Monday, 25th September 2017  

Vijayavani

1. ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಅಬ್ಬರಿಸಿದ ವರುಣ- ಕೆರೆಯಂತಾಗಿದ್ದವು ಅಂಡರ್​ಪಾಸ್​- ಮೈಸೂರು ಬ್ಯಾಂಕ್​ ಸರ್ಕಲ್​ನಲ್ಲಿ ಪಲ್ಟಿಯಾಯ್ತು ವಾಹನ 2. ಇಂದು ದೀನ್​ ದಯಾಳ್​​ ಜನುಮ ದಿನ- ಲೋಕಾರ್ಪಣೆಗೊಳ್ಳಲಿದೆ ವಿದ್ಯುತ್​ ಭವನ- ಕುಸಿದ ಅರ್ಥವ್ಯವಸ್ಥೆಗೆ ಮೋದಿ ನೀಡ್ತಾರಾ ಟಾನಿಕ್​ 3. ಬಾರ್ಡರ್​ ವಿಸಿಟ್​ಗೆ ಹೊರಟ ಹೋಮ್​ ಮಿನಿಸ್ಟರ್​- ಸೆ.28 ರಿಂದ 4 ದಿನಗಳ ಪ್ಲಾನ್​- ಡೋಕ್ಲಾಂ ಪ್ರದೇಶಕ್ಕೆ ಮೊದಲ ಭೇಟಿ 4. ಜರ್ಮನಿ ಸಂಸತ್ತಿನ ಚುನಾವಣೋತ್ತರ ಸಮೀಕ್ಷೆ- ಮಾರ್ಕೆಲ್​ ಮತ್ತೆ ಚಾನ್ಸಲರ್​ ಆಗೋ ಸಾಧ್ಯತೆ- ಅಲ್ಟರ್​ನೇಟಿವ್​ ಜರ್ಮನಿಗಿಲ್ಲ ಮನ್ನಣೆ 5. 3ನೇ ಪಂದ್ಯದಲ್ಲೂ ಕಾಂಗರೂ ಪಡೆ ಉಡೀಸ್‌- ರೋಹಿತ್, ಪಾಂಡ್ಯ ಆಟಕ್ಕೆ ಆಸೀಸ್‌ ಪೀಸ್‌ ಪೀಸ್‌- ಟೀಂ ಇಂಡಿಯಾ ಪಾಲಾಯ್ತು ಸಿರೀಸ್‌
Breaking News :

ನಾನು ಗುಜರಾತ್‌ಗೆ ಹೊರಟೆ; ಆತಿಥ್ಯ ಸ್ವೀಕರಿಸಲು ಆಹ್ವಾನಿಸಿದ್ದಾರೆ

Saturday, 12.08.2017, 11:18 AM       No Comments

ರಾಯಚೂರು: ಗುಜರಾತ್​ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಗುಜರಾತ್​ ಕಾಂಗ್ರೆಸ್​ ಶಾಸಕರಿಗೆ ಸಚಿವ ಡಿ.ಕೆ. ಶಿವಕುಮಾರ್​ ಬೆಂಗಳೂರಿನಲ್ಲಿ ಭರ್ಜರಿ ಆತಿಥ್ಯ ನೀಡಿದ್ದರು. ಈಗ ಗುಜರಾತ್​ ಕಾಂಗ್ರೆಸ್​ ನಾಯಕರು ಡಿಕೆಶಿಗೆ ಗುಜರಾತ್​ಗೆ ಬರುವಂತೆ ಆಹ್ವಾನ ನೀಡಿದ್ದು, ಆತಿಥ್ಯ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.

ಆತಿಥ್ಯ ಸ್ವೀಕರಿಸಲು ಗುಜರಾತ್​ ಕಾಂಗ್ರೆಸ್​ ನಾಯಕರು ನನ್ನನ್ನು ಆಹ್ವಾನಿಸಿದ್ದಾರೆ. ಹಾಗಾಗಿ ನಾನು ಗುಜರಾತ್​ಗೆ ತೆರಳುತ್ತಿದ್ದೇನೆ. ನಾನು ಸಿಎಂ ಹುದ್ದೆ ಆಕಾಂಕ್ಷಿಯಲ್ಲ ಮತ್ತು ಗುಜರಾತ್​ ಚುನಾವಣೆಯ ಉಸ್ತುವಾರಿಯನ್ನು ನನಗೆ ವಹಿಸಿರಲಿಲ್ಲ. ಪಕ್ಷ ಕೊಟ್ಟ ಕೆಲಸವನ್ನು ಮಾತ್ರ ನಾನು ಮಾಡುತ್ತಿದ್ದೇನೆ ಎಂದು ಡಿ.ಕೆ. ಶಿವಕುಮಾರ್​ ರಾಯಚೂರಿನಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್​ ಉಪಾಧ್ಯಕ್ಷ ರಾಹುಲ್​ ಗಾಂಧಿ ಅವರು ರಾಯಚೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್​ ರಾಯಚೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು ರೈತರ ಪಂಪ್​ಸೆಟ್​ಗಳಿಗೆ ನಿರಂತರ ವಿದ್ಯುತ್​ ನೀಡಲು ಸಾಧ್ಯವಿಲ್ಲ. ವಿದ್ಯುತ್​ ಬೇಡಿಕೆ ಹೆಚ್ಚುವ ಸಾಧ್ಯತೆ ಇರುವುದರಿಂದ ವಿದ್ಯುತ್​ ಖರೀದಿಗೆ ಟೆಂಡರ್​ ಕರೆಯಲಾಗುತ್ತಿದೆ. ವಿದ್ಯುತ್​ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಟ ಉಪೇಂದ್ರ ರಾಜಕೀಯಕ್ಕೆ ಬಂದರೆ ಸ್ವಾಗತ ನೀಡುತ್ತೇವೆ. ಉಪೇಂದರ ಬಣ್ಣ ಹಚ್ಚಿ ಸಿನಿಮಾ ಮಾಡುತ್ತಿದ್ದರು, ಈಗ ಬಣ್ಣ ಹಚ್ಚದೆ ರಾಜಕೀಯ ಮಾಡಲಿ ಎಂದು ಉಪೇಂದ್ರ ರಾಜಕೀಯ ಪ್ರವೇಶದ ಕುರಿತ ಪ್ರಶ್ನೆಗೆ ಉತ್ತರಿಸಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top