿಶ್ವದಾಖಲೆ ಬರೆದಿದೆ. ಜಾನಿ ಬೇರ್​ಸ್ಟೋ (139 ರನ್, 92 ಎಸೆತ, 15 ಬೌಂಡರಿ, 5 ಸಿಕ್ಸರ್) ಹಾಗೂ ಅಲೆಕ್ಸ್ ಹ್ಯಾಲ್ಸ್ (147 ರನ್, 92 ಎಸೆತ, 16 ಬೌಂಡರಿ, 5ಸಿಕ್ಸರ್) ಸ್ಪೋಟಕ ಶತಕದಾಟದ ನೆರವಿನಿಂದ ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್ ಇತಿಹಾಸದ ಅತ್ಯಧಿಕ ಮೊತ್ತ ಪೇರಿಸಿದೆ. ಮಂಗಳವಾರ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 6 ವಿಕೆಟ್​ಗೆ 481 ರನ್ ಪೇರಿಸಿದ ಇಂಗ್ಲೆಂಡ್, ತನ್ನದೇ ಹೆಸರಿನಲ್ಲಿದ್ದ ಹಿಂದಿನ ವಿಶ್ವದಾಖಲೆ ಮೊತ್ತಕ್ಕಿಂತ 37 ರನ್ ಅಧಿಕ ಗಳಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್​ಗೆ ಆರಂಭಿಕರಾದ ಜೇಸನ್ ರಾಯ್ (82) ಮತ್ತು ಬೇರ್​ಸ್ಟೋ 159 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಬಳಿಕ ಅಲೆಕ್ಸ್ ಹ್ಯಾಲ್ ಕೂಡ ಆರ್ಭಟಿಸಿದರೆ, ಕೊನೆಯಲ್ಲಿ ನಾಯಕ ಇವೊಯಿನ್ ಮಾರ್ಗನ್ (67 ರನ್, 30 ಎಸೆತ, 3 ಬೌಂಡರಿ, 6 ಸಿಕ್ಸರ್) ಕೇವಲ 21 ಎಸೆತಗಳಲ್ಲಿ ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದ ಅತಿವೇಗದ ಅರ್ಧಶತಕ ಸಿಡಿಸಿದರು.

ಇಂಗ್ಲೆಂಡ್ ತಂಡವೇ 2016ರಲ್ಲಿ ಇದೇ ನಾಟಿಂಗ್​ಹ್ಯಾಂ ಮೈದಾನದಲ್ಲಿ ಪಾಕಿಸ್ತಾನ ತಂಡದ ವಿರುದ್ಧ 3 ವಿಕೆಟ್​ಗೆ 444 ರನ್ ಪೇರಿಸಿದ್ದು ಏಕದಿನ ಕ್ರಿಕೆಟ್ ಇತಿಹಾಸದ ಹಿಂದಿನ ಅತ್ಯಧಿಕ ಮೊತ್ತವಾಗಿತ್ತು.

46ನೇ ಓವರ್​ನ 3 ಎಸೆತದಲ್ಲಿ ಹ್ಯಾಲ್ಸ್ ಸಿಕ್ಸರ್ ಸಿಡಿಸುವುದರೊಂದಿಗೆ ಇಂಗ್ಲೆಂಡ್ ತನ್ನ ಹಿಂದಿನ ವಿಶ್ವದಾಖಲೆ ಮೀರಿಸಿತು. ಅದೇ ಓವರ್​ನ ಅಂತ್ಯಕ್ಕೆ ಏಕದಿನ ಕ್ರಿಕೆಟ್​ನಲ್ಲಿ 450ರ ಗಡಿ ದಾಟಿದ ಮೊದಲ ತಂಡವೆಂಬ ಇತಿಹಾಸ ಬರೆಯಿತು. ಕೊನೇ 4 ಓವರ್​ಗಳಲ್ಲಿ ಮತ್ತೆ 31 ರನ್ ದೋಚಿದ ಆಂಗ್ಲರು, 500 ರನ್ ದಾಖಲೆಗಿಂತ ಕೇವಲ 19 ರನ್ ದೂರ ಉಳಿದರು.

ಇಂಗ್ಲೆಂಡ್ ಇನಿಂಗ್ಸ್​ನಲ್ಲಿ ಒಟ್ಟಾರೆ 41 ಬೌಂಡರಿ ಮತ್ತು 21 ಸಿಕ್ಸರ್ ಸಿಡಿದವು. ಆಸೀಸ್ ವೇಗಿ ಆಂಡ್ರೊ್ಯೕ ಟೈ 9 ಓವರ್​ಗಳಲ್ಲೇ 100 ರನ್ ಬಿಟ್ಟುಕೊಟ್ಟರು. ಸ್ಟೋಯಿನಿಸ್ 8 ಓವರ್​ಗಳಲ್ಲೇ 81 ರನ್ ಬಿಟ್ಟುಕೊಟ್ಟರು.

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ಆರಂಭಿಕ ಆಟಗಾರ ಶಾರ್ಟ್ 15 ರನ್​ಗೆ ನಿರ್ಗಮಿಸಿದ್ರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಕೂಡ ಕಮಾಲ್​ ಮಾಡಲಿಲ್ಲ. ಆಂಗ್ಲರ ಸವಾಲುಗಳನ್ನು ಎದುರಿಸಲಾಗದೇ ಪರದಾಡಿದರು.

ಟ್ರಾವಿಸ್ ಹೆಡ್ ಹಾಗೂ ಸ್ಟೋನಿಸ್ ಬಿಟ್ರೆ ಆಸೀಸ್​ನ ಯಾವೊಬ್ಬ ಬ್ಯಾಟ್ಸ್​​ಮನ್​ ಕೂಡ ತಂಡದ ಕೈ ಹಿಡಿಯಲಿಲ್ಲ. ಆಂಗ್ಲರ ಬಿಗುವಿನ ದಾಳಿಗೆ ನಲುಗಿದ ಆಸೀಸ್ ಬ್ಯಾಟ್ಸ್​ಮನ್​ಗಳು ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿದ್ರು. ಅಂತಿಮವಾಗಿ ಆಸ್ಟ್ರೇಲಿಯಾ 37 ಓವರ್​ಗಳಲ್ಲಿ ಎಲ್ಲಾ ವಿಕೆಟ್​ ಕಳೆದುಕೊಂಡು 239 ರನ್​ ಗಳಿಸಿ, 242 ರನ್​​​ ಗಳಿಂದ ಸೋಲು ಅನುಭವಿಸಿತು.

 

Leave a Reply

Your email address will not be published. Required fields are marked *

Back To Top