Saturday, 24th March 2018  

Vijayavani

ಸಿಎಂ ತವರಿನಲ್ಲಿ AICC ಅಧ್ಯಕ್ಷರ ಸವಾರಿ- ಮೈಸೂರಿನಲ್ಲಿ ಎರಡು ದಿನ ರಾಹುಲ್ ರ‍್ಯಾಲಿ- ನಾಲ್ಕನೇ ಯಾತ್ರೆಗೆ ಸಜ್ಜಾಯ್ತು ಸಾಂಸ್ಕೃತಿಕ ನಗರಿ        ರಾಜ್ಯಸಭೆ ಚುನಾವಣೆ ಮುಗೀತಿದ್ದಂಗೆ ರಿಸೈನ್​ಗೆ ನಿರ್ಧಾರ- ಜೆಡಿಎಸ್​ಗೆ ರೆಬೆಲ್ಸ್ ಇಂದು ಗುಡ್​ಬೈ- ನಾಳೆ ರಾಹುಲ್​ ಸಮುಖದಲ್ಲಿ ಕೈಗೆ ಜೈ        ಫಲ್ಗುಣಿ ನದಿ ಒಡಲಿಗೆ ರಾಜರೋಷವಾಗಿ ಕನ್ನ- ಬೋಟ್​​ಗಟ್ಟಲೇ ಮರಳು ಲೂಟಿ- ಕಣ್ಣಿದ್ದು ಕುರುಡಾದ ಜಿಲ್ಲಾಡಳಿತ        ಜಿಲ್ಲಾ ಪಂಚಾಯತ್​​ನಲ್ಲೇ​​ ಶುರುವಾಗಿದೆ ನೀರಿಗೆ ಬರ- ಮಳೆನೀರು ಕೊಯ್ಲು ಅಳವಡಿಸಿದ್ರೂ ಜೀವಜಲಕ್ಕೆ ತತ್ವಾರ- ಧಾವಾಡ ZP ಕಚೇರಿಯಲ್ಲಿ ಇದೆಂಥ ನರಕ        ರಜನಿಕಾಂತ್ ಓದಿದ ಶಾಲೆಗೆ ನ್ಯೂ ಲುಕ್​- ಖಾಸಗಿ ಶಾಲೆಗೂ ಸೆಡ್ಡು ಹೊಡೆಯುತ್ತೆ ಫೆಸಿಲಿಟೀಸ್- ಸೂಪರ್ ಶಾಲೆ ಇಂದು ಉದ್ಘಾಟನೆ       
Breaking News

ಎಂಡೋ ಪೀಡಿತರಿಗೆ ಪರಿಹಾರ: ಹೈಕೋರ್ಟ್​​ ಆದೇಶ ಗಾಳಿಗೆ ತೂರಿದ ಸರ್ಕಾರ

Tuesday, 13.03.2018, 7:57 PM       No Comments

<< ದಿಗ್ವಿಜಯ ರಿಯಾಲಿಟಿ ಚೆಕ್​ನಲ್ಲಿ ಎಂಡೋ ಪೀಡಿತರ ನಿರ್ಲಕ್ಷ್ಯ ಬಯಲು >>

ಮಂಗಳೂರು: ದಿಗ್ವಿಜಯ ರಿಯಾಲಿಟಿ ಚೆಕ್​ನಲ್ಲಿ ಎಂಡೋಸಲ್ಫಾನ್ ಪೀಡಿತರ ಸಂಕಷ್ಟಗಳು ಒಂದೊಂದಾಗಿ ಬಯಲಾಗುತ್ತಿದ್ದು, ಸರ್ಕಾರ ಸೂಕ್ತ ಪರಿಹಾರವನ್ನೇ ನೀಡದೆ ಎಂಡೋ ಪೀಡಿತರ ಬದುಕು ನರಕಮಯವಾಗಿದೆ.

ರಾಜ್ಯದಲ್ಲಿ ಸುಮಾರು 10 ಸಾವಿರಕ್ಕಿಂತ ಹೆಚ್ಚು ಎಂಡೋ ಸಲ್ಫಾನ್‌ ಸಂತ್ರಸ್ತರಿದ್ದು, ಸರ್ಕಾರ ಈ ಹಿಂದೆ ಕೇವಲ 7.5 ಸಾವಿರ ಜನರನ್ನು ಮಾತ್ರ ಗುರುತಿಸಿತ್ತು. ಎಂಡೋ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಹೈಕೋರ್ಟ್‌ ಆದೇಶವಿದ್ದರೂ ಕ್ಯಾರೆ ಎನ್ನದ ಸರ್ಕಾರ ಪರಿಹಾರ ನೀಡಿದ್ದೇವೆ ಎಂದು ಹೈಕೋರ್ಟ್‌ಗೆ ಸುಳ್ಳು ಹೇಳಿದೆ. ಈ ಮೂಲಕ ಹೈಕೋರ್ಟ್ ಮಧ್ಯಂತರ ಆದೇಶವನ್ನು ಗಾಳಿಗೆ ತೂರಿದೆ.

ಹೈಕೋರ್ಟ್ ಆದೇಶದಲ್ಲೇನಿದೆ?

# ತಿಂಗಳ ಮೊದಲ ವಾರದಲ್ಲಿ ಮಾಶಾಸನ ನೀಡಬೇಕು

# ಬಾಕಿ ಉಳಿದ ಎಂಡೋ ಸಂತ್ರಸ್ತರನ್ನು ಗುರುತಿಸುವಿಕೆ

# ತಜ್ಞ ವೈದ್ಯರಿಂದ ವೈದ್ಯಕೀಯ ಶಿಬಿರ ನಡೆಸುವುದು

# ಖಾಸಗಿ ಆಸ್ಪತ್ರೆಗಳಲ್ಲೂ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ

# ಎಂಡೋ ಸಂತ್ರಸ್ತರಿಗೆ ಉಚಿತ ಬಸ್ ಪಾಸ್

# ಅಗತ್ಯಬಿದ್ದ ಸ್ಥಳಗಳಲ್ಲಿ ಡೇ ಕೇರ್ ಸೆಂಟರ್

# ಎಲ್ಲ ಸಂತ್ರಸ್ತರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ

ಹೀಗೆ ಹೈಕೋರ್ಟ್‌ ಕೂಡ ತನ್ನ ಆದೇಶದಲ್ಲಿ ಎಂಡೋ ಪೀಡಿತರಿಗೆ ದೊರಕಬೇಕಿರುವ ಸೌಲಭ್ಯಗಳ ಕುರಿತು ಸ್ಪಷ್ಟವಾಗಿ ಹೇಳಿದ್ದರೂ ಸರ್ಕಾರ ಮಾತ್ರ ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ.

ಆದರೆ, ಸರ್ಕಾರ ತನ್ನ ನಡವಳಿಕೆಯಲ್ಲಿ ಎಂಡೋ ಸಲ್ಫಾನ್ ಪೀಡಿತರನ್ನು ಗುರುತಿಸಿರುವುದು, ಸ್ಮಾರ್ಟ್ ಕಾರ್ಡ್ ನೀಡುವ ಮುಖಾಂತರ ಉಚಿತ ವೈದ್ಯಕೀಯ ಸೇವೆ, ಅಂಗವಿಕಲತೆ ಹೊಂದಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವಾಹನದ ವ್ಯವಸ್ಥೆ, ಮೊಬೈಲ್ ಮೆಡಿಕಲ್ ಯುನಿಟ್ ನೀಡಿಕೆ ಮತ್ತು ಉಚಿತ ಆಹಾರವನ್ನು ನೀಡುವ ಕುರಿತು ಹೈಕೋರ್ಟ್‌ಗೆ ಹೇಳಿದೆ.

ಸರ್ಕಾರ ಅಂದು ಮಾಡಿದ ತಪ್ಪಿನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ ಸಾವಿರಾರು ಮಂದಿ ಎಂಡೋಪೀಡಿತರಾಗಿದ್ದಾರೆ. ಸರಿಯಾದ ಆಹಾರ, ವಸತಿ, ಔಷಧ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಜಿಲ್ಲೆಯ ಪ್ರಸಿದ್ಧ ಖಾಸಗಿ ಆಸ್ಪತ್ರೆಗಳಲ್ಲಿ ಎಂಡೋ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ದೊರೆಯುತ್ತಿಲ್ಲ. ಆದರೆ, ಕೇರಳದ ಎಂಡೋ ಸಂತ್ರಸ್ತರು ಮಾತ್ರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top