Friday, 23rd March 2018  

Vijayavani

Breaking News

ಶೋಚನೀಯ: ಈ ಆಫೀಸ್​ನಲ್ಲಿ ಕೆಲಸ ಮಾಡೋರಿಗೆ ಹೆಲ್ಮೆಟ್​ ಕಡ್ಡಾಯ

Monday, 17.07.2017, 7:59 AM       No Comments

ಪಟನಾ: ಬೈಕ್​ ಓಡಿಸುವಾಗಿ ತಲೆಗೆ ಹೆಲ್ಮೆಟ್​ ಧರೀಸೋದು ಸಾಮಾನ್ಯ. ಆದರೆ ಬಿಹಾರದ ಸರ್ಕಾರಿ ಕಚೇರಿಯೊಂದರ ಕೆಲಸಗಾರರು ಬೈಕ್​ ಓಡಿಸುವಾಗ ಮಾತ್ರವಲ್ಲದೆ, ಆಫೀಸ್​ನಲ್ಲಿ ಕೆಲಸ ಮಾಡುವಾಗಲೂ ಹೆಲ್ಮೆಟ್​ ಧರಿಸಬೇಕಿದೆ.

ಹೌದು ಪೂರ್ವ ಚಂಪಾರಣ್​ ಜಿಲ್ಲೆಯ ಸರ್ಕಾರಿ ಕಚೇರಿಯ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರ್​ ಶಿಥಿಲಗೊಂಡಿದ್ದು, ಯಾವಾಗ ಬೇಕಾದರೂ ಬೀಳುವಂತಿದೆ. ಹಲವು ಬಾರಿ ಮೇಲ್ಛಾವಣಿಯಿಂದ ಪ್ಲಾಸ್ಟರ್​ ಕಿತ್ತು ತಲೆಯ ಮೇಲೆ ಹಲವರು ಗಾಯಗೊಂಡಿದ್ದಾರೆ. ಹೀಗಾಗಿ ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ತಮ್ಮ ತಲೆಗೆ ಹೆಲ್ಮಟ್​ ಧರಿಸಿ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಮಳೆ ಬಂದರಂತೂ ಕಟ್ಟಡದ ಮೇಲ್ಛಾವಣಿ ಸಂಪೂರ್ಣವಾಗಿ ಸೋರುತ್ತದೆ. ಇದರಿಂದಾಗಿ ಅಲ್ಲಿರುವ ದಾಖಲೆಗಳು ಮತ್ತು ಕಂಪ್ಯೂಟರ್​ ಹಾಳಾಗುತ್ತಿದೆ. 2 ವರ್ಷದ ಹಿಂದೆಯೇ ಈ ಕಟ್ಟಡದ ಬಳಕೆಗೆ ಯೋಗ್ಯವಲ್ಲ ಎಂದು ವರದಿ ನೀಡಲಾಗಿದೆ. ಆದರೂ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣದಿಂದ ಇಲ್ಲಿನ ಸಿಬ್ಬಂದಿ ಜೀವವನ್ನು ಕೈಯಲ್ಲಿ ಹಿಡಿದು ಕೆಲಸ ಮಾಡುತ್ತಿದ್ದಾರೆ.

– ಏಜೆನ್ಸೀಸ್​

Leave a Reply

Your email address will not be published. Required fields are marked *

Back To Top